ಬೆಂಗಳೂರು:ರೈತರ ಸಾಲ ಮನ್ನಾ ಮೊತ್ತ ಸೇರಿದಂತೆ ₹2,18,488 ಕೋಟಿ ಗಾತ್ರದಬಜೆಟ್ ಅನ್ನು ಮೈತ್ರಿ ಸರ್ಕಾರದಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದರು.
ಈ ಮೊತ್ತವನ್ನು ಯಾವ್ಯಾವ ಮೂಲಗಳಿಂದ ಹೊಂದಿಸಲಿದ್ದಾರೆ. ಎಂಬೆಲ್ಲ ಮಾಹಿತಿ ವಿವರ ಇಲ್ಲಿದೆ.
ರಾಜ್ಯದ ಕೃಷಿ ವಲಯ ಶೇ 4.9ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆ ಇದ್ದು, ಕೈಗಾರಿಕಾ ವಲಯವು ಶೇ 4.9ರಷ್ಟು ಬೆಳವಣಿಗೆಯನ್ನು ಹಾಗೂ ಸೇವಾ ವಲಯವು ಶೇ 10.4ರಷ್ಟು ಬೆಳವಣಿಗೆ ದರವನ್ನು ದಾಖಲಿಸಲಿದೆ ಎಂಬ ನಿರೀಕ್ಷೆ ಇದೆ ಎಂದು ಸಿಎಂ ಹೇಳಿದರು.
2018–19ನೇ ಸಾಲಿನಲ್ಲಿ ಒಟ್ಟು ಜಮೆ ₹2,13,734 ಕೋಟಿಗಳಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ 1,66,396 ಕೋಟಿ ರಾಜಸ್ವ ಜಮೆಗಳು ಹಾಗೂ ₹ 47,134 ಕೋಟಿಸಾಲ ಸೇರಿದಂತೆ ₹ 47,338 ಕೋಟಿಗಳ ಬಂಡವಾಳ ಜಮೆ ಒಳಗೊಂಡಿದೆ. ₹ 1,66,290 ಕೋಟಿಗಳ ರಾಜಸ್ವ ವೆಚ್ಚ, ₹41,063 ಕೋಟಿಗಳ ಬಂಡವಾಳ ಹಾಗೂ ಸಾಲದ ಮರುಪಾವತಿ ₹11,136 ಕೋಟಿಗಳ ವೆಚ್ಚವನ್ನು ಒಳಗೊಂಡು ಒಟ್ಟು ವೆಚ್ಚವು ₹ 2,18,488 ಕೋಟಿಗಳ ಅಂದಾಜು ಮಾಡಲಾಗಿದೆ.
* ರಾಜಸ್ವ ಹೆಚ್ಚುವರಿ/ಕೊರತೆ ₹106 ಕೋಟಿ.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.