ADVERTISEMENT

ಕಾರವಾರ | ಯುದ್ಧವಿಮಾನ ವಾಹಕ ನೌಕೆಗಳ ಜಂಟಿ ಸಂಚಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 19:35 IST
Last Updated 10 ಜೂನ್ 2023, 19:35 IST
ಅರಬ್ಬಿ ಸಮುದ್ರದಲ್ಲಿ ಜಂಟಿಯಾಗಿ ಸಂಚರಿಸುತ್ತಿರುವ ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್.
ಅರಬ್ಬಿ ಸಮುದ್ರದಲ್ಲಿ ಜಂಟಿಯಾಗಿ ಸಂಚರಿಸುತ್ತಿರುವ ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್.    –ಟ್ವಿಟರ್ ಚಿತ್ರ

ಕಾರವಾರ: ಜೂನ್ 3ರಂದು ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಯುದ್ಧವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಹಾಗೂ ಐಎನ್ಎಸ್ ವಿಕ್ರಾಂತ್ ಜಂಟಿಯಾಗಿ ಸಾಗುತ್ತಿರುವ ಉಪಗ್ರಹ ಚಿತ್ರವನ್ನು ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ.

35ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊತ್ತು ಸಹ ನೌಕೆಗಳೊಂದಿಗೆ ಸಾಗುತ್ತಿರುವ ಚಿತ್ರ ಹಂಚಿಕೊಂಡಿರುವ ನೌಕಾಪಡೆ, ‘ಇದು ನೌಕಾಪಡೆಯ ಸನ್ನದ್ಧತೆ ಮತ್ತು ಬದ್ಧತೆಯ ಪ್ರದರ್ಶನ’ ಎಂದಿದೆ.

ನೌಕಾ ಆಸ್ತಿಗಳ ಕಾರ್ಯಾಚರಣೆಯ ಸಿದ್ಧತೆ ಮತ್ತು ಸಾಮರ್ಥ್ಯ ನಿರ್ಣಯಿಸಲು ನೌಕಾದಳದ ಪಶ್ಚಿಮ ಕಮಾಂಡ್ ಸಮಗ್ರ ತಪಾಸಣೆಯನ್ನು ಕೈಗೊಂಡಿದ್ದ ವೇಳೆ ಈ ದೃಶ್ಯಗಳು ಸೆರೆಯಾಗಿದ್ದವು.

ADVERTISEMENT

‘ಸಂಭಾವ್ಯ ಬೆದರಿಕೆಗಳು ಅಥವಾ ಆಕಸ್ಮಿಕಗಳಿಗೆ ಪ್ರತಿಕ್ರಿಯಿಸಲು ನೌಕಾದಳ ಸಂಪೂರ್ಣವಾಗಿ ಸಜ್ಜುಗೊಂಡಿದೆ ಮತ್ತು ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಂತಹ ತಪಾಸಣೆ ನಡೆಸಲಾಗಿದೆ’ ಎಂದು ನೌಕಾದಳ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.