ಬೆಂಗಳೂರು : ಸಿದ್ದರಾಮಯ್ಯ ಆಪ್ತ ಕೆ.ವೆಂಕಟೇಶ್ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ 2017ರಿಂದ 2018ರವರೆಗೆ ಬಿಡಿಎ ಅಧ್ಯಕ್ಷರಾಗಿದ್ದರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಒಂಬತ್ತು ಚುನಾವಣೆಗಳನ್ನು ಎದುರಿಸಿ 6 ಬಾರಿ ಗೆದ್ದು, ಮೂರು ಬಾರಿ ಸೋತಿದ್ದಾರೆ.
ಮೊದಲಿಗೆ ಅಂದರೆ 1985ರಲ್ಲಿ ಜನತಾ ಪಕ್ಷದಿಂದ ಗೆದ್ದಿದ್ದರು. 1994ರಲ್ಲಿ ಜನತಾ ದಳದಿಂದ, 2004ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದವರು. ಅಹಿಂದ ಸಂಘಟನೆಗೆ ಮುಂದಾದ ಸಿದ್ದರಾಮಯ್ಯ ಅವರ ಜೊತೆಗೆ ನಿಂತು ಕೈ ಬಲಪಡಿಸಿದ ಕೆ.ವೆಂಕಟೇಶ್ ಹಳೆ ಮೈಸೂರು ಭಾಗದ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
2008 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. 2018ರಲ್ಲಿ ಶಿಷ್ಯ, ಜೆಡಿಎಸ್‌ನ ಕೆ.ಮಹದೇವ್ ವಿರುದ್ಧ ಸೋತಿದ್ದರು. ಹಾರಂಗಿ ಕರಡಿ ಲಕ್ಕನಕೆರೆ ಏತ ನೀರಾವರಿ ಯೋಜನೆ ಜಾರಿಗೊಳಿಸಿ ಹಾಸನ ಮತ್ತು ಮೈಸೂರು ಜಿಲ್ಲೆಯ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈಗ ಎರಡನೇ ಬಾರಿಗೆ ಸಚಿವರಾಗಿದ್ದಾರೆ.
ಕಿರು ಪರಿಚಯ
ಹೆಸರು : ಕೆ.ವೆಂಕಟೇಶ್
ವಿದ್ಯಾರ್ಹತೆ : ಬಿ.ಎಸ್ಸಿ.
ವಯಸ್ಸು : 74
ಜಾತಿ : ಒಕ್ಕಲಿಗ
ಕ್ಷೇತ್ರ : ಪಿರಿಯಾಪಟ್ಟಣ
ಎಷ್ಟನೇ ಬಾರಿಗೆ ಶಾಸಕ : 6ನೇ
ಹಿಂದೆ ನಿರ್ವಹಿಸಿದ ಖಾತೆ : ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ 1996ರಿಂದ 1999ರವರೆಗೆ ಕಾಡಾ ಖಾತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.