ADVERTISEMENT

ರಾಜ್ಯ ಸಚಿವ ಸಂಪುಟ ರಚನೆ: ಬೊಮ್ಮಾಯಿ ಟೀಂ ಪರಿಚಯ ಇಲ್ಲಿದೆ..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಸಚಿವರ ಸೇರ್ಪಡೆಯಾಗಿದೆ. ಈ ಸಚಿವರ ಕಿರು ಪರಿಚಯ ಇಲ್ಲಿದೆ.ಸಂಪುಟದ 29 ಸಚಿವರು1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ2.ಆರ್.ಅಶೋಕ್- ಪದ್ಮನಾಭ ನಗರ3.ಬಿ.ಸಿ ಪಾಟೀಲ - ಹಿರೇಕೇರೂರು4.ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು6. ಉಮೇಶ್ ಕತ್ತಿ- ಹುಕ್ಕೇರಿ7.ಎಸ್.ಟಿ.ಸೋಮಶೇಖರ್- ಯಶವಂತಪುರ8.ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ9.ಬೈರತಿ‌ ಬಸವರಾಜ - ಕೆ ಆರ್ ಪುರಂ10.ಮುರುಗೇಶ್ ನಿರಾಣಿ - ಬಿಳಿಗಿ11.ಶಿವರಾಂ ಹೆಬ್ಬಾರ್- ಯಲ್ಲಾಪುರ12.ಶಶಿಕಲಾ ಜೊಲ್ಲೆ- ನಿಪ್ಪಾಣಿ13.ಕೆಸಿ ನಾರಾಯಣ ಗೌಡ - ಕೆ‌ಆರ್ ಪೇಟೆ14.ಸುನೀಲ್ ಕುಮಾರ್ - ಕಾರ್ಕಳ15.ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ16.ಗೋವಿಂದ ಕಾರಜೋಳ-ಮುಧೋಳ17.ಮುನಿರತ್ನ- ಆರ್ ಆರ್ ನಗರ18.ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ21.ಹಾಲಪ್ಪ ಆಚಾರ್ - ಯಲ್ಬುರ್ಗ22.ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ23.ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ24.ಪ್ರಭು ಚೌವ್ಹಾಣ್ - ಔರಾದ್25.ವಿ ಸೋಮಣ್ಣ - ಗೋವಿಂದ್ ರಾಜನಗರ26.ಎಸ್ ಅಂಗಾರ-ಸುಳ್ಯ27.ಆನಂದ್ ಸಿಂಗ್ - ಹೊಸಪೇಟೆ28.ಸಿ.ಸಿ‌ ಪಾಟೀಲ - ನರಗುಂದ29. ಬಿಸಿ ನಾಗೇಶ್ - ತಿಪಟೂರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 13:45 IST
Last Updated 4 ಆಗಸ್ಟ್ 2021, 13:45 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಸಚಿವರ ಸೇರ್ಪಡೆಯಾಗಿದೆ. ಈ ಸಚಿವರ ಕಿರು ಪರಿಚಯ ಇಲ್ಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಸಚಿವರ ಸೇರ್ಪಡೆಯಾಗಿದೆ. ಈ ಸಚಿವರ ಕಿರು ಪರಿಚಯ ಇಲ್ಲಿದೆ.   
ಹೆಸರು: ಶಂಕರಪಾಟೀಲ ಮುನೇನಕೊಪ್ಪ | ಕ್ಷೇತ್ರ/ ಜಿಲ್ಲೆ (ನವಲಗುಂದ, ಧಾರವಾಡ) | ವಯಸ್ಸು: 52 | ವಿದ್ಯಾರ್ಹತೆ: ಬಿ.ಎ | ಜಾತಿ: ಲಿಂಗಾಯತ (ಪಂಚಮದಾಲಿ) | ವಿಧಾನಸಭೆ: ಎರಡನೇ ಬಾರಿ ಶಾಸಕ ಸಚಿವರಾದ ಅನುಭವ: ಮೊದಲ ಬಾರಿಗೆ ಸಚಿವ ಸ್ಥಾನ | ವೃತ್ತಿ: ಕೃಷಿ | ರಾಜಕೀಯ ಅನುಭವ: 2008ರಲ್ಲಿ ಮೊದಲ ಬಾರಿಗೆ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2013ರಲ್ಲಿ ಸೋಲನುಭವಿಸಿದ್ದರು. 2018ರಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಅವರ ಸಂಸದೀಯ ಕಾರ್ಯದರ್ಶಿಯಾಗಿದ್ದರು. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿದ್ದರು.
ಎಸ್. ಅಂಗಾರ | ಕ್ಷೇತ್ರ: ಸುಳ್ಯ (ಮೀಸಲು) |ವಯಸ್ಸು–56 |ಜಾತಿ: ಪರಿಶಿಷ್ಟ ಜಾತಿ (ಮೊಗೇರ) |ವಿದ್ಯಾರ್ಹತೆ: 8ನೇ ತರಗತಿ| ವೃತ್ತಿ: ಕೃಷಿ |ಜನ್ಮ ಸ್ಥಳ: ಸುಳ್ಯ ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ |ವಾಸ: ಸುಳ್ಯ ತಾಲ್ಲೂಕಿನ ಅಮರಮುಡ್ನೂರು ಗ್ರಾಮದ ಕುಂಟಿಕಾನ| ಪತ್ನಿ: ವೇದಾವತಿ | ಮಕ್ಕಳು: ಗೌತಮ್‌, ಪೂಜಾಶ್ರೀ |ರಾಜಕೀಯ ಅನುಭವ: 8ನೇ ತರಗತಿ ಪೂರೈಸಿದ ಬಳಿಕ ಕೂಲಿ ಕೆಲಸ. ಆರ್‌ಎಸ್‌ಎಸ್‌ ನಂಟಿನ ಮೂಲಕ ಬಿಜೆಪಿ ಸೇರ್ಪಡೆ. 1988ರ ಚುನಾವಣೆಯಲ್ಲಿ ಸೋಲು. 1994ರ ನಂತರ ಸತತ ಆರನೇ ಬಾರಿ ಆಯ್ಕೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ವಿವಿಧ ಸಾಂವಿಧಾನಿಕ ಸಮಿತಿಗಳಲ್ಲಿ ಕೆಲಸ ನಿರ್ವಹಣೆ.
ಔರಾದ್‍ ಶಾಸಕ ಪ್ರಭು ಚವಾಣ್ ಅವರ ಕಿರು ಪರಿಚಯ ಹೆಸರು: ಪ್ರಭು ಚವಾಣ್| ಕ್ಷೇತ್ರ: ಔರಾದ್(ಮೀಸಲು), ಬೀದರ್ ಜಿಲ್ಲೆ |ವಯಸ್ಸು: 52 |ವಿದ್ಯಾರ್ಹತೆ: ಪಿಯುಸಿ |ಜಾತಿ: ಪರಿಶಿಷ್ಟ ಜಾತಿ ಲಂಬಾಣಿ |ವಿಧಾನಸಭೆ: 3ನೇ ಬಾರಿ ವಿಧಾನಸಭೆ ಸದಸ್ಯರು |ಅನುಭವ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ವಕ್ಫ್, ಹಜ್, ಹಾಗೂ ಪಶು ಸಂಗೋಪನೆ ಹಾಗೂ ಯಾದಗಿರಿ, ಬೀದರ್ ಜಿಲ್ಲೆ ಉಸ್ತುವಾರಿ ಸಚಿವರು| ವೃತ್ತಿ: ಉದ್ಯಮಿ
ಹೆಸರು: ಹಾಲಪ್ಪ ಬಸಪ್ಪ ಆಚಾರ| ಕ್ಷೇತ್ರ: ಯಲಬುರ್ಗಾ| ವಿದ್ಯಾರ್ಹತೆ: ಪದವಿ| ಜಾತಿ: ಲಿಂಗಾಯತ ರಡ್ಡಿ |ವಿಧಾನ ಪರಿಷತ್ ಸದಸ್ಯರಾಗಿ ಒಂದು ಅವಧಿಗೆ ಆಯ್ಕೆ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆ |ವೃತ್ತಿ: ಉದ್ಯಮಿ, ಕೃಷಿಕ ಅನುಭವ: ರಾಯಚೂರು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಸಹಕಾರ ಮಹಾಮಂಡಳಿ ಅಧ್ಯಕ್ಷರಾಗಿ ಸೇವೆ. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಇಫ್ಕೋ ನಿರ್ದೇಶಕ.
ಹೆಸರು: ಉಮೇಶ ಕತ್ತಿ, |ಜಿಲ್ಲೆ: ಹುಕ್ಕೇರಿ, ಬೆಳಗಾವಿ ಜಿಲ್ಲೆ| ವಯಸ್ಸು: 61| ವಿದ್ಯಾರ್ಹತೆ: ಪಿಯುಸಿ ಅಪೂರ್ಣ |ಜಾತಿ: ವೀರಶೈವ ಲಿಂಗಾಯತ (ಬಣಜಿಗ) |ವಿಧಾನಸಭೆ ಸದಸ್ಯತ್ವ: 9 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ. ಉಪ ಚುನಾವಣೆ ಸೇರಿ 8 ಬಾರಿ ಗೆಲುವು. ತಂದೆ ವಿಶ್ವನಾಥ ಕತ್ತಿ ಅವರ ಅಕಾಲಿಕ ನಿಧನದಿಂದ ತೆರವಾದ ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಜನತಾ ಪಕ್ಷದಿಂದ ಗೆದ್ದು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆಗ ಅವರಿಗೆ 25ರ ಹರೆಯ. 1989, 1994ರಲ್ಲಿ ಶಾಸಕರಾಗಿ ಪುನರಾಯ್ಕೆಯಾದ ನಂತರ ರಾಜಕೀಯ ಜೀವನದಲ್ಲಿ ಅನೇಕ ಬದಲಾವಣೆಗಳಾದವು. 2008ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಗೆದ್ದು ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಣೆ. ಬಳಿಕವೂ ಬಿಜೆಪಿಯಿಂದಲೇ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಸಚಿವರಾದ ಅನುಭವ: ನಾಲ್ಕು ಬಾರಿ ಸಚಿವರಾಗಿ ಕಾರ್ಯನಿರ್ವಹಣೆ. ಈಗ 5ನೇ ಬಾರಿಗೆ ಸಚಿವ. ಜೆ.ಎಚ್. ಪಟೇಲ್ ಮತ್ತು ಬಿ.ಎಸ್. ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಕ್ಕರೆ, ಲೋಕೋಪಯೋಗಿ, ತೋಟಗಾರಿಕೆ, ಬಂದಿಖಾನೆ, ಕೃಷಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನಿರ್ವಹಿಸಿದ ಅನುಭವ ಅವರದು. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ನಿರ್ವಹಣೆ. |ವೃತ್ತಿ: ಕೃಷಿ, ಉದ್ಯಮ.
ಹೆಸರು: ಶಶಿಕಲಾ ಜೊಲ್ಲೆ |ವಯಸ್ಸು:52 |ಕ್ಷೇತ್ರ: ನಿಪ್ಪಾಣಿ, ಬೆಳಗಾವಿ ಜಿಲ್ಲೆ |ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ |ಜಾತಿ: ವೀರಶೈವ ಲಿಂಗಾಯತ (ಚತುರ್ಥ)| ವಿಧಾನಸಭೆ ಸದಸ್ಯತ್ವ: 2008ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 2013 ಮತ್ತು 2018ರ ಚುನಾವಣೆಯಲ್ಲಿ ಗೆದ್ದಿದ್ದಾರೆ.‌ | ಸಚಿವರಾದ ಅನುಭವ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಬಲೀಕರಣ ಸಚಿವರಾಗಿ ಕಾರ್ಯನಿರ್ವಹಣೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈಗ 2ನೇ ಬಾರಿಗೆ ಸಚಿವ ಸ್ಥಾನ ದೊರೆತಿದೆ. ಜೊಲ್ಲೆ ಉದ್ಯೋಗ ಸಮೂಹದ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರ ಪತಿ, ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ.| ವೃತ್ತಿ: ಕೃಷಿ, ಉದ್ಯಮಿ.
ಹೆಸರು: ವಿ.ಸುನೀಲ್ ಕುಮಾರ್| ಕ್ಷೇತ್ರ– ಕಾರ್ಕಳ, ಉಡುಪಿ ಜಿಲ್ಲೆ |ವಯಸ್ಸು: 45 |ವಿದ್ಯಾರ್ಹತೆ: ಬಿಎ |ಜಾತಿ: ಬಿಲ್ಲವ |ವಿಧಾನಸಭೆ– ಮೂರು ಬಾರಿ ಶಾಸಕನಾಗಿ ಆಯ್ಕೆ (2004, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಗೋಪಾಲ ಭಂಡಾರಿ ವಿರುದ್ಧ ಗೆಲುವು) |ಸಚಿವರಾದ ಅನುಭವ: ಮೊದಲ ಬಾರಿ ಸಚಿವರಾಗುತ್ತಿದ್ದಾರೆ. ಸರ್ಕಾರದ ಮುಖ್ಯ ಸಚೇತಕರಾಗಿ, ಕೇರಳ ಬಿಜೆಪಿ ಸಹ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. |ವೃತ್ತಿ– ವ್ಯಾಪಾರ, ಕೃಷಿ
ಹೆಸರು: ಕೋಟ ಶ್ರೀನಿವಾಸ ಪೂಜಾರಿ| ಕ್ಷೇತ್ರ– ಕೋಟ, ಉಡುಪಿ ಜಿಲ್ಲೆ |ವಯಸ್ಸು: 61 |ವಿದ್ಯಾರ್ಹತೆ: 7ನೇ ತರಗತಿ |ಜಾತಿ: ಬಿಲ್ಲವ |ವಿಧಾನ ಪರಿಷತ್‌– ಮೂರು ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆ (1999, 2010, 2016ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆ) ಸಚಿವರಾದ ಅನುಭವ: ಎರಡು ಬಾರಿ ಸಚಿವ (2012ರಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಖಾತೆ ಸಚಿವ, 2018ರಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವರಾಗಿದ್ದರು.) |ವೃತ್ತಿ– ಕೃಷಿ
ಹೆಸರು: ಗೋವಿಂದ ಕಾರಜೋಳ| ಕ್ಷೇತ್ರ: ಮುಧೋಳ/ ಜಿಲ್ಲೆ: ಬಾಗಲಕೋಟೆ | ವಯಸ್ಸು: 72 |ವಿದ್ಯಾರ್ಹತೆ: ಡಿಪ್ಲೊಮಾ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್ |ಜಾತಿ: ಪರಿಶಿಷ್ಟ ಜಾತಿ | ವಿಧಾನಸಭೆ–ಐದನೇ ಬಾರಿ ಆಯ್ಕೆ ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ |ಸಚಿವರಾದ ಅನುಭವ: ಲೋಕೋಪಯೋಗಿ, ಸಮಾಜ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ, ಅಂಕಿ-ಅಂಶ| ವೃತ್ತಿ–ಲೋಕೋಪಯೋಗಿ ಇಲಾಖೆ ಮಾಜಿ ನೌಕರ
ಷೇತ್ರ: ಬೀಳಗಿ/ ಜಿಲ್ಲೆ: ಬಾಗಲಕೋಟೆ ವಯಸ್ಸು: 56 ವಿದ್ಯಾರ್ಹತೆ: ಬಿಇ ಸಿವಿಲ್ ಜಾತಿ: ಲಿಂಗಾಯತ ಪಂಚಮಸಾಲಿ ವಿಧಾನಸಭೆ–ಮೂರನೇ ಬಾರಿ ಆಯ್ಕೆ ಸಚಿವರಾದ ಅನುಭವ: ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ವೃತ್ತಿ–ಉದ್ಯಮಿ
ತಿಪಟೂರು ಶಾಸಕ ಬಿ.ಸಿ.ನಾಗೇಶ್ ಹೆಸರು: ಬಿ.ಸಿ.ನಾಗೇಶ್ ಕ್ಷೇತ್ರ: ತಿಪಟೂರು, ತುಮಕೂರು ಜಿಲ್ಲೆ ವಯಸ್ಸು: 62 ವಿದ್ಯಾರ್ಹತೆ: ಬಿ.ಇ ಜಾತಿ: ಬ್ರಾಹ್ಮಣ ಪರಿಚಯ: ಇದೇ ಮೊದಲ ಬಾರಿಗೆ ಸಚಿವರು. ವಿಧಾನಸಭೆಗೆ ಎರಡು ಬಾರಿ ಆಯ್ಕೆ, ಎರಡು ಬಾರಿ ಸೋಲು. ಆರಂಭದಿಂದಲೂ ಎಬಿವಿಪಿ, ಆರ್‌ಎಸ್‌ಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಬಿಜೆಪಿ ಶಿಸ್ತು ಸಮಿತಿ ಸದಸ್ಯರಾಗಿದ್ದಾರೆ. ವೃತ್ತಿ: ಕೃಷಿ
ಹೆಸರು: ಜೆ.ಸಿ.ಮಾಧುಸ್ವಾಮಿ ಕ್ಷೇತ್ರ: ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ ವಯಸ್ಸು: 65 ವಿದ್ಯಾರ್ಹತೆ: ಬಿಎಸ್ಸಿ, ಎಲ್ಎಲ್‌ಬಿ ಜಾತಿ: ಲಿಂಗಾಯತ (ನೊಳಂಬ) ವಿಧಾನ ಸಭೆ ಸದಸ್ಯತ್ವ: 4ನೇ ಬಾರಿ. ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಹಾಗೂ ಕಾನೂನು, ನಂತರ ಸಣ್ಣ ನೀರಾವರಿ ಸಚಿವ. ವೃತ್ತಿ: ಕೃಷಿ
ಹೆಸರು: ಬಿ.ಶ್ರೀರಾಮುಲು ಕ್ಷೇತ್ರ/ಜಿಲ್ಲೆ: ಮೊಳಕಾಲ್ಮುರು, ಚಿತ್ರದುರ್ಗ ವಯಸ್ಸು: 50 ವಿದ್ಯಾರ್ಹತೆ: ಬಿ.ಎ. ಜಾತಿ: ಪರಿಶಿಷ್ಟ ಪಂಗಡ (ಎಸ್‌ಟಿ) ವಿಧಾನಸಭೆ ಸದಸ್ಯತ್ವ: ಐದು ಬಾರಿ ಶಾಸಕ (ಒಂದು ಉಪಚುನಾವಣೆ), ಒಮ್ಮೆ ಸಂಸದರಾಗಿ ಆಯ್ಕೆ ಸಚಿವರಾದ ಅನುಭವ: 1996ರಲ್ಲಿ ರಾಜಕೀಯ ಪ್ರವೇಶ. 2004ರಲ್ಲಿ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ. 2006ರ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಜವಳಿ ಖಾತೆ ಸಚಿವರಾಗಿ ಕೆಲಸ ಮಾಡಿದ ಅನುಭವ. 2008ರಲ್ಲಿ ಆರೋಗ್ಯ ಸಚಿವರಾಗಿ ಛಾಪು ಮೂಡಿಸಿದರು. 2011ರಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದರು. 2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದರು. 2014ರಲ್ಲಿ ಮತ್ತೆ ಬಿಜೆಪಿ ಸೇರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 2018ರಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಖಾತೆ ನಿರ್ವಹಿಸಿದ್ದಾರೆ. ವೃತ್ತಿ: ಸಮಾಜ ಸೇವೆ
ಸಚಿವ ಸಿ.ಸಿ.ಪಾಟೀಲ ಕಿರು ಪರಿಚಯ ಹೆಸರು: ಸಿ.ಸಿ.ಪಾಟೀಲ (ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ) ಕ್ಷೇತ್ರ/ ಜಿಲ್ಲೆ: ನರಗುಂದ, ಗದಗ ವಯಸ್ಸು: 62 (22.10.1958) ವಿದ್ಯಾರ್ಹತೆ: ಪಿಯುಸಿ ಜಾತಿ: ಲಿಂಗಾಯತ, ಪಂಚಮಸಾಲಿ ವಿಧಾನಸಭೆ: ಮೂರು ಬಾರಿ ಸಚಿವರಾದ ಅನುಭವ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಗಣಿ ಮತ್ತು ಭೂ ವಿಜ್ಞಾನ ಖಾತೆ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಖಾತೆ, ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ವೃತ್ತಿ: ಕೃಷಿ ಮತ್ತು ವ್ಯಾಪಾರ
ಹೆಸರು: ಬಿ.ಸಿ.ಪಾಟೀಲ ಕ್ಷೇತ್ರ/ ಜಿಲ್ಲೆ: ಹಿರೇಕೆರೂರು, ಹಾವೇರಿ ಜಿಲ್ಲೆ ವಯಸ್ಸು: 65 ವಿದ್ಯಾರ್ಹತೆ: ಬಿ.ಎ ಜಾತಿ: ಲಿಂಗಾಯತ ವೀರಶೈವ (ಸಾದರ) ವಿಧಾನಸಭೆ ಸದಸ್ಯತ್ವ: ನಾಲ್ಕು ಬಾರಿ (ಒಂದು ಉಪಚುನಾವಣೆ) ಸಚಿವರಾದ ಅನುಭವ: ಕೃಷಿ ಸಚಿವ ವೃತ್ತಿ: ಕೃಷಿ ಮತ್ತು ಚಲನಚಿತ್ರ ನಿರ್ಮಾಣ
ಕೆ.ಸಿ.ನಾರಾಯಣಗೌಡ, ಕೆ.ಆರ್‌.ಪೇಟೆ/ ಮಂಡ್ಯ ವಯಸ್ಸು: 59 ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಜಾತಿ: ಒಕ್ಕಲಿಗ ವೃತ್ತಿ: ಮುಂಬೈನಲ್ಲಿ ಹೋಟೆಲ್‌ ಉದ್ಯಮ ರಾಜಕೀಯ ಅನುಭವ: 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಸೋಲು. 2013, 2018ರಲ್ಲಿ ಜೆಡಿಎಸ್‌ನಿಂದ ಸತತ ಎರಡು ಬಾರಿ ಗೆಲುವು. ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅವರ ಗೆಲುವಿನ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತವರು ಕ್ಷೇತ್ರವಿದು. ಬಿ.ಎಸ್‌.ವೈ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವರಾಗಿದ್ದರು. ಖಾತೆ ಬದಲಾವಣೆ ಮಾಡಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಜವಾಬ್ದಾರಿ ನೀಡಲಾಗಿತ್ತು. ಈಗ 2ನೇ ಬಾರಿ ಸಚಿವರಾಗುತ್ತಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರ ವಿವರ ಹೆಸರು: ಆನಂದ್‌ ಸಿಂಗ್‌ ಕ್ಷೇತ್ರ/ ಜಿಲ್ಲೆ: ವಿಜಯನಗರ ಕ್ಷೇತ್ರ, ವಿಜಯನಗರ ಜಿಲ್ಲೆ ವಯಸ್ಸು: 55 ವಿದ್ಯಾರ್ಹತೆ: ಪಿಯುಸಿ ಜಾತಿ: ರಜಪೂತ್‌ ವಿಧಾನಸಭೆ–ಉಪಚುನಾವಣೆ ಸೇರಿದಂತೆ ನಾಲ್ಕು ಸಲ ವಿಧಾನಸಭೆ ಚುನಾವಣೆಯಲ್ಲಿ ಗೆಲುವು. ಉಪಚುನಾವಣೆ ಸೇರಿ ಮೂರು ಸಲ ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆ. ಒಂದು ಸಲ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆ. ಸಚಿವರಾದ ಅನುಭವ: ಈ ಹಿಂದೆ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದರು. ಬಿ.ಎಸ್‌. ಯಡಿಯೂರಪ್ಪನವರ ಸಂಪುಟದಲ್ಲಿ ಅರಣ್ಯ, ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ, ಮೂಲಸೌಕರ್ಯ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವರಾಗಿ ಕೆಲಸ ನಿರ್ವಹಣೆ ವೃತ್ತಿ–ಗಣಿ, ಸಾರಿಗೆ ಉದ್ಯಮ
ಎಸ್.ಟಿ.ಸೋಮಶೇಖರ್ ಕ್ಷೇತ್ರ/ಜಿಲ್ಲೆ: ಯಶವಂತಪುರ, ಬೆಂಗಳೂರು ವಯಸ್ಸು: 64 ವಿದ್ಯಾರ್ಹತೆ: ಬಿಎಸ್‌ಸಿ, ಎಲ್‌ಎಲ್‌ಬಿ ಜಾತಿ: ಒಕ್ಕಲಿಗ ರಾಜಕೀಯ ಅನುಭವ: ಮೂರು ಬಾರಿ ವಿಧಾನಸಭೆ ಸದಸ್ಯ (ಒಂದು ಉಪಚುನಾವಣೆ) ಸಚಿವರಾಗಿ ಅನುಭವ: ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ವೃತ್ತಿ: ಕೃಷಿ, ಸಹಕಾರಿ ಕ್ಷೇತ್ರ
ಹೆಸರು: ಆರಗ ಜ್ಞಾನೇಂದ್ರ ಕ್ಷೇತ್ರ/ಜಿಲ್ಲೆ: ತೀರ್ಥಹಳ್ಳಿ/ ಶಿವಮೊಗ್ಗ ವಯಸ್ಸು: 70 ವಿದ್ಯಾರ್ಹತೆ: ಬಿ.ಕಾಂ ಜಾತಿ: ಒಕ್ಕಲಿಗ ವಿಧಾನಸಭೆ– ನಾಲ್ಕು ಬಾರಿ ಸಚಿವರಾದ ಅನುಭವ: ಇಲ್ಲ ವೃತ್ತಿ–ಕೃಷಿಕ
ಹೆಸರು: ಕೆ.ಎಸ್.ಈಶ್ವರಪ್ಪ ಕ್ಷೇತ್ರ/ಜಿಲ್ಲೆ: ಶಿವಮೊಗ್ಗ ನಗರ/ ಶಿವಮೊಗ್ಗ ವಯಸ್ಸು: 73 ವಿದ್ಯಾರ್ಹತೆ: ಬಿ.ಕಾಂ ಜಾತಿ: ಕುರುಬ ವಿಧಾನಸಭೆ– ಐದು ಬಾರಿ, ಪರಿಷತ್‌ ಸದಸ್ಯತ್ವ– ಒಂದು ಬಾರಿ ಸಚಿವರಾದ ಅನುಭವ: ನಾಲ್ಕು ಭಾರಿ, ಇಂಧನ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ. ವೃತ್ತಿ–ಕೈಗಾರಿಕೋದ್ಯಮಿ
ಹೆಸರು: ಡಾ.ಸಿ.ಎನ್. ಅಶ್ವತ್ಥ ನಾರಾಯಣ ಕ್ರೇತ್ರ, ಜಿಲ್ಲೆ: ಮಲ್ಲೇಶ್ವರ, ಬೆಂಗಳೂರು ವಯಸ್ಸು: 52 ವಿದ್ಯಾರ್ಹತೆ: ವೈದ್ಯಕೀಯ ಪದವೀಧರ ಜಾತಿ: ಒಕ್ಕಲಿಗ ರಾಜಕೀಯ ಅನುಭವ: ಮೂರು ಬಾರಿ ವಿಧಾನಸಭಾ ಸದಸ್ಯ ಸಚಿವರಾಗಿ ಅನುಭವ: ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ, ವಿಜ್ಞಾನ–ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಣೆ ವೃತ್ತಿ– ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರ
ಹೆಸರು: ಬಿ.ಎ. ಬಸವರಾಜ ಕ್ಷೇತ್ರ, ಜಿಲ್ಲೆ: ಕೆ.ಆರ್. ಪುರ, ಬೆಂಗಳೂರು ವಯಸ್ಸು: 57 ವಿದ್ಯಾರ್ಹತೆ: ಬಿಎ ಜಾತಿ: ಕುರುಬ ರಾಜಕೀಯ ಅನುಭವ: ಮೂರು ಬಾರಿ ವಿಧಾನಸಭಾ ಸದಸ್ಯ (ಒಂದು ಉಪಚುನಾವಣೆ) ಸಚಿವರಾಗಿ ಅನುಭವ: ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಣೆ ವೃತ್ತಿ: ಕೃಷಿ
ವಿ. ಸೋಮಣ್ಣ, ಷೇತ್ರ, ಜಿಲ್ಲೆ: ಗೋವಿಂದರಾಜನಗರ, ಬೆಂಗಳೂರು ವಯಸ್ಸು: 70 ವಿದ್ಯಾರ್ಹತೆ: ಬಿಎ ಜಾತಿ: ವೀರಶೈವ ಲಿಂಗಾಯತ ರಾಜಕೀಯ ಅನುಭವ: ಐದು ಬಾರಿ ವಿಧಾನಸಭೆ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯ ಸಚಿವರಾಗಿ ಅನುಭವ: ಬೆಂಗಳೂರು ನಗರಾಭಿವೃದ್ಧಿ, ಆಹಾರ, ತೋಟಗಾರಿಕೆ, ಮುಜುರಾಯಿ, ಬಂದೀಖಾನೆ, ಸೈನಿಕ ಕಲ್ಯಾಣ, ವಸತಿ ಸಚಿವರಾಗಿ ಕಾರ್ಯನಿರ್ವಹಣೆ ವೃತ್ತಿ: ಸಾಮಾಜಿಕ ಕ್ಷೇತ್ರ
ಅರಬೈಲ್ ಶಿವರಾಮ ಹೆಬ್ಬಾರ್ ವಯಸ್ಸು : 64 ವಿದ್ಯಾರ್ಹತೆ: SSLC ತನಕ ಜಾತಿ : ಬ್ರಾಹ್ಮಣ (ಹವ್ಯಕ) ವಿಧಾನ ಸಭೆ : ಮೂರನೇ ಬಾರಿಗೆ 2013,2018,2019 ಸಚಿವರಾಗಿ ಅನುಭವ: ಎರಡನೇ ಬಾರಿಗೆ ಸಚಿವರಾಗಿ ಅನುಭವವಿದೆ. ಮೊದಲು ಸಕ್ಕರೆ ಮತ್ತು ಕಾರ್ಮಿಕ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ನಂತರ ಕಾರ್ಮಿಕ ಖಾತೆ ನಿರ್ವಹಿಸುತ್ತಿದ್ದರು. ವೃತ್ತಿ : ಕೃಷಿ
ಆರ್. ಅಶೋಕ ಕ್ಷೇತ್ರ, ಜಿಲ್ಲೆ: ಪದ್ಮನಾಭ ನಗರ, ಬೆಂಗಳೂರು ವಯಸ್ಸು: 64 ವಿದ್ಯಾರ್ಹತೆ: ವಿಜ್ಞಾನ ಪದವೀಧರ ಜಾತಿ: ಒಕ್ಕಲಿಗ ರಾಜಕೀಯ ಅನುಭವ: ಆರು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆ ಸಚಿವರಾಗಿ ಅನುಭವ: ಉಪಮುಖ್ಯಮಂತ್ರಿ, ಆರೋಗ್ಯ, ಸಾರಿಗೆ, ಗೃಹ, ಕಂದಾಯ ಸಚಿವರಾಗಿ ಕಾರ್ಯನಿರ್ವಹಣೆ ವೃತ್ತಿ: ಕೃಷಿ, ಸಾಮಾಜಿಕ ಕ್ಷೇತ್ರ
ಹೆಸರು: ಎಂಟಿಬಿ ನಾಗರಾಜ್ ವಯಸ್ಸು : 70 ವಿದ್ಯಾರ್ಹತೆ : SSLC ಜಾತಿ: ಕುರುಬರು ಹೊಸಕೋಟೆ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಹಾಲಿ ವಿಧಾನ ಪರಿಷತ್ ಸದಸ್ಯರು ಅನುಭವ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಸತಿ ಸಚಿವರಾಗಿ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪೌರಾಡಳಿತ, ಸಕ್ಕರೆ ಸಚಿವಾರಾಗಿದ್ದರು. ವೃತ್ತಿ: ಇಟ್ಟಿಗೆ ಕಾರ್ಖಾನೆ, ರಿಯಲ್ ಎಸ್ಟೇಟ್
ಡಾ.ಕೆ.ಸುಧಾಕರ್ ಕ್ಷೇತ್ರ: ಚಿಕ್ಕಬಳ್ಳಾಪುರ ವಯಸ್ಸು: 48 ಜಾತಿ: ಒಕ್ಕಲಿಗ ಶಿಕ್ಷಣ: ಎಂಬಿಬಿಎಸ್ ರಾಜಕೀಯ ಅನುಭವ: 3 ಬಾರಿ ಶಾಸಕರಾಗಿ ಆಯ್ಕೆ. ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸುಧಾಕರ್ ‌ ಗೆಲುವು ಸಾಧಿಸಿದರು. ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ 17 ಶಾಸಕರಲ್ಲಿ ಸುಧಾಕರ್ ಸಹ ಒಬ್ಬರು. ಬಿಜೆಪಿ ಸೇರ್ಪಡೆಯಾಗಿ 2019ರ ಡಿ.5ರಂದು ನಡೆದ ಉಪಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದರು. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾದರು. ಈಗ ಎರಡನೇ ಬಾರಿ ಸಚಿವರಾಗಿ ಆಯ್ಕೆ
ಮುನಿರತ್ನ- ಆರ್ ಆರ್ ನಗರ
ಕೆ.ಗೋಪಾಲಯ್ಯ, ಕ್ಷೇತ್ರ/ಜಿಲ್ಲೆ: ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು, ವಯಸ್ಸು: 61, ವಿದ್ಯಾರ್ಹತೆ: ಬಿ.ಎಸ್ಸಿ, ಜಾತಿ: ಒಕ್ಕಲಿಗ, ಅನುಭವ: ಮೂರು ಬಾರಿ ವಿಧಾನಸಭೆ ಸದಸ್ಯ (ಒಂದು ಉಪಚುನಾವಣೆ), ಸಚಿವರಾಗಿ ಅನುಭವ: ಆಹಾರ, ಅಬಕಾರಿ ಸಚಿವರಾಗಿ ಕಾರ್ಯನಿರ್ವಹಣೆ, ವೃತ್ತಿ: ಕೃಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.