ADVERTISEMENT

ನಿಗದಿತ ದಿನಾಂಕಗಳಂದು 34 ಜಯಂತಿಗಳ ಆಚರಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 20:15 IST
Last Updated 9 ಜನವರಿ 2024, 20:15 IST
   

ಬೆಂಗಳೂರು: ಈ ವರ್ಷ 34 ಜಯಂತಿಗಳನ್ನು ನಿಗದಿತ ದಿನಾಂಕಗಳಂದು ಆಚರಣೆ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. 

ದಿನಾಂಕ ಸಹಿತ ಜಯಂತಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಜನವರಿ ತಿಂಗಳಲ್ಲಿ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ, ಶಿವಯೋಗಿ ಸಿದ್ದರಾಮ ಜಯಂತಿ, ಮಹಾಯೋಗಿ ವೇಮನ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ ನಡೆಯಲಿದೆ. ಫೆಬ್ರವರಿ ತಿಂಗಳಲ್ಲಿ ಮಡಿವಾಳ ಮಾಚಿದೇವ ಜಯಂತಿ, ಕಾಯಕ ಶರಣರ ಜಯಂತಿ, ಸಂತ ಸೇವಾಲಾಲ್ ಜಯಂತಿ, ಸವಿತಾ ಮಹರ್ಷಿ ಜಯಂತಿ, ಛತ್ರಪತಿ ಶಿವಾಜಿ ಜಯಂತಿ, ಸಂತ ಕವಿ ಸರ್ವಜ್ಞ ಜಯಂತಿ ಆಚರಿಸಲಾಗುತ್ತದೆ.

ಮಾರ್ಚ್‌ ತಿಂಗಳಲ್ಲಿ ರೇಣುಕಾಚಾರ್ಯ ಜಯಂತಿ, ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ), ಅಗ್ನಿಬನ್ನಿರಾಯ ಜಯಂತಿ, ಏಪ್ರಿಲ್ ತಿಂಗಳಲ್ಲಿ  ದೇವರ ದಾಸಿಮಯ್ಯ ಜಯಂತಿ, ಭಗವಾನ್ ಮಹಾವೀರ ಜಯಂತಿ, ಅಕ್ಕಮಹಾದೇವಿ ಜಯಂತಿ, ಮೇ ತಿಂಗಳಲ್ಲಿ ಬಸವ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ, ಶಂಕರಾಚಾರ್ಯ ಜಯಂತಿ, ಭಗೀರಥ ಜಯಂತಿ, ಜೂನ್ ತಿಂಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ, ಕೆಂಪೇಗೌಡ ಜಯಂತಿ, ಜುಲೈ ತಿಂಗಳಲ್ಲಿ ಫ.ಗು. ಹಳಕಟ್ಟಿಯವರ ಜನ್ಮದಿನ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ, ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಗುತ್ತದೆ. 

ADVERTISEMENT

ಆಗಸ್ಟ್‌ ತಿಂಗಳಲ್ಲಿ ನುಲಿಯ ಚಂದಯ್ಯ ಜಯಂತಿ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ಕೃಷ್ಣ ಜಯಂತಿ, ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವಕರ್ಮ ಜಯಂತಿ, ಅಕ್ಟೋಬರ್ ತಿಂಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ನವೆಂಬರ್ ತಿಂಗಳಲ್ಲಿ ಒನಕೆ ಓಬವ್ವ ಜಯಂತಿ, ಕನಕ ಜಯಂತಿ ಹಾಗೂ ಡಿಸೆಂಬರ್ ತಿಂಗಳಲ್ಲಿ ವಿಶ್ವಮಾನವ ದಿನಾಚರಣೆ ಆಚರಿಸಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.