ವಿಜಯಪುರ: ಜನತಾ ಪರಿವಾರದಿಂದ ಬಂದವರು ಮೂಲ ಬಿಜೆಪಿಗರಲ್ಲ ಎಂಬ ಭಾವನೆ ಕೆಲವು ಬಿಜೆಪಿ ನಾಯಕರಲ್ಲಿದೆ. ಅದು ತಪ್ಪು. ಕೇವಲ ಸಂಘ-ಪರಿವಾರದಲ್ಲಿದ್ದವರು ಮಾತ್ರ ಬಿಜೆಪಿಯವರಾ? ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ನಾವೆಲ್ಲ ಬಿಜೆಪಿಗೆ ಬಂದು 17 ವರ್ಷಗಳಾಗಿವೆ. ಅಧಿಕಾರಕ್ಕಾಗಿ ನಾವು ಬಿಜೆಪಿಗೆ ಬಂದಿಲ್ಲ. ಪಕ್ಷದ ಸಿದ್ಧಾಂತ, ವಾಜಪೇಯಿ ಹಾಗೂ ಅಡ್ವಾಣಿ ಅವರ ನಾಯಕತ್ವ ನೋಡಿಕೊಂಡು ಬಿಜೆಪಿಗೆ ಸೇರಿದ್ದೇವೆ’ ಎಂದು ಅವರು ತಿಳಿಸಿದರು.
ಜನತಾ ಪರಿವಾರದಿಂದ ಬಂದವರು ಮೂಲ ಬಿಜೆಪಿಗರಲ್ಲ ಎಂಬ ವಕ್ರ ಧೋರಣೆ ಕೈಬಿಡದಿದ್ದರೆ ಪಕ್ಷ ಹಾಳಾಗುತ್ತದೆ ಎಂದು ಎಚ್ಚರಿಸಿದರು.
ಮುಂದಿನ ಚುನಾವಣೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದಕ್ಕೆ ಬಿಜೆಪಿಯ ಕೆಲ ಮುಖಂಡರು ಮತ್ತು ಕೆಲವು ಸಚಿವರು ಅಪಸ್ವರ ಎತ್ತಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.