ನವದೆಹಲಿ: ತಮ್ಮ ರಾಜೀನಾಮೆ ಆಂಗೀಕರಿಸುವಂತೆ ಸ್ಪೀಕರ್‌ಗೆ ಸೂಚಿಸಬೇಕು ಎಂದು ಈಗಾಗಲೇ ಅರ್ಜಿ ಸಲ್ಲಿಸಿರುವ 10 ಮಂದಿ ಅತೃಪ್ತರ ಜೊತೆಗೆಕಾಂಗ್ರೆಸ್‌ನ ಇತರ ಐವರು ಅತೃಪ್ತ ಶಾಸಕರ ಮನವಿ ಆಲಿಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಕೊಂಡಿತು.
ಈ ಕುರಿತು ಹಿರಿಯ ವಕೀಲ ಮುಕುಲ್ ರೋಹಟಗಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್, ಮಂಗಳವಾರ ವಿಚಾರಣೆಗೆ ಬರಲಿರುವ ಪ್ರಕರಣದಲ್ಲಿ ಈ ಐವರನ್ನೂ ಅರ್ಜಿದಾರರಾಗಿ ಪರಿಗಣಿಸಲು ಒಪ್ಪಿಗೆ ಸೂಚಿಸಿದರು.
ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ತಡ ಮಾಡುತ್ತಿದ್ದಾರೆ ಎಂದು ಜುಲೈ 13ರಂದು ಶಾಸಕರಾದ ಆನಂದ್ ಸಿಂಗ್, ಕೆ.ಸುಧಾಕರ, ಎನ್.ನಾಗರಾಜ್, ಮುನಿರತ್ನ ಮತ್ತು ರೋಶನ್‌ಬೇಗ್ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಶಾಸಕರ ರಾಜೀನಾಮೆ ವಿಚಾರವಾಗಿ ಮಂಗಳವಾರದವರೆಗೆ (ಜುಲೈ 16) ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕಳೆದ ಶುಕ್ರವಾರ (ಜುಲೈ 12) ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.