ADVERTISEMENT

ಕಪ್ಪತಗುಡ್ಡ ಡಿನೋಟಿಫೈ ಪ್ರಸ್ತಾವನೆ; ಎಚ್.ಕೆ.ಪಾಟೀಲ ವಿರೋಧ

ಗದಗ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 4:36 IST
Last Updated 26 ಸೆಪ್ಟೆಂಬರ್ 2019, 4:36 IST
ಕಪ್ಪತಗುಡ್ಡ –ಸಂಗ್ರಹ ಚಿತ್ರ
ಕಪ್ಪತಗುಡ್ಡ –ಸಂಗ್ರಹ ಚಿತ್ರ   

ಬೆಂಗಳೂರು: ಗದಗ ಜಿಲ್ಲೆ ಕಪ್ಪತಗುಡ್ಡ ‘ವನ್ಯಜೀವಿಧಾಮ’ ಸ್ಥಾನಮಾನ ರದ್ದುಗೊಳಿಸುವ ಪ್ರಸ್ತಾವನೆ ಕುರಿತು ಕಳವಳ ವ್ಯಕ್ತಪಡಿಸಿರುವ ಗದಗ ಶಾಸಕ ಎಚ್‌.ಕೆ.ಪಾಟೀಲ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಕಪ್ಪತ್ತಗುಡ್ಡದ ಸಂರಕ್ಷಿತ ಅರಣ್ಯ ಪ್ರದೇಶ ಸ್ಥಾನಮಾನವನ್ನು ಹಿಂಪಡೆಯುವ ಹುನ್ನಾರ ಮತ್ತೊಮ್ಮೆ ನಡೆದಿದೆ. ಇದು ಕಳವಳಕಾರಿ. ಇಂಥ ಯಾವುದೇ ನಿರ್ಣಯ ಗದಗ ಜಿಲ್ಲೆ ಹಿತ ಹಾಗೂ ಉತ್ತರ ಕರ್ನಾಟಕದ ಜನರ ಭಾವನೆಯ ವಿರೋಧಿ ನಿರ್ಣಯವಾಗಿ ಹೋರಾಟಕ್ಕೆ ನಾಂದಿ ಮಾಡಿಕೊಡುವುದು. ಅಂಥ ನಿರ್ಣಯವಾಗದ ಹಾಗೆ ಮುತುವರ್ಜಿ ವಹಿಸಿ‘ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 3 ಪುಟಗಳ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.