ADVERTISEMENT

ಇ.ಡಿ ಡೀಲ್‌: ಸಿಸಿಬಿ ಪೊಲೀಸರಿಂದ ಜನಾರ್ದನ ರೆಡ್ಡಿ ಬಂಧನ

ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 11:10 IST
Last Updated 11 ನವೆಂಬರ್ 2018, 11:10 IST
   

ಬೆಂಗಳೂರು:‘ಇ.ಡಿ ಡೀಲ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಚೇರಿಯಲ್ಲಿ ಶನಿವಾರ ತಡ ರಾತ್ರಿಯವರೆಗೂಗಾಲಿ ಜನಾರ್ದನ ರೆಡ್ಡಿ ವಿಚಾರಣೆ ನಡೆಸಿರುವ ಪೊಲೀಸರು,ಇ.ಡಿ ಡೀಲ್ ಹಾಗೂ ವಂಚನೆ ಪ್ರಕರಣ ಸಂಬಂಧ ಸೂಕ್ತ ಪುರಾವೆಗಳನ್ನು ಸಂಗ್ರಹಿಸಿಭಾನುವಾರ ಮಧ್ಯಾಹ್ನ ಗಾಲಿ ಜನಾರ್ದನರೆಡ್ಡಿ ಹಾಗೂ ಆತನ ಆಪ್ತ ಆಲಿ ಖಾನ್‌ನ್ನು ಬಂಧಿಸಿದ್ದಾರೆ.

‘ಶನಿವಾರ ವಿಚಾರಣೆ ಮಾಡಿದ್ದೇವೆ. ತಡ ರಾತ್ರಿ ವರೆಗೂ ಸಾಕ್ಷಿಗಳ ಪರಿಶೀಲನೆ ಮಾಡಿದ್ದು, ದಸ್ತಗಿರಿ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ. ವೈದ್ಯಕೀಯ ಪರೀಕ್ಷೆಯ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದೇವೆ.ಕೇಂದ್ರ ತನಿಖಾ ತಂಡದ ಹೆಸರು ಬಳಸಿ₹20 ಕೋಟಿ ಹಣ ವಂಚನೆಗೆ ಸಂಬಂಧಿಸಿದಂತೆ; ಹಣ ಲಪಟಾಯಿಸಿರುವಕುರಿತು ಸಾಕ್ಷಿಗಳು ಇದ್ದು, ಹಣವನ್ನು ಮರುಪಡೆಯಲು ಸೂಕ್ತ ಕ್ರಮವನ್ನು ವಹಿಸಿದ್ದೇವೆ’ ಎಂದುಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಬಂಧನಖಚಿತ ಪಡಿಸಿದರು.

ಸದ್ಯ ಸಿಸಿಬಿ ಕಚೇರಿಯಲ್ಲಿರುವ ರೆಡ್ಡಿಯನ್ನು ಪೊಲೀಸರು, ಕೆಲವೇ ನಿಮಿಷಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಿದ್ದಾರೆ. ನಂತರ, ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಲಿದ್ದಾರೆ. ಪುನಃ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.