ಬೆಂಗಳೂರು: ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಆರ್ಥಿಕ ಸಲಹೆಗಾರರು, ನೀತಿ ಆಯೋಗ ಮತ್ತು ಯೋಜನಾ ಉಪಾಧ್ಯಕ್ಷರ ಹುದ್ದೆಗಳಿಗೆ ನೇಮಕಗೊಳ್ಳಲು ಸದಸ್ಯತ್ವದಿಂದ ಅನರ್ಹರಾಗುವುದರಿಂದ ವಿನಾಯಿತಿ ನೀಡಲು ವಿಧಾನಸಭೆಯಲ್ಲಿ ಶುಕ್ರವಾರ ‘ಕರ್ನಾಟಕ ವಿಧಾನಮಂಡಲ ತಿದ್ದುಪಡಿ ಮಸೂದೆ’ ಮಂಡಿಸಲಾಯಿತು.
ರಾಜ್ಯದಲ್ಲಿನ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿಗಾಗಿ ಮಂಡಳಿ ರಚಿಸಲು ಮತ್ತು ಹಣಕಾಸು ಯೋಜನೆಗಳಿಗಾಗಿ ನಿಧಿ ಸ್ಥಾಪಿಸುವ ಉದ್ದೇಶದಿಂದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ ಮಸೂದೆ) ಮಸೂದೆಯನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ ಮಂಡಿಸಿದರು.
ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಉತ್ಪಾದನೆಯಲ್ಲಿ ಬಳಸುವ ಯಂತ್ರಗಳ ನೋಂದಣಿಯನ್ನು ಮಾಡದಿರುವುದಕ್ಕಾಗಿ ದಂಡ ವಿಧಿಸುವುದಕ್ಕಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆಯನ್ನೂ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.