ಬೆಂಗಳೂರು:‘ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಶುದ್ಧ ಸುಳ್ಳು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.
ಲಿಂಗಾಯತ ಮಠಾಧೀಶರ ಒಕ್ಕೂಟ, ಲಿಂಗಾಯತ ಧರ್ಮಮಹಾಸಭೆ ಮತ್ತು ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಸಮಿತಿ, ಬಸವ ಧರ್ಮ ಪ್ರತಿಷ್ಠಾನಗಳ ಪದಾಧಿಕಾರಿಗಳು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು, ಡಂಬಳ ತೋಂಟಾದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾದ ಗಂಗಾ ಮಾತಾಜಿ, ಬಸವ ಧರ್ಮ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ, ಮೈಸೂರಿನ ನೀಲಕಂಠ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಅಥಣಿಯ ಚನ್ನಬಸವಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ.ಜಾಮದಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಅನುಭವ ಮಂಟಪದ ವಿವಾದ ಇದೇ ಮೊದಲಲ್ಲ. ಬೀದರ್‌ನಲ್ಲಿ ಎಂಟು ಸ್ಥಳಗಳಲ್ಲಿ ಅನುಭವ ಮಂಟಪ ಇತ್ತು ಎಂದು ಹೇಳುತ್ತಾರೆ.ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಮುಖ್ಯಾಧಿಕಾರಿಯಾಗಿ 8 ವರ್ಷ ಕೆಲಸ ಮಾಡಿದ್ದರಿಂದ ಈ ಎಲ್ಲಾ ಸ್ಥಳಗಳನ್ನೂ ಪರಿಶೀಲನೆ ಮಾಡಿದ್ದೇವೆ. ಅನುಭವ ಮಂಟಪ ಎಂಬುದು ಬೇರೆಲ್ಲೂ ಇರಲಿಲ್ಲ. ಬಸವಣ್ಣನವರ ಮಹಾಮನೆಯೇ ಅನುಭವ ಮಂಟಪ ಎಂಬುದು ಪಾಟೀಲ ಪುಟ್ಟಪ್ಪ, ಎಂ.ಎಂ. ಕಲಬುರ್ಗಿ ಅವರನ್ನು ಒಳಗೊಂಡ ಸಮಿತಿ ಕೊಟ್ಟಿರುವ ವರದಿಯಲ್ಲಿದೆ. ಆದ್ದರಿಂದ ಇದನ್ನು ವಿವಾದವಾಗಿಸುವ ಅಗತ್ಯವಿಲ್ಲ’ ಎಂದುಜಾಮದಾರ್ ಸ್ಪಷ್ಟಪಡಿಸಿದರು.
‘ಯಾವ ಕಾರಣಕ್ಕೆ ಈ ವದಂತಿ ಹಬ್ಬಿಸಲಾಗುತ್ತಿದೆ ಎಂಬುದು ಗೊತ್ತಿಲ್ಲ. ಸತ್ಯವನ್ನು ಯಾರೂ ತಿರುಚಲು ಆಗುವುದಿಲ್ಲ’ ಎಂದು ಬಾಲ್ಕಿಮಠದ ಬಸವಲಿಂಗ ಪಟ್ಟದ ದೇವರು ಹೇಳಿದರು.
ಇವನ್ನೂ ಓದಿ
*ಪೀರ್ ಪಾಷಾ ಬಂಗಲೆ ಹಿಂದೂಗಳಿಗೆ ಸೇರಲಿ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
*ಬೀದರ್: ಬಸವಕಲ್ಯಾಣದ ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳು...
*ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲೂ ಮಸೀದಿ ವಿವಾದ: ಅನುಭವ ಮಂಟಪದ ಕುರುಹು ಪತ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.