ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು 7,598 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
'ಸಿಎಂ ತವರು ಜಿಲ್ಲೆಯ' ಹಾನಗಲ್ ಕ್ಷೇತ್ರದಲ್ಲಿ ಗೆದ್ದೇ ತೀರುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
"ಆಪತ್ಬಾಂಧವ" ಎಂಬ ಬಿರುದಿಗೆ ಪಾತ್ರರಾಗಿದ್ದ ಶ್ರೀನಿವಾಸ ಮಾನೆ ಅವರ ಗೆಲುವಿಗೆ ಕೋವಿಡ್ ಕಾಲದಲ್ಲಿ ಜನರಿಗೆ ಸ್ಪಂದನೆ ಹಾಗೂ ಕಾಂಗ್ರೆಸ್ ಸರ್ಕಾರದ 'ಭಾಗ್ಯಗಳ ಯೋಜನೆ' ಸಹಕಾರಿಯಾಗಿವೆ ಎನ್ನಲಾಗುತ್ತಿದೆ.
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (19 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 79,515
ಕಾಂಗ್ರೆಸ್- ಶ್ರೀನಿವಾಸ ಮಾನೆ- 87,113
ಜೆಡಿಎಸ್- ನಿಯಾಜ್ ಶೇಖ್- 921
ಕಾಂಗ್ರೆಸ್‌ಗೆ 7,598 ಮತಗಳ ಮುನ್ನಡೆ
ಹಾನಗಲ್ ಕ್ಷೇತ್ರ: ಕಡೆಯ ಒಂದು ಸುತ್ತು (19ನೇ) ಬಾಕಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಗೆಲುವು ಬಹುತೇಕ ಖಚಿತವಾಗಿದೆ. ಹಾವೇರಿ ನಗರ ಮತ್ತು ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ, ಹರ್ಷೋದ್ಗಾರ, ಜೈಕಾರ ಮೊಳಗುತ್ತಿದೆ.
ಹುಬ್ಬಳ್ಳಿ: ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ದುರ್ಬಲರಾಗಿದ್ದರೋ ಅಥವಾ ಅವರ ಬಗ್ಗೆ ಕ್ಷೇತ್ರದಲ್ಲಿ ಅಪಸ್ವರವಿತ್ತೋ ಗೊತ್ತಿಲ್ಲ. ಆದರೆ, ಮತದಾರರ ನಿರ್ಣಯಕ್ಕೆ ತಲೆ ಬಾಗುತ್ತೇವೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (18 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 75,999
ಕಾಂಗ್ರೆಸ್- ಶ್ರೀನಿವಾಸ ಮಾನೆ- 83,324
ಜೆಡಿಎಸ್- ನಿಯಾಜ್ ಶೇಖ್- 866
ಕಾಂಗ್ರೆಸ್‌ಗೆ 7,325 ಮತಗಳ ಮುನ್ನಡೆ
ಹಾನಗಲ್ ಉಪಚುನಾವಣೆ: 16ನೇ ಸುತ್ತಿನ ಮತ ಎಣಿಕೆ
6828 ಮತಗಳಿಂದ ಕಾಂಗ್ರೆಸ್ ಮುನ್ನಡೆ
ಬಿಜೆಪಿ: 66,622
ಕಾಂಗ್ರೆಸ್: 73,450
ಜೆಡಿಎಸ್: 767
ಸಿಂದಗಿ ವಿಧಾನಸಭಾ ಉಪ ಚುನಾವಣೆ 22ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 31,088 ಮತಗಳಿಂದ ಜಯ ಗಳಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (22 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 62,292
*ರಮೇಶ ಭೂಸನೂರ (ಬಿಜೆಪಿ): 93,380
*ನಾಜಿಯಾ ಅಂಗಡಿ (ಜೆಡಿಎಸ್): 4321
ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,088 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ರಮೇಶ ಭೂಸನೂರ ಅವರು 93,380 ಮತಗಳನ್ನು ಪಡೆದುಕೊಂಡಿದ್ದಾರೆ.
ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರು 62,292 ಮತಗಳನ್ನು ಪಡೆದುಕೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4321 ಮತಗಳನ್ನು ಪಡೆಯಲಷ್ಟೇ ಶಕ್ತವಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೇರಿದಂತೆ ಕಣದಲ್ಲಿದ್ದ ಇತರೆ ನಾಲ್ವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಸಿಂದಗಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕ್ಷೇತ್ರದಲ್ಲಿ ಜಾತಿ ಸಮೀಕರಣ ಮಾಡುವ ಮೂಲಕ ಬಿಜೆಪಿಗೆ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಾನಗಲ್ | ಗೆದ್ದ ಜನಬಲ, ಸೋತ ಹಣಬಲ: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ
ಹಾನಗಲ್ ಕ್ಷೇತ್ರದಲ್ಲಿ ಜನಬಲ ಗೆದ್ದಿದೆ. ಹಣ ಬಲ ಸೋತಿದೆ. ಹಾನಗಲ್ ಜನರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ. ನಮ್ಮ ನಾಯಕರು ಪರಿಶ್ರಮ ಹಾಕಿದ್ದಾರೆ. ಸರ್ಕಾರದ ತಂತ್ರ ಮಣಿಸಿದ್ದಾರೆ. ಜನರು ಸರ್ಕಾರದ ಜನವಿರೋಧಿ ನೀತಿ. ದುರಾಡಳಿತ ತಿರಸ್ಕಾರ ಮಾಡಿದ್ದಾರೆ. ಇನ್ನಾದ್ರು ಜನರ ಕಲ್ಯಾಣ ಮಾಡಲಿ. ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದರು.
ಹಾನಗಲ್ ಉಪಚುನಾವಣೆ: 14ನೇ ಸುತ್ತಿನ ಫಲಿತಾಂಶ
ಬಿಜೆಪಿ- ಶಿವರಾಜ ಸಜ್ಜನರ- 4760
ಕಾಂಗ್ರೆಸ್- ಶ್ರೀನಿವಾಸ ಮಾನೆ- 4504
ಜೆಡಿಎಸ್- ನಿಯಾಜ್ ಶೇಖ್- 63
ಬಿಜೆಪಿಗೆ 256 ಮತಗಳ ಮುನ್ನಡೆ
ಹಾನಗಲ್ ಉಪಚುನಾವಣೆ: ಕಾಂಗ್ರೆಸ್‌ಗೆ 7,063 ಮತಗಳ ಮುನ್ನಡೆ
ಬಿಜೆಪಿ- ಶಿವರಾಜ ಸಜ್ಜನರ- 52,922
ಕಾಂಗ್ರೆಸ್- ಶ್ರೀನಿವಾಸ ಮಾನೆ- 59,985
ಜೆಡಿಎಸ್- ನಿಯಾಜ್ ಶೇಖ್- 620
ಪಕ್ಷೇತರ- ನಜೀರ್ ಅಹಮದ್ ಸವಣೂರ- 583
ಕಾಂಗ್ರೆಸ್‌ಗೆ 7,063 ಮತಗಳ ಮುನ್ನಡೆ
ಹಾನಗಲ್ ಉಪಚುನಾವಣೆ: 12ನೇ ಸುತ್ತಿನ ಫಲಿತಾಂಶ
ಬಿಜೆಪಿ- ಶಿವರಾಜ ಸಜ್ಜನರ- 4,669
ಕಾಂಗ್ರೆಸ್- ಶ್ರೀನಿವಾಸ ಮಾನೆ- 5,028
ಜೆಡಿಎಸ್- ನಿಯಾಜ್ ಶೇಖ್- 47
ಕಾಂಗ್ರೆಸ್‌ಗೆ 359 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ 21ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 30,846 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (21 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 61,735
*ರಮೇಶ ಭೂಸನೂರ (ಬಿಜೆಪಿ): 92,581
*ನಾಜಿಯಾ ಅಂಗಡಿ (ಜೆಡಿಎಸ್): 4,248
ಸಿಂದಗಿ ವಿಧಾನಸಭಾ ಉಪ ಚುನಾವಣೆ 20ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 29,560 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (20 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 59,184
*ರಮೇಶ ಭೂಸನೂರ (ಬಿಜೆಪಿ): 88,744
*ನಾಜಿಯಾ ಅಂಗಡಿ (ಜೆಡಿಎಸ್): 4,028
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (11 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 44,178
ಕಾಂಗ್ರೆಸ್- ಶ್ರೀನಿವಾಸ ಮಾನೆ- 50,637
ಜೆಡಿಎಸ್- ನಿಯಾಜ್ ಶೇಖ್- 523
ಪಕ್ಷೇತರ- ನಜೀರ್ ಅಹಮದ್ ಸವಣೂರ- 570
ಕಾಂಗ್ರೆಸ್‌ಗೆ 6,459 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ 18ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 27,383 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (18 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 52,637
*ರಮೇಶ ಭೂಸನೂರ (ಬಿಜೆಪಿ): 80,020
*ನಾಜಿಯಾ ಅಂಗಡಿ (ಜೆಡಿಎಸ್): 3,428
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (10 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 40,671
ಕಾಂಗ್ರೆಸ್- ಶ್ರೀನಿವಾಸ ಮಾನೆ- 45,513
ಜೆಡಿಎಸ್- ನಿಯಾಜ್ ಶೇಖ್- 466
ಕಾಂಗ್ರೆಸ್‌ಗೆ 4,842 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪಚುನಾವಣೆ 17ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 24,566 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (17 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 49,897
*ರಮೇಶ ಭೂಸನೂರ (ಬಿಜೆಪಿ): 74,463
*ನಾಜಿಯಾ ಅಂಗಡಿ (ಜೆಡಿಎಸ್): 3,116
ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ. 9ನೇ ಸುತ್ತಿನಲ್ಲಿ 4719 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ (432) ಅವರಿಗಿಂತ ಪಕ್ಷೇತರ ಅಭ್ಯರ್ಥಿ ನಜೀರ್ ಅಹಮದ್ ಸವಣೂರ (559) 127 ಹೆಚ್ಚುವರಿ ಮತಗಳನ್ನು ಗಳಿಸಿ, 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಸಿಂದಗಿ ವಿಧಾನಸಭಾ ಉಪ ಚುನಾವಣೆ 16ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 20,761 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (16 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 47,683
*ರಮೇಶ ಭೂಸನೂರ (ಬಿಜೆಪಿ): 68,444
*ನಾಜಿಯಾ ಅಂಗಡಿ (ಜೆಡಿಎಸ್): 2965
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (9 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 36,066
ಕಾಂಗ್ರೆಸ್- ಶ್ರೀನಿವಾಸ ಮಾನೆ- 40,785
ಜೆಡಿಎಸ್- ನಿಯಾಜ್ ಶೇಖ್- 432
ಕಾಂಗ್ರೆಸ್‌ಗೆ 4719 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ 14ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 18,312 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (14 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 42,166
*ರಮೇಶ ಭೂಸನೂರ (ಬಿಜೆಪಿ): 60,478
*ನಾಜಿಯಾ ಅಂಗಡಿ (ಜೆಡಿಎಸ್): 2736
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (8 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 32,002
ಕಾಂಗ್ರೆಸ್- ಶ್ರೀನಿವಾಸ ಮಾನೆ- 36,415
ಜೆಡಿಎಸ್- ನಿಯಾಜ್ ಶೇಖ್- 347
ಕಾಂಗ್ರೆಸ್‌ಗೆ 4,413 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ 13ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 18,873 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (13 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 38,611
*ರಮೇಶ ಭೂಸನೂರ (ಬಿಜೆಪಿ): 57,484
*ನಾಜಿಯಾ ಅಂಗಡಿ (ಜೆಡಿಎಸ್): 2538
ಸಿಂದಗಿ ವಿಧಾನಸಭಾ ಉಪ ಚುನಾವಣೆ 12ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 19,718 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (12 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 34,688
*ರಮೇಶ ಭೂಸನೂರ (ಬಿಜೆಪಿ): 54,406
*ನಾಜಿಯಾ ಅಂಗಡಿ (ಜೆಡಿಎಸ್): 2333
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (7 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 29,368
ಕಾಂಗ್ರೆಸ್- ಶ್ರೀನಿವಾಸ ಮಾನೆ- 31,620
ಜೆಡಿಎಸ್- ನಿಯಾಜ್ ಶೇಖ್- 314
ಕಾಂಗ್ರೆಸ್‌ಗೆ 2252 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ 11ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 18,577 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (11 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 31,473
*ರಮೇಶ ಭೂಸನೂರ (ಬಿಜೆಪಿ): 50,050
*ನಾಜಿಯಾ ಅಂಗಡಿ (ಜೆಡಿಎಸ್): 2067
ಸಿಂದಗಿ ವಿಧಾನಸಭಾ ಉಪ ಚುನಾವಣೆ 9ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 15,950 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (9 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 25,448
*ರಮೇಶ ಭೂಸನೂರ (ಬಿಜೆಪಿ): 41,398
*ನಾಜಿಯಾ ಅಂಗಡಿ (ಜೆಡಿಎಸ್): 1498
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ
ಬಿಜೆಪಿ- ಶಿವರಾಜ ಸಜ್ಜನರ- 25,746
ಕಾಂಗ್ರೆಸ್- ಶ್ರೀನಿವಾಸ ಮಾನೆ- 27,244
ಜೆಡಿಎಸ್- ನಿಯಾಜ್ ಶೇಖ್- 244
ಕಾಂಗ್ರೆಸ್‌ಗೆ 1,498 ಮತಗಳ ಮುನ್ನಡೆ
ಹಾನಗಲ್ ಉಪಚುನಾವಣೆ: 6ನೇ ಸುತ್ತಿನ ಫಲಿತಾಂಶ
ಬಿಜೆಪಿ- ಶಿವರಾಜ ಸಜ್ಜನರ- 3722
ಕಾಂಗ್ರೆಸ್- ಶ್ರೀನಿವಾಸ ಮಾನೆ- 3900
ಜೆಡಿಎಸ್- ನಿಯಾಜ್ ಶೇಖ್- 40
ಕಾಂಗ್ರೆಸ್‌ಗೆ 178 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ 8ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 14,678 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (8 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 22,343
*ರಮೇಶ ಭೂಸನೂರ (ಬಿಜೆಪಿ): 37,021
*ನಾಜಿಯಾ ಅಂಗಡಿ (ಜೆಡಿಎಸ್): 1,328
ಅಂಚೆ ಮತದಾನ ವಿವರ:
ಚಲಾಯಿತ ಮತಗಳು– 463
ನೋಟಾ 00
ತಿರಸ್ಕೃತ 11
***
ಬಿಜೆಪಿ– 236
ಕಾಂಗ್ರೆಸ್ –184
ಜೆಡಿಎಸ್ –4
ಉಡಚಪ್ಪ 02
ಫಕೀರಗೌಡ 02
ತಳವಾರ 01
ಉಮೇಶ 01
ನಜೀರ್ 01
ಪರುಶುರಾಮ ೦9
ಸಿದ್ದಪ್ಪ 11
ದೊಡ್ಡಲಿಂಗಣ್ಣವರ್ 01
ಸೋಮಶೇಖರ್ 00
ಹೊನ್ನಪ್ಪ 00
ಸಿಂದಗಿ ವಿಧಾನಸಭಾ ಉಪಚುನಾವಣೆ 7ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 13,325 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ
*ಅಶೋಕ ಮನಗೂಳಿ (ಕಾಂಗ್ರೆಸ್): 19,162
*ರಮೇಶ ಭೂಸನೂರ (ಬಿಜೆಪಿ): 32,487
*ನಾಜಿಯಾ ಅಂಗಡಿ (ಜೆಡಿಎಸ್): 1173
*ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ):280
*ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ):148
*ದೀಪಿಕಾ ಎಸ್.(ಪಕ್ಷೇತರ):139
*ನೋಟಾ: 326
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (5 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 22,024
ಕಾಂಗ್ರೆಸ್- ಶ್ರೀನಿವಾಸ ಮಾನೆ- 23,344
ಜೆಡಿಎಸ್- ನಿಯಾಜ್ ಶೇಖ್- 204
ಕಾಂಗ್ರೆಸ್‌ಗೆ 1,320 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪಚುನಾವಣೆ 6ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 11,637 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (6 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 16,160
*ರಮೇಶ ಭೂಸನೂರ (ಬಿಜೆಪಿ): 27,791
*ನಾಜಿಯಾ ಅಂಗಡಿ (ಜೆಡಿಎಸ್): 941
*ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ):242
*ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ):132
*ದೀಪಿಕಾ ಎಸ್.(ಪಕ್ಷೇತರ):127
*ನೋಟಾ: 287
ಹಾನಗಲ್ ಉಪಚುನಾವಣೆ: 5ನೇ ಸುತ್ತಿನ ಫಲಿತಾಂಶ
ಬಿಜೆಪಿ- ಶಿವರಾಜ ಸಜ್ಜನರ- 4255
ಕಾಂಗ್ರೆಸ್- ಶ್ರೀನಿವಾಸ ಮಾನೆ- 5325
ಜೆಡಿಎಸ್- ನಿಯಾಜ್ ಶೇಖ್- 55
ಕಾಂಗ್ರೆಸ್‌ಗೆ 1,070 ಮತಗಳ ಮುನ್ನಡೆ
ವಿಜಯಪುರ: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಸಿಂದಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.
ಮತ ಎಣಿಕೆ ಐದು ಸುತ್ತುಗಳು ಪೂರ್ಣಗೊಂಡಿದ್ದು, ಐದೂ ಸುತ್ತುಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 13, 563 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 23,314 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಐದು ಸುತ್ತು ಸೇರಿ ಕೇವಲ 710 ಮತಗಳನ್ನು ಪಡೆದುಕೊಂಡಿದ್ದಾರೆ.
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (4 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 17,769
ಕಾಂಗ್ರೆಸ್- ಶ್ರೀನಿವಾಸ ಮಾನೆ- 18,019
ಜೆಡಿಎಸ್- ನಿಯಾಜ್ ಶೇಖ್- 149
ಕಾಂಗ್ರೆಸ್‌ಗೆ 250 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ 5ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 9,751 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ(5 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 13,563
*ರಮೇಶ ಭೂಸನೂರ (ಬಿಜೆಪಿ): 23,314
*ನಾಜಿಯಾ ಅಂಗಡಿ (ಜೆಡಿಎಸ್): 710
*ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ): 199
*ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ): 101
*ದೀಪಿಕಾ ಎಸ್.(ಪಕ್ಷೇತರ): 100
*ನೋಟಾ: 234
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (3 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 13375
ಕಾಂಗ್ರೆಸ್- ಶ್ರೀನಿವಾಸ ಮಾನೆ- 13414
ಜೆಡಿಎಸ್- ನಿಯಾಜ್ ಶೇಖ್- 115
ಕಾಂಗ್ರೆಸ್‌ಗೆ 39 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪ ಚುನಾವಣೆ ನಾಲ್ಕನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 7008 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಹಾವೇರಿ: ಹಾನಗಲ್ ಉಪಚುನಾವಣೆ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಗೆ 54 ಮತಗಳ ಮುನ್ನಡೆ.
ಎರಡು ಸುತ್ತು ಸೇರಿ ಒಟ್ಟು 128 ಮತಗಳ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಮಾನೆ.
ಕಾಂಗ್ರೆಸ್- 9025 (ಶ್ರೀನಿವಾಸ ಮಾನೆ)
ಬಿಜೆಪಿ- 8897 (ಶಿವರಾಜ ಸಜ್ಜನರ)
ಜೆಡಿಎಸ್- 75 (ನಿಯಾಜ್ ಶೇಖ್)
ಸಿಂದಗಿ ವಿಧಾನಸಭಾ ಉಪ ಚುನಾವಣೆ ಮೂರನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 4850 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (ಮೂರು ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 8231
*ರಮೇಶ ಭೂಸನೂರ (ಬಿಜೆಪಿ): 13,081
*ನಾಜಿಯಾ ಅಂಗಡಿ (ಜೆಡಿಎಸ್): 423
*ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ):100
*ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ): 57
*ದೀಪಿಕಾ ಎಸ್.(ಪಕ್ಷೇತರ): 49
*ನೋಟಾ: 133
ಬಿಜೆಪಿಗೆ ಎರಡನೇ ಸುತ್ತಿನಲ್ಲಿ 54 ಮತಗಳ ಮುನ್ನಡೆ
ಕಾಂಗ್ರೆಸ್ಸಿನ ಶ್ರೀನಿವಾಸ ಮಾನೆ - 4547
ಬಿಜೆಪಿಯ ಶಿವರಾಜ ಸಜ್ಜನರ - 4601
ಜೆಡಿಎಸ್- 50
ಸಿಂದಗಿ ವಿಧಾನಸಭಾ ಉಪ ಚುನಾವಣೆ ಎರಡನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 4031 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಹಾನಗಲ್ ಉಪಚುನಾವಣೆ: ಎರಡನೇ ಸುತ್ತು ಮುಕ್ತಾಯಗೊಂಡಿದ್ದು ಒಟ್ಟು 8 ಮತಗಳಿಂದ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 190 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರಿಗೆ ಮುನ್ನಡೆಯಾಗಿದೆ.
ಸಿಂದಗಿ ವಿಧಾನಸಭಾ ಉಪ ಚುನಾವಣೆ ಎರಡನೇ ಸುತ್ತಿನಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ:
*ಅಶೋಕ ಮನಗೂಳಿ (ಕಾಂಗ್ರೆಸ್): 5614
*ರಮೇಶ ಭೂಸನೂರ (ಬಿಜೆಪಿ): 9645
*ನಾಜಿಯಾ ಅಂಗಡಿ (ಜೆಡಿಎಸ್): 282
*ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ): 74
*ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ): 44
*ದೀಪಿಕಾ ಎಸ್.(ಪಕ್ಷೇತರ): 34
*ನೋಟಾ: 103
ಮೊದಲ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿಗಿಂತ ಹೆಚ್ಚುವರಿ ಮತ ಪಡೆದ ಪಕ್ಷೇತರ ಅಭ್ಯರ್ಥಿ ಮತ್ತು ಕೆಆರ್‌ಎಸ್ ಅಭ್ಯರ್ಥಿ
ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ( 25)
ಕೆಆರ್‌ಎಸ್ ಪಕ್ಷದ ಉದ್ದ ಕಾಲ ( 27)
ಪಕ್ಷೇತರ ಅಭ್ಯರ್ಥಿ ಸಿದ್ದಪ್ಪ ಕಲ್ಲಪ್ಪ ಪೂಜಾರ (36)
ಒಟ್ಟು 13 ಸೇವಾ ಮತಗಳಲ್ಲಿ ಬಿಜೆಪಿ 7 ಹಾಗೂ ಕಾಂಗ್ರೆಸ್ 6 ಮತಗಳನ್ನು ಪಡೆದಿದ್ದು, ಬಿಜೆಪಿ 1 ಮತದ ಮುನ್ನಡೆ ಪಡೆದಿದೆ.
ಮೊದಲ ಸುತ್ತಿನಲ್ಲಿ 25 ನೋಟಾ ಮತಗಳು ದಾಖಲಾಗಿವೆ. 25 ಮತದಾರರು 13 ಅಭ್ಯರ್ಥಿಗಳ ಪೈಕಿ ಯಾರಿಗೂ ಮಣೆ ಹಾಕಿಲ್ಲ!
ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದ್ದು, 19ನೇ ಸುತ್ತಿನಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ.
ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿರುವ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರು ಮತ ಎಣಿಕೆ ಪ್ರಕ್ರಿಯೆ ವೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಬೆಳಿಗ್ಗೆ 10.30ಕ್ಕೆ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡುವ ಸಾಧ್ಯತೆ.
ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಮತ ಎಣಿಕೆ ಕೇಂದ್ರದತ್ತ ಸುಳಿದಿಲ್ಲ.
ಬೆಳಿಗ್ಗೆ 11 ಗಂಟೆಗೆ ಕ್ಷೇತ್ರದ ಸೋಲು-ಗೆಲುವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ಅಧಿಕೃತ ಫಲಿತಾಂಶ ಮಧ್ಯಾಹ್ನ 2 ಗಂಟೆಯ ನಂತರ ಹೊರಬೀಳುವ ಸಾಧ್ಯತೆ ಇದೆ.
ಸಿಂದಗಿ ವಿಧಾನಸಭಾ ಉಪ ಚುನಾವಣೆ ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ:
*ಅಶೋಕ ಮನಗೂಳಿ (ಕಾಂಗ್ರೆಸ್): 2054
*ರಮೇಶ ಭೂಸನೂರ (ಬಿಜೆಪಿ): 5255
*ನಾಜಿಯಾ ಅಂಗಡಿ (ಜೆಡಿಎಸ್): 73
ಕಾಂಗ್ರೆಸ್:2054
ಬಿಜೆಪಿ:5255
ಜೆಡಿಎಸ್:73
ಹಾನಗಲ್ ಉಪಚುನಾವಣೆ ಫಲಿತಾಂಶ ಮೊದಲ ಸುತ್ತು
ಕಾಂಗ್ರೆಸ್- 4478 ಮತ
ಬಿಜೆಪಿ- 4296 ಮತ
ಜೆಡಿಎಸ್- 25 ಮತ
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಇವಿಎಂ ಮತ ಎಣಿಕೆಯ ಎರಡು ಕೊಠಡಿಗಳ ಪೈಕಿ ಒಂದು ಕೊಠಡಿಯಲ್ಲಿ ಕಾಂಗ್ರೆಸ್ ಮುನ್ನಡೆ
ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಕಣದಲ್ಲಿರುವ 13 ಅಭ್ಯರ್ಥಿಗಳ ಹಣೆಬರಹ ಇಂದು ಬಹಿರಂಗವಾಗಲಿದೆ.
ಅಭ್ಯರ್ಥಿಗಳು:
ಶಿವರಾಜ ಶರಣಪ್ಪ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ನಿಯಾಜ್ ಶೇಖ್ (ಜೆಡಿಎಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ಶಿವಕುಮಾರ ತಳವಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ನಜೀರ ಅಹಮದ್ ಸವಣೂರ (ಪಕ್ಷೇತರ), ಪರಶುರಾಮ ಹೊಂಗಲ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್.ಎಸ್. ದೊಡ್ಡಲಿಂಗಣ್ಣನವರ, ಸೋಮಶೇಖರ ಮಹದೇವಪ್ಪ ಕೋತಂಬರಿ(ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ(ಪಕ್ಷೇತರ).
ಎಣಿಕೆ ಕೇಂದ್ರದಲ್ಲಿ ಮೊಬೈಲ್ ದೂರವಾಣಿಗಳು, ಎಲೆ ಅಡಿಕೆ, ಗುಟ್ಕಾ, ಬೀಡಿ-ಸಿಗರೇಟ್, ಪಾನ್ ಮಸಾಲಾ, ತಿಂಡಿ ತಿನಿಸುಗಳು, ಕುಡಿಯುವ ನೀರು ಮತ್ತು ಶಸ್ತ್ರಾಸ್ತ್ರ ಮುಂತಾದವುಗಳಿಗೆ ಪ್ರವೇಶವಿಲ್ಲ. ಚಾಕು, ಕತ್ತರಿ, ಕಡ್ಡಿಪೆಟ್ಟಿಗೆ ಮತ್ತು ಅಗ್ನಿ ಅವಘಡಕ್ಕೆ ಆಹ್ವಾನ ನೀಡುವ ವಸ್ತುಗಳನ್ನು ನಿಷೇಧಿಸಲಾಗಿದೆ.
ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ; ವಿಜಯೋತ್ಸವ ನಿಷೇಧ
ಈಗಾಗಲೇ ಹಾವೇರಿ ಜಿಲ್ಲೆಯಾದ್ಯಂತ 144 ಕಲಂ ಜಾರಿಗೊಳಿಸಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಾನಗಲ್, ಹಾವೇರಿ, ದೇವಗಿರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ವಿಶೇಷ ಪೊಲೀಸ್ ಭದ್ರತೆ ಹಾಕಲಾಗಿದೆ. ವಿಜಯೋತ್ಸವ, ಮೆರವಣಿಗೆ ನಿಷೇಧಿಸಲಾಗಿದೆ. ಜಿಲ್ಲೆಯಾದ್ಯಂತ ನ.5ರವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಪ್ರಮಾಣ ಪತ್ರ ಪಡೆಯಲು ಅಭ್ಯಥಿ೯ ಜೊತೆ ಇಬ್ಬರಿಗೆ ಮಾತ್ರ ಅವಕಾಶ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ 4 ಡಿವೈಎಸ್ಪಿ, 5 ಸಿಪಿಐ, 23 ಪಿಎಸ್‌ಪಿ, 25 ಎಎಸ್‌ಐ, 282 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸೈನಿಕ್ ಶಾಲೆಯ ಹೊರಭಾಗದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ.
ವಿಜಯಪುರ: ರಾಜ್ಯದ ಗಮನ ಸೆಳೆದಿರುವ ಸಿಂದಗಿ ಉಪ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯತ್ತಿರುವ ಮತ ಎಣಿಕೆ ಕಾರ್ಯದ ಆರಂಭದಲ್ಲಿ ಅಂಚೆ ಮತಪತ್ರಗಳ ಎಣಿಕೆ ನಡೆದಿದೆ.
ಮತಎಣಿಕೆ ಎರಡು ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್‌ನಂತೆ ಒಟ್ಟು 14 ಟೇಬಲ್ ಇದೆ. ಪ್ರತಿ ಟೇಬಲ್‌ಗೆ ತಲಾ ಒಬ್ಬ ಮೈಕ್ರೋ ಅಬ್ಸರ್ವರ್ ಒಬ್ಬ ಮತಎಣಿಕೆ ಮೇಲ್ವಿಚಾರಕ, ಒಬ್ಬ ಮತಎಣಿಕೆ ಸಹಾಯಕರು ಸೇರಿದಂತೆ ಒಟ್ಟು 60 ಸಿಬ್ಬಂದಿ ಮತ ಎಣಿಕೆಯಲ್ಲಿ ತೊಡಗಿದ್ದಾರೆ. ಒಟ್ಟು 22 ಸುತ್ತು ಮತಎಣಿಕೆ ನಡೆಯಲಿದೆ.
ಇಟಿಪಿಬಿಎಸ್ ಮತ್ತು ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಿದೆ. ಒಟ್ಟು 463 ಅಂಚೆ ಮತಪತ್ರಗಳು, 14 ಇಟಿಪಿಬಿಎಸ್ ಮತಗಳು ಚಲಾವಣೆ ಆಗಿವೆ.
ಬಿಜೆಪಿ–ಕಾಂಗ್ರೆಸ್ ನಡುವಿನ ತೀವ್ರ ಜಿದ್ದಾಜಿದ್ದಿ ಕಣವಾದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಿಗ್ಗೆ 8ಕ್ಕೆ ಆರಂಭಗೊಂಡಿತು.
ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನರಾದ ಹಿನ್ನೆಲೆಯಲ್ಲಿ ಹಾನಗಲ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ. ಈಗ ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಸೇರಿದಂತೆ 13 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ.
ಕಾಂಗ್ರೆಸ್‌ನ ಅಶೋಕ ಮನಗೂಳಿ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿಎಸ್‌ನ ನಾಜಿಯಾ ಶಕೀಲ್ ನಡುವೆ ತುರುಸಿನ ಪೈಪೋಟಿ ನಡೆದಿದ್ದು, ಈ ಮೂವರಲ್ಲಿ ಯಾರು ಮುಂದಿನ ಒಂದೂವರೆ ವರ್ಷದ ಅವಧಿಗೆ ಸಿಂದಗಿ ಶಾಸಕರಾಗುತ್ತಾರೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಲಭಿಸಲಿದೆ.
ಒಂದೆಡೆ ಕಾಂಗ್ರೆಸ್‌ನವರು, ಇನ್ನೊಂದೆಡೆ ಬಿಜೆಪಿಯವರು ತಮ್ಮದೇ ಗೆಲುವು ಎಂಬ ಲೆಕ್ಕೆಚಾರದಲ್ಲಿ ಬೀಗುತ್ತಿದ್ದಾರೆ. ವಿಜಯೋತ್ಸವಕ್ಕೂ ಅಣಿಯಾಗಿದ್ದಾರೆ. ಮತದಾರರ ಆಶೀರ್ವಾದ ಯಾರ ಪರ ಇರಲಿದೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ ದೇಶದ 29 ವಿಧಾನಸಭಾ ಕ್ಷೇತ್ರಗಳು ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಇಂದು ನಡೆಯುತ್ತಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಎಣಿಕೆ ನಡೆಯುತ್ತಿದೆ.
2018ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 70.85ರಷ್ಟು ಮತದಾನವಾಗಿತ್ತು. ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ 69.41 ರಷ್ಟು ಮತದಾನವಾಗಿದೆ.
ಸಿಂದಗಿ ಕಣದಲ್ಲಿ 6 ಹಾಗೂ ಹಾನಗಲ್ ಕಣದಲ್ಲಿ 13 ಅಭ್ಯರ್ಥಿಗಳಿದ್ದಾರೆ. ಸಿಂದಗಿ ಕ್ಷೇತ್ರದ ಶಾಸಕ ಎಂ.ಸಿ. ಮನಗೂಳಿ ಹಾಗೂ ಹಾನಗಲ್ ಕ್ಷೇತ್ರದ ಶಾಸಕ ಸಿ.ಎಂ. ಉದಾಸಿ ಅವರ ಸಾವಿನಿಂದ ತೆರವಾಗಿದ್ದ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ.
ಹಾನಗಲ್ ಉಪಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ– ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಅಕ್ಟೋಬರ್ 30 ರಂದು ನಡೆದ ಮತದಾನದಲ್ಲಿ ಒಟ್ಟಾರೆ 2,04,481 ಮತದಾರರ ಪೈಕಿ 1,71,264 ಜನರು ಮತ ಚಲಾಯಿಸಿದ್ದಾರೆ. ಶೇ 83.76ರಷ್ಟು ಮತ ಚಲಾವಣೆಯಾಗಿದೆ. 463 ಅಂಚೆ ಮತ ಚಲಾವಣೆ ಹಾಗೂ 12 ಸೇವಾ ಮತಗಳು ಚಲಾವಣೆಯಾಗಿವೆ. 263 ಮತಗಟ್ಟೆಗಳ ಪೈಕಿ ಗಡಿಯಂಕನಹಳ್ಳಿಯ 140ರ ಮತಗಟ್ಟೆ ಸಂಖ್ಯೆಯಲ್ಲಿ ಅತಿ ಹೆಚ್ಚು ಶೇ 95.11ರಷ್ಟು ಮತದಾನವಾಗಿದೆ ಹಾಗೂ ಹಾನಗಲ್ ನಗರದ 103ರ ಮತಗಟ್ಟೆ ಸಂಖ್ಯೆಯಲ್ಲಿ ಶೇ 66.61ರಷ್ಟು ಕಡಿಮೆ ಮತದಾನವಾಗಿದೆ.
ಬೆಳಿಗ್ಗೆ 7.45ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭಿಸಲಾಗುತ್ತದೆ. ಬೆಳಿಗ್ಗೆ 8 ಗಂಟೆಗೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.
ಶಾಸಕರಾಗಿದ್ದ ಸಿ.ಎಂ.ಉದಾಸಿ ನಿಧನರಾದ ಹಿನ್ನೆಲೆಯಲ್ಲಿ ಹಾನಗಲ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ. ಈಗ ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಸೇರಿದಂತೆ 13 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಬಿಜೆಪಿ–ಕಾಂಗ್ರೆಸ್ ನಡುವಿನ ತೀವ್ರ ಜಿದ್ದಾಜಿದ್ದಿ ಕಣವಾದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ವಿಜಯಪುರ ನಗರದ ಸೈನಿಕ ಶಾಲೆಯ ‘ಒಡೆಯರ ಹೌಸ್’ನಲ್ಲಿ ಸಿಂದಗಿ ಕ್ಷೇತ್ರದ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಟ್ಟು 22 ಸುತ್ತು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.