ADVERTISEMENT

ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿ, ರಾಜ್ಯ ದಿವಾಳಿ: ಜೆಡಿಎಸ್ ಆರೋಪ

ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಡಿಯೊ ಹಂಚಿಕೊಂಡ ಜೆಡಿಎಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2024, 14:23 IST
Last Updated 11 ಸೆಪ್ಟೆಂಬರ್ 2024, 14:23 IST
<div class="paragraphs"><p>ಜೆಡಿಎಸ್ ( ಸಾಂಕೇತಿಕ ಚಿತ್ರ)</p></div>

ಜೆಡಿಎಸ್ ( ಸಾಂಕೇತಿಕ ಚಿತ್ರ)

   

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿ ರಾಜ್ಯ ದಿವಾಳಿಯಾಗಿದೆ ಎಂದು ಜೆಡಿಎಸ್ ಟೀಕಿಸಿದೆ.

ಈ ಕುರಿತು ಇಂದು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ‘ಬೊಕ್ಕಸ ಖಾಲಿ ಖಾಲಿ, ಕಾಂಗ್ರೆಸ್ ಸರ್ಕಾರ ದಿವಾಳಿ.. ಫ್ರೀ ಫ್ರೀ ಫ್ರೀ ಎಂದು ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಬೊಕ್ಕಸವನ್ನು ಬರಿದು ಮಾಡಿದ್ದೇ ಒಂದೂವರೆ ವರ್ಷಗಳ ದೊಡ್ಡ ಸಾಧನೆ. ಯಾವುದೇ ಯೋಜನೆಗಳನ್ನು ಜಾರಿಗೊಳಿಸಬೇಕಾದರೆ ಅವುಗಳ ಸಾಧಕ-ಬಾಧಕಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕು.. ಆದರೆ ಕಾಂಗ್ರೆಸ್ ತನ್ನ ಅಧಿಕಾರದಾಹಕ್ಕೆ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈಗ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲದಂತೆ ಖಾಲಿ ಮಾಡಿದೆ. ರಾಜ್ಯದಲ್ಲಿ ಯಾವುದೇ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಲು "ಕೈ"ಲಾಗದ ಸ್ಥಿತಿಗೆ ಬಂದಿದೆ‘ ಎಂದು ಆರೋಪಿಸಿದೆ.

ADVERTISEMENT

ಕಾಂಗ್ರೆಸ್ ಬೆಂಬಲಿತ ಶಾಸಕರೇ ಖಜಾನೆಯಲ್ಲಿ ಹಣವಿಲ್ಲ, ಅಭಿವೃದ್ಧಿ ಸಾಧ್ಯವಿಲ್ಲ ಎಂದು ಬೇಸರ ಹೊರಹಾಕಿರುವುದು ಸರ್ಕಾರದ ದುರಾಡಳಿತದ ಸತ್ಯ ದರ್ಶನ ಮಾಡಿಸುತ್ತಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಅವರ ವಿಡಿಯೊ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.