ADVERTISEMENT

ನೆಹರು ಮಾಡಿದ ತಪ್ಪನ್ನೇ ಇಂದಿನ ಕಾಂಗ್ರೆಸ್ ಮಾಡುತ್ತಿದೆ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 11:18 IST
Last Updated 6 ಜೂನ್ 2022, 11:18 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಹುಬ್ಬಳ್ಳಿ: ಹಿಂದೆ ಜವಾಹರಲಾಲ್ ನೆಹರು ಅವರು ಆರೆಸ್ಸೆಸ್ ನಿಷೇಧಿಸಿ ಕೈಸುಟ್ಟುಕೊಂಡಿದ್ದರು. ಇಂದಿನ ಕಾಂಗ್ರೆಸ್ ಸಂಘವನ್ನು ಟೀಕಿಸುವ ಮೂಲಕ‌ ಅದೇ ತಪ್ಪನ್ನು ಮಾಡುತ್ತಿದೆ. ಸೋಲುವ ಭೀತಿಯಿಂದ ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿ‌ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವಿರುದ್ಧದ ಟೀಕೆಯ ಭಾಗವಾಗಿ ಸಿದ್ದರಾಮಯ್ಯ ಅವರು ಚಡ್ಡಿಗೆ ಬೆಂಕಿ ಹಚ್ಚುವುದಾಗಿ ಹೇಳಿದ್ದಾರೆ. ಇಂತಹ ಹೇಳಿಕೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಹ ಮುಂದಿನ ಚುನಾವಣೆಯಲ್ಲಿ ಕೈ ಸುಟ್ಟುಕೊಳ್ಳಲಿದೆ ಎಂದರು‌.

ರಾಜ್ಯದಲ್ಲಿ ಸಂಘದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಟೀಕೆಗಳು ತುಷ್ಟೀಕರಣದ ರಾಜಕೀಯದ ಭಾಗವಾಗಿದೆ.‌ ಆ ಪಕ್ಷಕ್ಕೆ ಹಿಂದೂಗಳ‌ ಮತ ಬೇಕಿಲ್ಲ. ಬದಲಿಗೆ, ಜೆಡಿಎಸ್ ಪರ ಇರುವ ಮುಸ್ಲಿಮರ ಮತಗಳನ್ನು ತನ್ನತ್ತ ಸೆಳೆಯಲು ಸಂಘವನ್ನು ಗುರಿಯಾಗಿಟ್ಟುಕೊಂಡು ನಿರಂತರವಾಗಿ ಟೀಕೆಗಳನ್ನು ಮಾಡುತ್ತಿರುವ ಆ ಪಕ್ಷದ ಮುಖಂಡರು, ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.