ADVERTISEMENT

ಐಟಿ, ಇಡಿ ಪಕ್ಷ ನೋಡಿಕೊಂಡು ದಾಳಿ ನಡೆಸಲ್ಲ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 13:08 IST
Last Updated 6 ಆಗಸ್ಟ್ 2021, 13:08 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಮಡಿಕೇರಿ: ‘ಆದಾಯ ತೆರಿಗೆ (ಐ.ಟಿ) ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಸ್ವಾಯತ್ತ ಸಂಸ್ಥೆಗಳು. ಅಲ್ಲಿನ ಅಧಿಕಾರಿಗಳು, ಪಕ್ಷ ನೋಡಿಕೊಂಡು ದಾಳಿ ನಡೆಸುವುದಿಲ್ಲ. ಯಾರು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಾರೆಯೋ ಅವರ ಮೇಲೆಷ್ಟೇ ದಾಳಿ ನಡೆಸುತ್ತಾರೆ’ ಎಂದು ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಇಲ್ಲಿ ಹೇಳಿದರು.

‘ಬಿಜೆಪಿಯವರು ಅಕ್ರಮವಾಗಿ ಹಣ ಸಂಪಾದಿಸಿದ್ದರೆ, ಅವರ ಮೇಲೆಯೂ ದಾಳಿ ಆಗಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರ ಮನೆಯ ಮೇಲೆ ಇ.ಡಿ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ ಅಲ್ಲ. ಆ ದಾಳಿಗೂ ಸರ್ಕಾರಕ್ಕೂ ಸಂಬಂಧ ಸಲ್ಲ. ತಪ್ಪುಗಳನ್ನು ಕಾಂಗ್ರೆಸ್‌ ಮುಖಂಡರು ಸಮರ್ಥಿಸುವುದು ಸರಿಯಲ್ಲ. ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಸಚಿವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.