ADVERTISEMENT

ಜೆಡಿಎಸ್‌ಗೆ 4 ದಿನದಲ್ಲಿ ಹೊಸ ಅಧ್ಯಕ್ಷ

ವಿಶ್ವನಾಥರಿಂದಲೇ ಹೊಸ ಅಧ್ಯಕ್ಷರಿಗೆ ಬಾವುಟ ಹಸ್ತಾಂತರ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:46 IST
Last Updated 24 ಜೂನ್ 2019, 19:46 IST
   

ಬೆಂಗಳೂರು: ಎಚ್‌.ವಿಶ್ವನಾಥ್‌ ಅವರ ರಾಜೀನಾಮೆ ಅಂಗೀಕಾರ ಪ್ರಹಸನ ವಾರಗಳಿಂದ ಮುಂದುವರಿಯುತ್ತಲೇ ಇದ್ದು, ಇನ್ನು ನಾಲ್ಕು ದಿನಗಳೊಳಗೆ ಇದಕ್ಕೆ ಕೊನೆ ಬೀಳುವ ಸಾಧ್ಯತೆ ಇದೆ.

ಹಿಂದುಳಿದ ವರ್ಗದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಆಶಯವನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು ಹೊಂದಿದ್ದು, ಅದರಂತೆ ಮಧು ಬಂಗಾರಪ್ಪ ಅವರಿಗೆ ಅವಕಾಶ ನೀಡುವ ಸಾಧ್ಯತೆ ಕಂಡುಬಂದಿದೆ. ವೈ.ಎಸ್‌.ವಿ.ದತ್ತ ಅವರೂ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ದೇವೇಗೌಡರ ಮನದಾಳವನ್ನು ಯಾರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಹೀಗಾಗಿ ಆದೇಶ ಹೊರಬಿದ್ದ ಬಳಿಕವಷ್ಟೇ ಎಲ್ಲವೂ ಸ್ಪಷ್ಟ ಎಂದು ವಿಶ್ಲೇಷಿಸಲಾಗಿದೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ದೇವೇಗೌಡ, ‘ಮೂರು, ನಾಲ್ಕು ದಿನಗಳಲ್ಲಿ ರಾಜ್ಯ ಘಟಕದ ಹೊಸ ಅಧ್ಯಕ್ಷರನ್ನುನೇಮಕ ಮಾಡುತ್ತೇನೆ,ವಿಶ್ವನಾಥ್ ಅವರ ರಾಜೀನಾಮೆ ಅಂಗೀಕಾರ ಮಾಡು
ವುದಿಲ್ಲ, ಬದಲಿಗೆ ಅವರಿಂದಲೇಹೊಸ ಅಧ್ಯಕ್ಷರಿಗೆ ಬಾವುಟ ಕೊಡಿಸಿ ಅಧಿಕಾರ ಹಸ್ತಾಂತರ ಮಾಡುತ್ತೇನೆ’ ಎಂದರು.

ADVERTISEMENT

ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಿ ಎಂಬ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡ, ‘ಅವರ ಹೇಳಿಕೆ ತಪ್ಪಲ್ಲ. ಆದರೆ ಒಬ್ಬರಿಗೆ ಒಂದೇ ಹುದ್ದೆ ಅಂತ ಪಕ್ಷದಲ್ಲಿ ನಿರ್ಧಾರ ಆಗಿದೆ. ಈ ಹಿಂದೆ ನಾನೇ ರಾಜೀನಾಮೆ ನೀಡಿ ಇಬ್ರಾಹಿಂಗೆ ಸ್ಥಾನ ಕೊಟ್ಟಿದ್ದೆ. ಹೀಗಾಗಿ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ’ ಎಂದರು. ಈ ಮೂಲಕ ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದನ್ನು ತಳ್ಳಿಹಾಕಿದರು.

ವಿಶ್ವನಾಥ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹಲವು ವಾರಗಳೇ ಕಳೆದಿದ್ದು,ಇದುವರೆಗೂ ಅವರ ರಾಜೀನಾಮೆಯನ್ನು ದೇವೇಗೌಡರು ಅಂಗೀಕರಿಸಿಲ್ಲ. ಬದಲಾಗಿ ಅವರನ್ನೇ ಮುಂದುವರಿಸಲು ನಾನಾ ರೀತಿಯ ಕಸರತ್ತು ಸಹ ಮಾಡಿದ್ದರು. ಆದರೆ ಇದ್ಯಾವುದಕ್ಕೆ ಜಗ್ಗದ ವಿಶ್ವನಾಥ್, ‘ರಾಜೀನಾಮೆ ಅಂಗೀಕರಿಸಿ. ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗುತ್ತದೆ’ ಎಂದುಬೆದರಿಕೆ ಹಾಕಿದ್ದರು.

***

ಕುಮಾರಸ್ವಾಮಿಗೆ ಅಧ್ಯಕ್ಷ ಸ್ಥಾನ–ಸ್ಪಷ್ಟ ನಕಾರ

ಮಧು ಬಂಗಾರಪ್ಪಗೆ ಅವಕಾಶ ಒಲಿಯುವ ಸಾಧ್ಯತೆ

ಸದ್ಯ ವಿಶ್ವನಾಥ್‌ ರಾಜೀನಾಮೆ ಅಂಗೀಕಾರ ಇಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.