ADVERTISEMENT

ಕನ್ನಡ ಚೆಕ್ ನಿರಾಕರಣೆ: ದಂಡ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 18:28 IST
Last Updated 25 ಜೂನ್ 2019, 18:28 IST
ಕನ್ನಡದಲ್ಲಿ ಬರೆದಿರುವ ಚೆಕ್.
ಕನ್ನಡದಲ್ಲಿ ಬರೆದಿರುವ ಚೆಕ್.   

ಸಾಗರ: ಕನ್ನಡದಲ್ಲಿ ಬರೆಯಲಾಗಿದೆ ಎನ್ನುವ ಕಾರಣಕ್ಕೆ ಚೆಕ್ ಅನ್ನು ನಗದೀಕರಿಸಲು ನಿರಾಕರಿಸಿದ ಕಾರಣಕ್ಕೆ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಬ್ಯಾಂಕಿಂಗ್ ಒಂಬುಡ್ಸ್‌ಮನ್ ₹ 5 ಸಾವಿರ ದಂಡ ವಿಧಿಸಿರುವ ಪ್ರಕರಣ ನಡೆದಿದೆ.

ಇಲ್ಲಿನ ಸಿದ್ಧಿವಿನಾಯಕ ಅಡಿಕೆ ಮಂಡಿಯವರು 2018ರ ಫೆಬ್ರುವರಿಯಲ್ಲಿ ಬೆಳೆಗಾರರಿಗೆ ವಿತರಿಸಿದ್ದ ಎರಡು ಚೆಕ್ ಕನ್ನಡದಲ್ಲಿ ಬರೆಯಲಾಗಿದೆ ಎನ್ನುವ ಕಾರಣಕ್ಕೆ ಮರಳಿ ಬಂದಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ಧಿವಿನಾಯಕ ಮಂಡಿಯವರು ಸಾಂಕೇತಿಕ ಪರಿಹಾರ ಕೇಳಿದ್ದು, ಬ್ಯಾಂಕ್‌ನವರು ಇದಕ್ಕೆ ಒಪ್ಪಿ ಪರಿಹಾರ ಎಂದೇ ಮಂಡಿಯವರ ಖಾತೆಗೆ ₹ 3ನ್ನು ಜಮಾ ಕೂಡ ಮಾಡಿದ್ದರು. 2018ರ ಸೆ. 9ರಂದು ಇದೇ ಮಂಡಿಯವರು ಕನ್ನಡದಲ್ಲಿ ಬರೆದ ಮತ್ತೊಂದು ಚೆಕ್ ಅನ್ನು ಬೆಳೆಗಾರರಿಗೆ ನೀಡಿದ್ದು, ಅದನ್ನು ಕೂಡ ನಗದೀಕರಿಸಲು ನಿರಾಕರಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬ್ಯಾಂಕಿಂಗ್ ಒಂಬುಡ್ಸ್‌ಮನ್ ₹ 5 ಸಾವಿರ ದಂಡ ಪಾವತಿಸಬೇಕು ಎಂದು ತೀರ್ಪು ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.