ADVERTISEMENT

ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆಗಳು ರದ್ದು: ಸಚಿವ ಸಂಪುಟ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 10:06 IST
Last Updated 15 ಜೂನ್ 2023, 10:06 IST
HK Patil. (File Photo: IANS)
HK Patil. (File Photo: IANS)   

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಅಲ್ಲದೆ, ಹಿಂದಿನ ಸರ್ಕಾರದ ಮಾಡಿದ್ದ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ರದ್ದು ಮಾಡಿ, ಈ ಹಿಂದೆ ಪಠ್ಯವನ್ನು ಮುಂದುವರಿಸಲು ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಹಕ್ಕು ಕಾಯ್ದೆಯ ಹಿಂದಿನ ತಿದ್ದುಪಡಿ ವಾಪಸ್ ಪಡೆದು, ಜುಲೈ 3ರಿಂದ ಆರಂಭವಾಗುವ ಅಧಿವೇಶನದಲ್ಲಿ ಬಿಲ್ ಮಂಡನೆ ಮಂಡನೆ ಮಾಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಇದೇವೇಳೆ, ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಎಪಿಎಂಸಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಇಟ್ಟುಕೊಂಡ ಉದ್ದೇಶ ಸಾಬೀತಾಗಿಲ್ಲ. ಬೆಲೆ ಸಿಗಬೇಕೆಂದು ಬಯಸಿದ್ದರು ಬೆಲೆ ಸಿಗಲಿಲ್ಲ. ಲಕ್ಷಾಂತರ ಕುಟುಂಬ ಕಹಿ ಅನುಭವ, ಹಾನಿ ಅನುಭವಿಸಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರ ಗಣನೀಯವಾಗಿ ಕಡಿಮೆಯಾಗಿದೆ ಎಂದರು.

ಎಪಿಎಂಸಿ ವಹಿವಾಟು ಆರುನೂರು ಕೋಟಿಯಿಂದ ನೂರು ಕೋಟಿಗೆ ಬಂದಿದೆ. ಸಂಪುಟ ಸಭೆಯಲ್ಲಿ ಕಾನೂನು ಹಿಂಪಡೆಯಲು ಒಪ್ಪಲಾಗಿದೆ ಎಂದು ಹೇಳಿದರು.

ಸಂಪುಟ ಸಭೆ ಮುಖ್ಯಾಂಶಗಳು

* ಪಠ್ಯ‌ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಇಲಾಖೆ ತಂದ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ.

* ಎಪಿಎಂಸಿ ಕಾನೂನನ್ನು ಪರಿಷ್ಕರಿಸಿ ಹಿಂದಿನ ಸರ್ಕಾರದವರು ಸತ್ವ ಕಳೆದಿದ್ದರು. ಆ ತಿದ್ದುಪಡಿಯನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ.

* ಕರ್ನಾಟಕ ಹೈ ಕೋರ್ಟ್‌ನ ಆಡಳಿತ ವೆಚ್ಚ ಮಿತಿ, ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆಗೆ ಒಪ್ಪಿಗೆ‌.

* ಕೆಪಿಎಸ್ಸಿಯಲ್ಲಿ ಖಾಲಿ ಇರುವ ಮೂರು ಸದಸ್ಯರ ಭರ್ತಿಗೆ ಸಿಎಂಗೆ ಅಧಿಕಾರ.

* ಡಾ.ಮೈತ್ರಿ ಕೆಎಎಸ್ ಜ್ಯೂ. ಹುದ್ದೆ ಪ್ರಸ್ತಾವನೆ ಬಗ್ಗೆ ಚರ್ಚೆಯಾಗಿದ್ದು, ತಡೆ ಹಿಡಿಯಲಾಗಿದೆ.

* ಕರ್ನಾಟಕ ಮಾಹಿತಿ ತಂತ್ರಜ್ಞಾನ ಬಯೋಟೆಕ್ನಾಲಜಿ, ವಿಜ್ಞಾನ, ತಂತ್ರಜ್ಞಾನ ಇಲಾಖೆಯು ಇಸಿಎಂಎ ಅವರಿಗೆ ಫ್ಲಾಗ್ ಶಿಪ್ ಕಾರ್ಯಕ್ರಮ ಟೆಕ್ ಸಮಿಟ್ (ಇನ್ ಬೆಂಗಳೂರು ಬಿಯಾಂಡ್ ಬೆಂಗಳೂರು) ಮಾಡುವ ಪ್ರಸ್ತಾವನೆಗೆ ಒಪ್ಪಿಗೆ.

* 1081 ಕೋಟಿ ರೂ. ವೆಚ್ಚದಲ್ಲಿ 243 ಎಂಎಲ್ ಡಿ ವೃಷಭಾವತಿ ನದಿಯ ನೀರನ್ನು 70 ಕೆರೆ ತುಂಬಿಸುವ ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರದ ಕೆರೆ ಭರ್ತಿ ಯೋಜನೆ.

* ಸಂಸದೀಯ ವ್ಯವಹಾರಗಳ ಇಲಾಖೆ ಡಿಸ್ ಕ್ವಾಲಿಫಿಕೇಶ್‌ ಆಕ್ಟ್ ತಿದ್ದುಪಡಿ ಮಾಡಲು ಬಯಸಿದ್ದು, ಕಾನೂನು ಸಲಹೆಗಾರರನ್ನು ಹೊರಗಿಡಲಾಗಿದೆ.

* ವಿಪತ್ತು ನಿರ್ವಹಣೆ ಸಂಬಂಧ ನಿರ್ದೇಶನ ನೀಡಲು ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ.

* ಸಮಾಜ ಕಲ್ಯಾಣ ಇಲಾಖೆಯು ತಂದ ಪ್ರಸ್ತಾವನೆಯಂತೆ, ಪ್ರತಿ ಕಾಲೇಜು, ಶಾಲೆಯಲ್ಲಿ ಸಂವಿಧಾನದ ಪರಿವಿಡಿಯನ್ನು ಓದಲು ತೀರ್ಮಾನ.

* ಸಾರಿಗೆ ನಿಗಮಗಳಿಂದ ಮೋಟರ್ ಟ್ಯಾಕ್ಸ್ ಮತ್ತು ಅರಿಯರ್ಸ್ 79.85 ಕೋಟಿ ಬಾಕಿ ಇದೆ. ಅದನ್ನು ಎಕ್ಸಮ್ಟ್ ಮಾಡಲಾಗಿದೆ. ನಿಗಮಗಳ ಭಾರವನ್ನು ತಗ್ಗಿಸುವುದು ಉದ್ದೇಶ‌.

* ಸಾರಿಗೆ ನಿಗಮಗಳು ಡಬಲ್ ಡೆಕರ್, ಎಲೆಕ್ಟ್ರಿಕ್ ವಾಹನ 28 ಕೋಟಿ ಕೊಡಲು ಅನುಮತಿ.

* ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಶೇ. 15 ಹೆಚ್ಚಿಸಲು ಘಟನೋತ್ತರ ಅನುಮತಿ.

* ಗೃಹ ಲಕ್ಷ್ಮೀ ಯೋಜನೆಯನ್ನು ಯಶಸ್ವಿ ಅನುಷ್ಠಾನವನ್ನು ಸಮಸ್ಯೆ ರಹಿತವಾಗಿ ಮಾಡಲು ಟೆಕ್ನಾಲಜಿ ಬಳಸಲು ತೀರ್ಮಾನ.

*ಅಗ್ನಿಶಾಮಕ ದಳ ಕಾಯ್ದೆಗೆ ತಿದ್ದುಪಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.