ಬೆಂಗಳೂರು: ಆರಗ ಜ್ಞಾನೇಂದ್ರ ಅವರೇ, ನಿಮ್ಮ ಇಲಾಖೆಯಲ್ಲೇ ಅಕ್ರಮ ನಡೆದಿರುವಾಗ ನೀವು ಅಮಾಯಕರಿಗೆ ಹೇಗೆ ನ್ಯಾಯ ಒದಗಿಸುತ್ತೀರಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಗೃಹ ಸಚಿವರೇ, ನಿಮ್ಮ ಇಲಾಖೆಯ ಕೇಂದ್ರ ಕಚೇರಿಯಲ್ಲೇ, ನಿಮ್ಮ ಕಣ್ಣೆದುರಲ್ಲೇ ಅಕ್ರಮ ನಡೆದಿದೆ. ತಾವೇ ಅಸಹಾಯಕ ಎಂದು ಒಪ್ಪಿಕೊಂಡಿದ್ದೀರಿ. ಹೀಗಿರುವಾಗ ಹೇಗೆ ನೀವು ಅಮಾಯಕರಿಗೆ ನ್ಯಾಯ ಒದಗಿಸುತ್ತೀರಿ? ಜನರ ರಕ್ಷಣೆ ಹೇಗೆ ಮಾಡುತ್ತೀರಿ? ನಿಮ್ಮಿಂದ ಗೃಹ ಖಾತೆ ನಿರ್ವಹಿಸಲು ಸಾಧ್ಯವೇ? ಖಂಡಿತಾ ಇಲ್ಲ’ ಎಂದು ವ್ಯಂಗ್ಯವಾಡಿದೆ.
‘ಕಾಮಗಾರಿ ಮುಗಿಯುವ ಮುನ್ನವೇ ಕುಸಿದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕುಸಿದಿರುವುದು ಬಿಜೆಪಿ ಸರ್ಕಾರ ಶೇ 40 ಪರ್ಸೆಂಟ್ ಕಮಿಷನ್‌ಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.