ADVERTISEMENT

ಬರ ಪರಿಹಾರ | ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡುತ್ತಿಲ್ಲ: ಸಚಿವ ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2023, 9:48 IST
Last Updated 21 ಅಕ್ಟೋಬರ್ 2023, 9:48 IST
<div class="paragraphs"><p>ಸಚಿವ ಕೃಷ್ಣ ಬೈರೇಗೌಡ</p></div>

ಸಚಿವ ಕೃಷ್ಣ ಬೈರೇಗೌಡ

   

ಚಾಮರಾಜನಗರ: ‘ಬರ ಪರಿಹಾರ ಕೊಡಬೇಕಾಗಿರುವುದು ಕೇಂದ್ರ ಸರ್ಕಾರದ ಕೆಲಸ. ಕೇಳುವುದು ನಮ್ಮ ಹಕ್ಕು. ಬರ ಪರಿಹಾರ ಕೇಳಲು ಕೇಂದ್ರ ಗೃಹ ಹಾಗೂ ಕೃಷಿ ಸಚಿವರನ್ನು‌ ಸೆ.23 ರಿಂದ ಭೇಟಿಗೆ ಅವಕಾಶ ಕೇಳುತ್ತಿದ್ದೇವೆ. ಆದರೆ, ಇಲ್ಲಿಯವರೆಗೂ ಭೇಟಿಗೆ ಅವಕಾಶವನ್ನೇ ನೀಡಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಶನಿವಾರ ದೂರಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ಅಧಿಕಾರಿಗಳು ನಿತ್ಯ ಕೇಂದ್ರ ಸಚಿವರ ಕಚೇರಿಗೆ ಕರೆ ಮಾಡುತ್ತಿದ್ದಾರೆ. ನಾನೂ ಪತ್ರ ಬರೆದು ಕಾಲಾವಕಾಶ ಕೇಳಿದ್ದೇನೆ. ಆದರೂ ಅವಕಾಶ ಸಿಕ್ಕಿಲ್ಲ. ಮುಂದಿನ ವಾರ ದೆಹಲಿಗೆ ಹೋಗಿ ಅಲ್ಲೇ ಕುಳಿತು ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ’ ಎಂದರು.

ADVERTISEMENT

‘ರಾಜ್ಯದ 216 ತಾಲ್ಲೂಕುಗಳು ಬರಪೀಡಿತ ಘೋಷಣೆ ಎಂದು ಆಗಿದೆ. ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ವರದಿ ಬಗ್ಗೆ ಶೀಘ್ರ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಬರ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವೂ ಹೌದು. ನಮ್ಮ ಹಕ್ಕಿನ ಪ್ರಕಾರ, ಎನ್ ಡಿ ಆರ್ ಎಫ್ ಪರಿಹಾರ ರಾಜ್ಯಕ್ಕೆ ಕೊಡಲೇಬೇಕು’ ಎಂದರು.

‘ಬೇರೆ ರಾಜ್ಯಗಳಿಗೆ ಕೊಟ್ಟಂತೆ ನಮ್ಮ ರಾಜ್ಯಕ್ಕೂ ಕೊಡಬೇಕಾಗಿದ್ದು ಕೇಂದ್ರದ ಕರ್ತವ್ಯ. ನಮಗೆ ಬರಬೇಕಾದ ಅನುದಾನ ಬಿಟ್ಟು ಹೆಚ್ಚುವರಿ ನಿರೀಕ್ಷೆ ಮಾಡುತ್ತಿಲ್ಲ. ನೀತಿ ನಿಯಮಗಳ ಪ್ರಕಾರ ಅನುದಾನ ಕೊಡಲೇಬೇಕು’ ಎಂದು ಸಚವರು ಹೇಳಿದರು.

‘ಇ-ಆಫೀಸ್ ಯೋಜನೆಯನ್ನು ತಾಲ್ಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು. ಇದರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬೇಗ ವಿಲೇವಾರಿಯಾಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.