ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ವೇಣೂರು– ಪೆರ್ಮುಡದಲ್ಲಿ ನಡೆದ ಸೂರ್ಯ–ಚಂದ್ರ ಜೋಡುಕರೆಯಲ್ಲಿ ‘ಕಂಬಳದ ಅತಿ ವೇಗದ ಓಟಗಾರ’ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಹಗ್ಗಹಿರಿಯ, ಹಗ್ಗ ಕಿರಿಯ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಓಡಿಸಿದ ಕೋಣಗಳು ಪ್ರಥಮ ಬಹುಮಾನವನ್ನು ಪಡೆದುಕೊಂಡಿವೆ. ಇದೇ ಕಂಬಳದಲ್ಲಿ ಶನಿವಾರ 8.96 ಸೆಕೆಂಡ್‌ನಲ್ಲಿ 100 ಮೀ ಕ್ರಮಿಸುವ ಮೂಲಕ ಶ್ರೀನಿವಾಸ ಗೌಡ ಹೊಸ ದಾಖಲೆ ನಿರ್ಮಿಸಿದ್ದರು.
ವೇಣೂರು ಕಂಬಳದ ಫಲಿತಾಂಶ ಇಂತಿದೆ
ಕನೆಹಲಗೆ ವಿಭಾಗ: ಪ್ರಥಮ– ಬೇಲಾಡಿ ಬಾವ ಅಶೋಕ್ ಶೆಟ್ಟಿ (ಹಲಗೆ ಮೆಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್), ದ್ವಿತೀಯ–ಬಾರ್ಕೂರು ಶಾಂತಾರಾಮ ಶೆಟ್ಟಿ (ಹಲಗೆ ಮೆಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್)
ಅಡ್ಡ ಹಲಗೆ ವಿಭಾಗ: ಪ್ರಥಮ– ಕೋಟ ಗಿಳಿಯಾರು ಹಂಡಿಕೆರೆ ವಸಂತ ಕುಮಾರ್ ಶೆಟ್ಟಿ ‘ಎ’. (ಹಲಗೆ ಮೆಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ), ದ್ವಿತೀಯ– ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಬಿ’ (ಹಲಗೆ ಮೆಟ್ಟಿದವರು– ಸಾವ್ಯ ಗಂಗಯ್ಯ ಪೂಜಾರಿ)
ಹಗ್ಗ ಹಿರಿಯ: ಪ್ರಥಮ– ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ‘ಬಿ’ (ಓಡಿಸಿದವರು– ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ– ಹೊಸಬೆಟ್ಟು ಏರಿಮಾರು ಗೋಪಾಲಕೃಷ್ಣ ಭಟ್ ‘ಬಿ‘ (ಓಡಿಸಿದವರು– ಬೈಂದೂರು ವಿಶ್ವನಾಥ್ ದೇವಾಡಿಗ_
ಹಗ್ಗ ಕಿರಿಯ: ಪ್ರಥಮ– ಕಾಂತಾವರ ಬಾರಾಡಿ ಬೀಡು ನಿಹಾಲ್ ಜೆ ಬಳ್ಳಾಳ್ (ಓಡಿಸಿದವರು– ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ– ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ (ಓಡಿಸಿದವರು– ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ)
ನೇಗಿಲು ಹಿರಿಯ: ಪ್ರಥಮ– ಇರುವೈಲು ಪಾನಿಲ ಬಾಡ ಪೂಜಾರಿ ‘ಎ’ (ಓಡಿಸಿದವರು– ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ– ವೇಣೂರು ಪೆರ್ಮುಡ ಸನತ್ – ಸಂಪತ್ ಅಂಚನ್ (ಓಡಿಸಿದವರು– ಬೈಂದೂರು ವಿವೇಕ್)
ನೇಗಿಲು ಕಿರಿಯ: ಪ್ರಥಮ– ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ ‘ಬಿ’. (ಓಡಿಸಿದವರು– ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ), ದ್ವಿತೀಯ– ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಎ’ (ಓಡಿಸಿದವರು– ಮರೋಡಿ ಶ್ರೀಧರ್)
ಕಂಬಳದಲ್ಲಿ ದಾಖಲೆಯ 200 ಜೊತೆ ಕೋಣಗಳು ಭಾಗವಹಿಸಿದ್ದವು. ಹಗ್ಗ ಕಿರಿಯ ವಿಭಾಗದಲ್ಲಿ 24, ಹಿರಿಯ ವಿಭಾಗದಲ್ಲಿ 16, ನೇಗಿಲು ಕಿರಿಯ ವಿಭಾಗದಲ್ಲಿ 124, ನೇಗಿಲು ಹಿರಿಯ ವಿಭಾಗದಲ್ಲಿ 26, ಕನೆಹಲಗೆ ವಿಭಾಗದಲ್ಲಿ 4, ಅಡ್ಡ ಹಲಗೆ ವಿಭಾಗದಲ್ಲಿ 6 ಜೊತೆ ಕೋಣಗಳು ಭಾಗವಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.