ADVERTISEMENT

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

30 ಕಲಾವಿದರಿಗೆ, ಇಬ್ಬರು ತಜ್ಞರಿಗೆ ಪ್ರಶಸ್ತಿ, ಐವರಿಗೆ ಪುಸ್ತಕ ಬಹುಮಾನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 1:46 IST
Last Updated 5 ನವೆಂಬರ್ 2024, 1:46 IST
<div class="paragraphs"><p>ಜಾನಪದ ಅಕಾಡೆಮಿ</p></div>

ಜಾನಪದ ಅಕಾಡೆಮಿ

   

ಬೆಂಗಳೂರು: ಕೆ. ಚಿನ್ನಪ್ಪ ಗೌಡ, ಮಂಜುನಾಥ ಬೇವಿನಕಟ್ಟೆ ಅವರಿಗೆ ತಜ್ಞ ಪ್ರಶಸ್ತಿ, 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಐವರಿಗೆ ಪುಸ್ತಕ ಪ್ರಶಸ್ತಿಯನ್ನು ಜಾನಪದ ಅಕಾಡೆಮಿ ಪ್ರಕಟಿಸಿದೆ.

ತಜ್ಞ ಪ್ರಶಸ್ತಿಯು ತಲಾ ₹ 50,000, ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ತಲಾ ₹ 25,000 ನಗದು ಹೊಂದಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಜೀ.ಶಂ.ಪರಮಶಿವಯ್ಯ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡದ ಕೆ. ಚಿನ್ನಪ್ಪ ಗೌಡ ಹಾಗೂ ಬಿ.ಎಸ್‌. ಗದ್ದಗಿಮಠ ತಜ್ಞ ಪ್ರಶಸ್ತಿಗೆ ವಿಜಯನಗರದ ಮಂಜುನಾಥ ಬೇವಿನಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶೀಘ್ರದಲ್ಲಿಯೇ ದಿನಾಂಕ ಮತ್ತು ಸ್ಥಳ ನಿಗದಿ ಮಾಡಲಾಗುವುದು. ಬೆಂಗಳೂರಿನಿಂದ ಹೊರಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ’ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಶಂಕರಪ್ಪ ಸಂಕಣ್ಣವರ್‌, ಉಮೇಶ್‌, ಮಲ್ಲಿಕಾರ್ಜುನ ಕಲಮರಹಳ್ಳಿ, ಹುಲಿಕುಂಟೆ ಮೂರ್ತಿ, ದೇವಾನಂದ ವರಪ್ರಸಾದ, ರಿಜಿಸ್ಟ್ರಾರ್‌ ಎನ್‌. ನಮ್ರತ ಭಾಗವಹಿಸಿದ್ದರು.

ಗೌರವ ಪ್ರಶಸ್ತಿ: ಬೆಂಗಳೂರು ನಗರ ಜಿಲ್ಲೆಯ ಕೆ.ಎಂ. ರಾಮಯ್ಯ (ಏಕತಾರಿ, ತಂಬೂರಿ), ಬೆಂಗಳೂರು ಗ್ರಾಮಾಂತರದ ಓಬಮ್ಮ (ಸೋಬಾನೆ), ರಾಮನಗರ ಜಿಲ್ಲೆ ರಂಗಯ್ಯ (ಪಟ ಕುಣಿತ), ಕೋಲಾರದ ತೋಪಣ್ಣ ಮಂಚಂಡಹಳ್ಳಿ (ಕೀಲುಕುದುರೆ), ಚಿಕ್ಕಬಳ್ಳಾಪುರದ ದೊಡ್ಡಕೂರ್ಲಪ್ಪ (ತಮಟೆ ವಾದನ), ತುಮಕೂರು ಜಿಲ್ಲೆಯ ಕದರಮ್ಮ (ಜನಪದ ಹಾಡು), ದಾವಣಗೆರೆ ಜಿಲ್ಲೆಯ ಕಾಟಮ್ಮ (ಕಥನ ಕಾವ್ಯ), ಚಿತ್ರದುರ್ಗದ ಸಿರಿಯಮ್ಮ (ಮಹಾಕಾವ್ಯ), ಶಿವಮೊಗ್ಗ ಜಿಲ್ಲೆ ಟೀಕಪ್ಪ (ಡೊಳ್ಳು ಕುಣಿತ), ಕೊಡಗು ಜಿಲ್ಲೆಯ ದೇವಕಿ ಕೆ.ಸಿ. (ಊರ್ಟಿಕೋಟ್‌), ಮಂಡ್ಯದ ಗುರುಬಸವಯ್ಯ (ತಂಬೂರಿಪದ), ಹಾಸನದ ವೀರಭದ್ರಯ್ಯ (ತತ್ವಪದ), ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ. (ಕರಡಿಗೆ ಕಾವ್ಯ), ಮೈಸೂರಿನ ಗುರುಸಿದ್ದಯ್ಯ (ತಂಬೂರಿಪದ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉಡುಪಿಯ ಅಪ್ಪಿ (ಜನಪದ ಸೂಲಗಿತ್ತಿ), ದಕ್ಷಿಣ ಕನ್ನಡದ ಲೀಲಾವತಿ (ನಾಟಿವೈದ್ಯೆ), ಚಾಮರಾಜನಗರದ ಅಂಧ ಕಲಾವಿದೆ ಗೌರಮ್ಮ (ಸೋಬಾನೆಪದ), ಬೆಳಗಾವಿಯ ಶಿವನಪ್ಪ ಚಂದರಗಿ (ಡೊಳ್ಳುಕುಣಿತ), ಬಾಗಲಕೋಟೆಯ ಹನಮಂತ ವೆಂಕಪ್ಪ ಸುಗತೇಕರ (ಗೊಂದಳಿಪದ), ವಿಜಯಪುರದ ಇಮಾಂಬಿ ಇಮಾಮಸಾಬ (ತತ್ವಪದ), ಗದಗದ ಬಸಪ್ಪ ಹಡಗಲಿ (ಗೀಗೀ ಪದ), ಬಳ್ಳಾರಿಯ ದಳವಾಯಿ ಚಿತ್ತಪ್ಪ (ಜನಪದ ಮಹಾಕಾವ್ಯ), ಹಾವೇರಿಯ ಸಾವಕ್ಕಾ ಓಲೇಕಾರ (ಸೋಬಾನೆ, ಸಂಪ್ರದಾಯ ಪದ), ಉತ್ತರ ಕನ್ನಡದ ಈರಯ್ಯ ಮೊಗೇರ (ಕಾರಿನ್‌ಮನೆ ಕುಣಿತ, ಹೌಂದೇರಾಯನ ಕುಣಿತ), ಕಲಬುರಗಿ ಅಕ್ಕಮ್ಮ (ಸಂಪ್ರದಾಯ ಪದ), ಬೀದರ್‌ನ ಏಸಪ್ಪಾ (ಶಹನಾಯಿ), ರಾಯಚೂರಿನ ಶಾಂತಮ್ಮ (ಬುರ‍್ರಕಥೆ), ಕೊಪ್ಪಳದ ರೇವಣಪ್ಪ (ಡೊಳ್ಳಿನ ಹಾಡು, ಕುಣಿತ), ಧಾರವಾಡದ ರಾಮಪ್ಪ ಬಸವಂತಪ್ಪ ಮೂಲಗಿ (ಹಂತಿಪದ), ಯಾದಗಿರಿಯ ಅಮಯ್ಯಸ್ವಾಮಿ ಹಿರೇಮಠ (ಭಜನೆ) ಅವರನ್ನು ಪ್ರಶಸ್ತಿಗೆ ಆಯ್ಕೆ
ಮಾಡಲಾಗಿದೆ.

ಪುಸ್ತಕ ಬಹುಮಾನ

ಎಲ್ಲ ಪ್ರಶಸ್ತಿಗಳು 2023ನೇ ಸಾಲಿನದ್ದಾಗಿದ್ದು, ಪುಸ್ತಕ ಬಹುಮಾನವು 2022 ಮತ್ತು 2023ನೇ ಸಾಲಿನದ್ದಾಗಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ತಿಳಿಸಿದರು.

2022ರ ಸಾಲಿನಲ್ಲಿ ಬೆಂಗಳೂರಿನ ಬಿ.ಎಸ್‌. ಸ್ವಾಮಿ ಅವರ ‘ಜಾನಪದ ಲೇಖನ ಗುಚ್ಚ’, ಬೆಂಗಳೂರಿನ ಕುರುವ ಬಸವರಾಜು ಅವರ ‘ಭೌತಿಕ ವಸ್ತು ವಿಜ್ಞಾನ ಜಾನಪದ ಮತ್ತು ವಸ್ತು ಸಂಗ್ರಹಾಲಯಗಳ ಕುರಿತ ಲೇಖನಗಳು’, ಜಾರ್ಖಂಡ್‌ನ ನಾಗ ಎಚ್‌. ಹುಬ್ಳಿ ಅವರ ‘ಆದಿವಾಸಿ ಸಂಸ್ಕೃತಿ’, 2023ನೇ ಸಾಲಿನಲ್ಲಿ ಮೈಸೂರಿನ ವ.ನಂ. ಶಿವರಾಮು ಅವರ ‘ಜನಪದ–ಜಾನಪದ ಮತ್ತು ಕ್ಷೇತ್ರಕಾರ್ಯ’, ಬೆಂಗಳೂರಿನ ವಿಜಯಶ್ರೀ ಸಬರದ ಅವರ ‘ಸಬರದ ಮತ್ತು ಜಾನಪದ’ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.