ಅವೈಜ್ಞಾನಿಕ ಹೇಳಿಕೆಯ ಸಮರ್ಥನೆ
‘ಕನಕದಾಸ: ಒಂದು ಸ್ಪಷ್ಟನೆ’ ಎಂಬ ಪತ್ರದಲ್ಲಿ (ವಾ.ವಾ., ನ. 18) ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ‘ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ’ ಎಂದು ಸ್ವಾಮಿ ವಿವೇಕಾನಂದರು ಹೇಳಿರುವುದಾಗಿ ಉಲ್ಲೇಖಿಸಿದ್ದಾರೆ. ಇಂತಹ ಅಸಂಬದ್ಧ, ಅವೈಜ್ಞಾನಿಕ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು
ವಿವೇಕಾನಂದರನ್ನು ಅವರು ಎಳೆದು ತಂದಿದ್ದಾರೆ.
ವಿವೇಕಾನಂದರು ಈ ವಿಚಾರವನ್ನು ಯಾವ ಸಂಪುಟದ ಯಾವ ಅಧ್ಯಾಯದಲ್ಲಿ ಎಷ್ಟನೇ ಪುಟದಲ್ಲಿ ಹೇಳಿದ್ದಾರೆ ಎನ್ನುವುದನ್ನು ತಿಳಿಸಬೇಕು. ನಾವು ಕೂಡ ಅದನ್ನು ಓದಿ ಕೃತಾರ್ಥರಾಗಲು ಬಯಸುತ್ತೇವೆ.
ಟಿ.ಸುರೇಂದ್ರ ರಾವ್, ಬೆಂಗಳೂರು
ಇದನ್ನೂ ಓದಿ:ಕನಕದಾಸ: ವಸಂತ ಕುಮಾರ್ ಸ್ಪಷ್ಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.