ಮೈಸೂರು: ‘ಕುವೆಂಪು ಆಶಯಕ್ಕೆ ವಿರುದ್ಧವಾಗಿ ಪ್ರಾಥಮಿಕ ಶಿಕ್ಷಣ ನೀಡಲು ಮುಂದಾದವರಿಗೆ, ರಸ
ಋಷಿ ರಚಿತ ನಾಡಗೀತೆ ಹಾಡುವ ನೈತಿಕತೆ ಇದೆಯಾ? ಸರ್ಕಾರದ ಭಾಗವಾಗಿಯೂ ನಾನು ಈ ಮಾತು ಹೇಳುತ್ತಿರುವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
‘ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ರಾಜ್ಯ ಸರ್ಕಾರವೇ ಆರಂಭಿಸಿದ್ದು, ನೆಲದ ಭಾಷೆಗೆ ವಿರುದ್ಧವಾದ ನಡೆ. ಕನ್ನಡ ಕೊಲ್ಲುವ ಕೆಲಸ ನಡೆದಿದೆ’ ಎಂದು ಭಾನುವಾರ ಇಲ್ಲಿ ನಡೆದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರ್ಕಾರದ ನಡೆಯನ್ನು ಟೀಕಿಸಿದರು.
‘ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ರೂಪಿಸಿದ ದಾರಿ ಸರಿಯಿಲ್ಲ. ಈ ಹಿಂದಿನ ಸರ್ಕಾರ ರಚಿಸಿದ್ದ ಸಮಿತಿಯ 21 ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಆಗ್ರಹಿಸಿದರು.
‘ರಾಜ್ಯ ಸರ್ಕಾರಗಳು ಆಯಾ ರಾಜ್ಯ ಭಾಷೆಯ ರಕ್ಷಣಾ ಗೋಡೆಗಳಾಗಿದ್ದವು. ಆದರೆ, ಈಚೆಗೆ ಹಿಂದಿಯೇತರ ರಾಜ್ಯಗಳ ರಾಜ್ಯ ಭಾಷೆ ಕಳೆದು ಹೋಗುತ್ತಿವೆ. ಇದರಲ್ಲಿ ಕನ್ನಡವೂ ಸೇರಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.