ADVERTISEMENT

ಅಂತರರಾಷ್ಟ್ರೀಯ ಆಭರಣ ಪ್ರದರ್ಶನ: ₹ 50 ಸಾವಿರ ಕೋಟಿ ವಹಿವಾಟು ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 20:38 IST
Last Updated 19 ಮಾರ್ಚ್ 2023, 20:38 IST
ಮುತ್ತು ಹಾಗೂ ಆಭರಣ ಪ್ರದರ್ಶನಕ್ಕೆ ಸಚಿವ ಮುರುಗೇಶ್‌ ಆರ್‌. ನಿರಾಣಿ ಅವರು ಚಾಲನೆ ನೀಡಿದರು.
ಮುತ್ತು ಹಾಗೂ ಆಭರಣ ಪ್ರದರ್ಶನಕ್ಕೆ ಸಚಿವ ಮುರುಗೇಶ್‌ ಆರ್‌. ನಿರಾಣಿ ಅವರು ಚಾಲನೆ ನೀಡಿದರು.   

ಬೆಂಗಳೂರು: ಮುತ್ತು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ವತಿಯಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ಅಂತರರಾಷ್ಟ್ರೀಯ ಆಭರಣ ಪ್ರದರ್ಶನ (ಐಐಜೆಎಸ್ ತೃತೀಯ) ಶುಕ್ರವಾರದಿಂದ ಆರಂಭಗೊಂಡಿತು.

ಪ್ರದರ್ಶನಕ್ಕೆ ಚಾಲನೆ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ಆರ್. ನಿರಾಣಿ ಅವರು, ‘ರಾಜ್ಯವು ಬಹುಅವಕಾಶಗಳನ್ನು ಹೊಂದಿರುವ ರಾಜ್ಯ. ದಕ್ಷಿಣ ಭಾರತದ ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಕೇಂದ್ರ ಬೆಂಗಳೂರು. ತಂತ್ರಜ್ಞಾನ, ಐ.ಟಿ ಸೇವೆಗಳು, ಸಾಫ್ಟ್‌ವೇರ್‌, ಏರೊಸ್ಪೇಸ್‌, ರಕ್ಷಣೆ, ಎಲೆಕ್ಟ್ರಾನಿಕ್ ಉತ್ಪಾದನಾ ಸೇವೆಗಳು, ಮೊಬೈಲ್ ಹ್ಯಾಂಡ್‍ಸೆಟ್‍ಗಳು ಮತ್ತು ಸೆಮಿ ಕಂಡಕ್ಟರ್‌ ಕ್ಷೇತ್ರದಲ್ಲಿ ರಾಜ್ಯವು ಗಣನೀಯ ಕೊಡುಗೆ ನೀಡುತ್ತಿದೆ. ಮುತ್ತು ಮತ್ತು ಆಭರಣ ವ್ಯವಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ₹50 ಸಾವಿರ ಕೋಟಿ ವಹಿವಾಟು ನಿರೀಕ್ಷೆಯಿದೆ’ ಎಂದು ಹೇಳಿದರು.

ಕಲ್ಯಾಣ್ ಜ್ಯುವೆಲರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್.ಕಲ್ಯಾಣರಾಮನ್ ಮಾತನಾಡಿ, ‘ಮುತ್ತು ಮತ್ತು ಆಭರಣ ವ್ಯವಹಾರವು ನಿರಂತರವಾಗಿ ವಿಕಸನಗೊಳ್ಳುತ್ತಿದೆ’ ಎಂದು ಹೇಳಿದರು.

ADVERTISEMENT

ಜಿಜೆಇಪಿಸಿ ಅಧ್ಯಕ್ಷ ವಿಪುಲ್ ಷಾ, ಏಪ್ರಿಲ್ 2022ರಿಂದ ಫೆಬ್ರುವರಿ 2023ರವರೆಗೆ ರಾಜ್ಯವು ಮುತ್ತು ಮತ್ತು ಆಭರಣದ ರಫ್ತಿನಲ್ಲಿ ಶೇ 169ರಷ್ಟು ಬೆಳವಣಿಗೆ ಕಂಡಿದೆ ಎಂದರು.

800ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ 1,500ಕ್ಕೂ ಹೆಚ್ಚು ಮಳಿಗೆಗಳು ಪ್ರದರ್ಶನದಲ್ಲಿವೆ.

ಜಿಜೆಇಪಿಸಿ ಉಪಾಧ್ಯಕ್ಷ ಕಿರಿತ್ ಬನ್ಸಾಲಿ, ವಾಣಿಜ್ಯ ಇಲಾಖೆಯ ನಿರ್ದೇಶಕರಾದ ಆರ್‌.ಅರುಳಾನಂದನ್, ಜ್ಯುವೆಲ್ಲರ್ಸ್ ಅಸೋಸಿಯಷನ್ ಬೆಂಗಳೂರು ಅಧ್ಯಕ್ಷ ಸುರೇಶ್ ಕುಮಾರ್ ಗನ್ನಾ, ಸಂಚಾಲಕ ನೀರವ್ ಬನ್ಸಾಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.