ADVERTISEMENT

ನಾನೇನು ಭಯೋತ್ಪಾದಕನಾ: ಕೊಠಡಿ ಬುಕಿಂಗ್ ರದ್ದುಪಡಿಸಿದ್ದಕ್ಕೆ ಡಿಕೆಶಿ ಪ್ರಶ್ನೆ

ಮುಂಬೈನಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 5:21 IST
Last Updated 10 ಜುಲೈ 2019, 5:21 IST
ಎಎನ್‌ಐ ಚಿತ್ರ
ಎಎನ್‌ಐ ಚಿತ್ರ   

ಬೆಂಗಳೂರು:ಅತೃಪ್ತ ಶಾಸಕರು ತಂಗಿದ್ದ ಮುಂಬೈನ ರಿನೈಸೆನ್ಸ್‌ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್ ಕೊಠಡಿ ಕಾಯ್ದಿರಿಸಿದ್ದನ್ನು ರದ್ದುಪಡಿಸಲಾಗಿದೆ. ತುರ್ತು ಕಾರಣಗಳಿಗಾಗಿ ಕಾಯ್ದಿರಿಸುವಿಕೆ ರದ್ದುಪಡಿಸಲಾಗಿದೆ ಎಂದು ಹೋಟೆಲ್ ಆಡಳಿತ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ತಾವು ಭಯೋತ್ಪಾದಕರಲ್ಲ. ಹೋಟೆಲ್‌ಗೆ ಹಾನಿ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ.

‘ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ಯಾರೂ ಸ್ನೇಹಿತರೂ ಅಲ್ಲ, ಶತ್ರುಗಳೂ ಅಲ್ಲ. ಯಾರು ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗಬಹುದು. ನಾನು ಅವರನ್ನು (ಅತೃಪ್ತ ಶಾಸಕರನ್ನು) ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆ ಅವಕಾಶ ದೊರೆಯಲಿದೆ. ಅವರ ಹೃದಯ ಸ್ನೇಹಿತನ ಭೇಟಿಗಾಗಿ ಮಿಡಿಯಲಿದೆ’ ಎಂದು ಶಿವಕುಮಾರ್ ಹೇಳಿದ್ದಾರೆ.

ADVERTISEMENT

ಆದರೆ, ಡಿಕೆಶಿ ಹೋಟೆಲ್ ಎದುರು ಪಟ್ಟುಬಿಡದೆ ಕಾಯುತ್ತಿರುವಾಗಅತೃಪ್ತ ಶಾಸಕರು ಹಿಂಬದಿ ಗೇಟ್‌ನಿಂದ ಬೇಡೆಗೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಹೋಟೆಲ್ ಮುಂಭಾಗದ ಸೇರಿರುವ ಜನಸಂದಣಿಯನ್ನು ತೆರವುಗೊಳಿಸಿ ದೈನಂದಿನ ವ್ಯವಹಾರಕ್ಕೆ ಅನುವು ಮಾಡಿಕೊಡುವಂತೆ ಹೋಟೆಲ್ ಆಡಳಿತವು ಡಿಸಿಪಿ ಅವರಲ್ಲಿ ಮನವಿ ಮಾಡಿದೆ. ಸ್ಥಳದಿಂದ ನಿರ್ಗಮಿಸುವಂತೆ ಪೊಲೀಸರು ಶಿವಕುಮಾರ್ ಅವರಿಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.