ADVERTISEMENT

ಬೆಂಗಳೂರು: ಖಗೋಳ ವಿಸ್ಮಯಕ್ಕೆ ಅಡ್ಡಿಯಾದ ಮಳೆ, ಮೋಡ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 23:56 IST
Last Updated 3 ಜೂನ್ 2024, 23:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಖಗೋಳದ ಅಪರೂಪದ ವಿದ್ಯಮಾನ ಎನಿಸಿರುವ ‘ತಾರೆಗಳ ಮೆರವಣಿಗೆ’ (ಪ್ಲಾನಿಟರಿ ಪರೇಡ್‌) ವೀಕ್ಷಣೆಗೆ ಮಳೆ ಮತ್ತು ಮೋಡ ಅಡ್ಡಿಯಾಯಿತು.

ಇದರ ವೀಕ್ಷಣೆಗಾಗಿ ಬೆಂಗಳೂರಿನ ಜವಾಹರಲಾಲ್‌ ನೆಹರೂ ತಾರಾಲಯವು ಟೆಲಿಸ್ಕೋಪ್‌ ಮತ್ತು ಬೈನಾಕ್ಯುಲರ್‌ಗಳ ವ್ಯವಸ್ಥೆ ಮಾಡಿಕೊಂಡಿತ್ತು. ಆದರೆ, ಮುಂಜಾನೆ ಮೋಡ ಮತ್ತು ಮಳೆಯಿಂದಾಗಿ ಬಾಹ್ಯಾಕಾಶ ವೀಕ್ಷಣೆ ಸಾಧ್ಯವಾಗಲಿಲ್ಲ. ಇದರಿಂದ ಖಗೋಳ ವೀಕ್ಷಕರಿಗೆ ನಿರಾಸೆ ಉಂಟಾಯಿತು. ಮಳೆ ಹೆಚ್ಚಾಗಿದ್ದ ಕಾರಣ, ಕೆಲವೇ ಆಸಕ್ತರು ತಾರಾಲಯಕ್ಕೆ ಬಂದಿದ್ದರು. 

ADVERTISEMENT

‘ನಮ್ಮ ಸೌರ ಮಂಡಲದಲ್ಲಿ ಆರು ಗ್ರಹಗಳು ಒಂದೇ ಸಾಲಿನಲ್ಲಿ ಸೇರುವ ವಿದ್ಯಮಾನ ಅತಿ ವಿರಳ. ನೆಪ್ಚೂನ್‌ ಮತ್ತು ಯುರೇನಸ್‌ ಬರಿಗಣ್ಣಿಗೆ ಕಾಣುವುದಿಲ್ಲ. ಇದನ್ನು ವೀಕ್ಷಿಸಲೆಂದು ಟೆಲಿಸ್ಕೋಪ್‌ ಮತ್ತು ಬೈನಾಕ್ಯುಲರ್‌ಗಳ ವ್ಯವಸ್ಥೆ ಮಾಡಲಾಗಿತ್ತು’ ಎಂದು ತಾರಾಲಯ ನಿರ್ದೇಶಕ ಬಿ.ಆರ್‌.ಗುರುಪ್ರಸಾದ್‌ ತಿಳಿಸಿದರು.

ಒಂದು ವೇಳೆ ಮಳೆ ಇಲ್ಲದಿದ್ದರೂ ಬೆಂಗಳೂರಿನಲ್ಲಿ ಮಾಲಿನ್ಯ ಮತ್ತು ಅತಿಯಾದ ಬೆಳಕು ಇರುವ ಕಾರಣಕ್ಕೆ ಮುಂಜಾನೆಯ ವೇಳೆ ತಿಳಿ ಆಕಾಶದಲ್ಲಿನ ಕಾಯಗಳನ್ನು ನೋಡುವುದು ಕಷ್ಟ. ಆದರೂ ವ್ಯವಸ್ಥೆ ಮಾಡಿದ್ದೆವು. ಇವತ್ತು(ಜೂ 3) ಎಲ್ಲ ಗ್ರಹಗಳು ಒಂದೇ ಸಾಲಿನಲ್ಲಿ ಇದ್ದವು. ಕ್ರಮೇಣ ಅವರು ಸರಿದು ಹೋಗುತ್ತವೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.