ADVERTISEMENT

ಸಿ.ಎಂ ಗಮನಕ್ಕೆ ತರದೇ ತೀರ್ಮಾನ ಸಾಧ್ಯವೇ? ಡಿಕೆಶಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 16:20 IST
Last Updated 27 ಸೆಪ್ಟೆಂಬರ್ 2024, 16:20 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಹಾಗೂ ಸಂಪುಟ ಸಭೆಯ ಗಮನಕ್ಕೆ ತರದೇ ಯಾವುದೇ ತೀರ್ಮಾನ ತೆಗದುಕೊಳ್ಳಲು ಸಾಧ್ಯವೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಸಂಪುಟದ ಗಮನಕ್ಕೆ ಬಂದ ನಂತರವೇ ಮುಖ್ಯ ಕಾರ್ಯದರ್ಶಿ ಮೂಲಕ ರಾಜ್ಯಪಾಲರಿಗೆ ಉತ್ತರ ತಲುಪಲಿದೆ ಎಂದರು.

ADVERTISEMENT

‘ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣದ ಮಾಹಿತಿ ಕೇಳಿದ ಕಡತ ನನ್ನ ಕಚೇರಿಗೆ ಬಂದಿತ್ತು. ಬೇರೆಯವರಿಗೆ ಉತ್ತರ ಕೊಡುವ ಅಗತ್ಯವಿಲ್ಲ, ಸಂಪುಟ ಉಪ ಸಮಿತಿಗೆ ಕಳುಹಿಸಿ ಎಂದು ಸೂಚಿಸಿದ್ದೆ’ ಎಂದು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.