ಬೆಂಗಳೂರು: ಸಿವೋಟರ್, ಪಬ್ಲಿಕ್ ಟಿವಿಗಳ ಮತಗಟ್ಟೆ ಸಮೀಕ್ಷೆ ಉಪಚುನಾವಣೆಯ ಮತದಾನದ ಅವಧಿ ಅಂತ್ಯಗೊಂಡ ನಂತರ ಪ್ರಕಟವಾಯಿತು. ಎರಡೂ ಸಮೀಕ್ಷೆಗಳು ಬಿಜೆಪಿಯ ಮುನ್ನಡೆ ಸಾಧಿಸಲಿದೆ ಎಂದೇ ಅಭಿಪ್ರಾಯಪಟ್ಟಿವೆ.
ಸಿವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 9ರಿಂದ 12, ಕಾಂಗ್ರೆಸ್‌ಗೆ 3ರಿಂದ 6 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಿಗಲಿದೆ.
ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಬಿಜೆಪಿಗೆ 8ರಿಂದ 10, ಕಾಂಗ್ರೆಸ್‌ಗೆ 3ರಿಂದ 5, ಜೆಡಿಎಸ್‌ಗೆ 1ರಿಂದ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧ್ಯವಾಗಲಿದೆ.
ಬಿಜೆಪಿ ಸಮೀಕ್ಷೆ ಪ್ರಕಾರ ಬಿಜೆಪಿಗೆ 10ರಿಂದ 12, ಕಾಂಗ್ರೆಸ್‌ಗೆ 2ರಿಂದ 4, ಜೆಡಿಎಸ್‌ಗೆ 1ರಿಂದ 2 ಕ್ಷೇತ್ರಗಳಲ್ಲಿ ಮೇಲುಗೈ ಸಾಧ್ಯ.
ಜೆಡಿಎಸ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 5–6, ಕಾಂಗ್ರೆಸ್‌ಗೆ 5–6, ಜೆಡಿಎಸ್‌ಗೆ 4–5 ಮತ್ತು ಇತರರಿಗೆ 0–1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧ್ಯ.
ಎಲ್ಲಿ ಯಾರು ಮೇಲುಗೈ?
ಸಿವೋಟರ್ ಸಮೀಕ್ಷೆ ಪ್ರಕಾರಮಹಾಲಕ್ಷ್ಮೀ ಲೇಔಟ್– ಗೋಪಾಲಯ್ಯ,ಕೆ.ಆರ್.ಪುರಂ –ಭೈರತಿ ಬಸವರಾಜ್, ಗೋಕಾಕ– ರಮೇಶ ಜಾರಕಿಹೊಳಿ,ಅಥಣಿ– ಮಹೇಶ್ ಕುಮಠಳ್ಳಿ,ಹಿರೇಕೆರೂರು– ಬಿ.ಸಿ.ಪಾಟೀಲ್, ಯಲ್ಲಾಪುರ– ಶಿವರಾಮ ಹೆಬ್ಬಾರ್,ಯಶವಂತಪುರ– ಸೋಮಶೇಖರ್,ವಿಜಯನಗರ– ಆನಂದ್‌ಸಿಂಗ್, ಹೊಸಕೋಟೆ– ಎಂಟಿಬಿ ನಾಗರಾಜ್ ಮತ್ತುಚಿಕ್ಕಬಳ್ಳಾಪುರದಲ್ಲಿಡಾ.ಕೆ.ಸುಧಾಕರ್,ವಿಜಯನಗರ– ಆನಂದ್‌ಸಿಂಗ್,ಕಾಗವಾಡ– ಕಾಂಗ್ರೆಸ್‌ನ ರಾಜು ಕಾಗೆ ಮುನ್ನಡೆ ಸಾಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.