ಹಿರೇಕೆರೂರು: ಪಟ್ಟಣದಲ್ಲಿ ಏ.6ರಂದು ಬಿಜೆಪಿಯ ಕೇಸರಿ ಮಹಿಳಾ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ‘ಮಹಿಳಾ ಸಂಗಮ’ ಕಾರ್ಯಕ್ರಮದಲ್ಲಿ ಚಿತ್ರನಟಿ ಶ್ರುತಿ ಮಾಡಿದ ಭಾಷಣ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪುಗಳ ನಡುವೆ ದ್ವೇಷ ಮತ್ತು ವೈಮನಸ್ಸು ಭಾವನೆಗಳನ್ನುಂಟು ಮಾಡುವ ಹೇಳಿಕೆಯಾಗಿದೆ ಎಂದು ಆರೋಪಿಸಿ, ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಬಿಜೆಪಿಯ ತಾರಾ ಪ್ರಚಾರಕಿ ಯಾಗಿ ಆಗಮಿಸಿದ್ದ ನಟಿ ಶ್ರುತಿ ತಮ್ಮ ಭಾಷಣದಲ್ಲಿ ‘ನಿಮ್ಮ ವಂಶ ಉದ್ಧಾರವಾಗಲು ಯಾರಿಗೆ ಮತ ನೀಡಬೇಕು, ಬೇರೆಯವರಿಗೆ ಮತ ಹಾಕಿದರೆ ಯಾರ ವಂಶ ಉದ್ಧಾರವಾಗುತ್ತದೆ’ ಎಂಬ ಬಗ್ಗೆ ನೀಡಿರುವ ಹೇಳಿಕೆಯು ವೈರತ್ವ ಉಂಟು ಮಾಡುವ ಮತ್ತು ಭೀತಿಯನ್ನು ಹುಟ್ಟಿಸುವ ಹೇಳಿಕೆಯಾಗಿದೆ ಎಂದು ಎಂಸಿಸಿ ನೋಡಲ್ ಅಧಿಕಾರಿ ಪಂಪಾಪತಿ ನಾಯಕ್ ವಿಡಿಯೊ ದಾಖಲೆ ಸಹಿತ ಹಿರೇಕೆರೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಪಿಸಿಸಿ ವಕ್ತಾರ ಲಕ್ಷ್ಮಣ ನಟಿಯ ಹೇಳಿಕೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.