ADVERTISEMENT

ಸೆ.15ರಂದು ಬೆಳಗಾವಿಗೆ ರಾಷ್ಟ್ರಪತಿ ಕೋವಿಂದ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
ಕನ್ಯಾಡಿಯಲ್ಲಿ ಗುರುವಾರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾಹಿತಿ ನೀಡಿದರು.
ಕನ್ಯಾಡಿಯಲ್ಲಿ ಗುರುವಾರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾಹಿತಿ ನೀಡಿದರು.   

ಬೆಳಗಾವಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೆ.15ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಕರ್ನಾಟಕ ಕಾನೂನು ಸೊಸೈಟಿಯ (ಕೆಎಲ್‌ಎಸ್) ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರೂ ಬರಲಿದ್ದಾರೆ.

ಸೆ.3ರಂದು ಕನ್ಯಾಡಿ ರಾಮಕ್ಷೇತ್ರದಲ್ಲಿ ಧರ್ಮ ಸಂಸದ್

ಉಜಿರೆ: ಧರ್ಮಸ್ಥಳ ಗ್ರಾಮದ ಕನ್ಯಾಡಿಯ ರಾಮಕ್ಷೇತ್ರದಲ್ಲಿ ಸೆ. 3 ರಂದು ರಾಷ್ಟ್ರೀಯ ಧರ್ಮ ಸಂಸದ್ ನಡೆಸಲು ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಧರ್ಮ ಸಂಸದ್ ಯಶಸ್ವಿಯಾಗಿ ನಡೆಯಲಿದೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ADVERTISEMENT

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿ ತಾಲ್ಲೂಕಿನ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ಕಾರ್ಯಕ್ರಮ. ಉದ್ಘಾಟನೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬರುವುದು ಖಚಿತವಾಗಿದೆ. ದೇಶದ ಧರ್ಮ ಆಯಾಕಾಲಕ್ಕೆ ಸರಿಯಾಗಿ ಹೇಗಿರಬೇಕೆಂದು ಸಾಧು-ಸಂತರು, ಚಿಂತನ– ಮಂಥನ ನಡೆಸಲಿದ್ದಾರೆ ಎಂದು ಹೇಳಿದರು.

*ಸಂಸ್ಕೃತಿಗೆ, ಪೂಜಾ ವಿಧಿ-ವಿಧಾನಗಳಿಗೆ, ತ್ರಿಕಾಲ ಪೂಜೆಗೆ ಚ್ಯುತಿ ಬಾರದಂತೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. 200 ಮಂದಿ ಸ್ವಯಂ ಸೇವಕರ ಪಡೆ ಸನ್ನದ್ಧವಾಗಿದೆ.

-ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕನ್ಯಾಡಿ ರಾಮಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.