ADVERTISEMENT

‘ಸುಮಲತಾ ಮಾಟಗಾತಿಯಾ?’: ಶಾಸಕ ರವೀಂದ್ರ ಶ್ರೀಕಂಠಯ್ಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 19:30 IST
Last Updated 10 ಜುಲೈ 2021, 19:30 IST
ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸಂಸದೆ ಸುಮಲತಾ ಅಂಬರೀಶ್‌
ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸಂಸದೆ ಸುಮಲತಾ ಅಂಬರೀಶ್‌   

ಶ್ರೀರಂಗಪಟ್ಟಣ: ‘ಭಸ್ಮ ಆಗಲಿ ಎಂದು ನನಗೆ ಶಾಪ ಹಾಕಿರುವ ಸಂಸದೆ ಸುಮಲತಾ ಕೊಳ್ಳೆಗಾಲಕ್ಕೆ ಹೋಗಿ ನನ್ನ ವಿರುದ್ಧ ಮಾಟ ಮಾಡಿಸುವ ಮಾಟಗಾತಿಯಾ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ತಾಲ್ಲೂಕಿನ ಅರಕೆರೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ಟ್ಯಾಬ್‌ಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಂಬರೀಷ್ ಬೆಂಬಲಿಗರು ಗಣಿಗಾರಿಕೆ, ಜಲ್ಲಿ ಕ್ರಷರ್‌ ನಡೆಸುತ್ತಿದ್ದರು ಎಂಬ ನನ್ನ ಹೇಳಿಕೆಯನ್ನು ಸುಮಲತಾ ತಿರುಚಿದ್ದು, ಅಂಬರೀಷ್‌ ಬಗ್ಗೆ ಮಾತನಾಡಿದರೆ ನಾಶವಾಗಿ ಹೋಗುತ್ತಾರೆ ಎಂದಿದ್ದಾರೆ. ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಸುಳ್ಳು ಹೇಳಿ ಪೇಚಿಗೆ ಸಿಲುಕಿ ಈಗ ಅಧಿಕಾರಿಗಳ ವರ್ಗಾವಣೆ, ಅಕ್ರಮ ಗಣಿಗಾರಿಕೆ ಎಂದು ಏನೇನೋ ಮಾತನಾಡುತ್ತಿದ್ದಾರೆ. ಸುಳ್ಳು ಹೇಳಿದ ತಪ್ಪಿಗೆ ಕೆಆರ್‌ಎಸ್‌ ಬಳಿಯ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಜನರ ಕ್ಷಮೆ ಕೇಳಲಿ’ ಎಂದು ಆಗ್ರಹಿಸಿದರು.

ADVERTISEMENT

‘ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ನನ್ನನ್ನು ವಜ್ರಮುನಿಗೆ ಹೋಲಿಸಿದ್ದಾರೆ. ವಜ್ರಮುನಿ ಒಕ್ಕಲಿಗ ಸಮುದಾಯದ ಅಭಿಜಾತ ಕಲಾವಿದ. ವಿಲನ್‌ ಪಾತ್ರಗಳಿಗೆ ಹೀರೊ ಇಮೇಜ್‌ ತಂದು ಕೊಟ್ಟವರು. ಅವರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.