ADVERTISEMENT

30 ಮಂದಿ ಹಿರಿಯ ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ 

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 18:47 IST
Last Updated 26 ಫೆಬ್ರುವರಿ 2020, 18:47 IST
   
""
""

ಉಡುಪಿ: ಉಡುಪಿಯ ಭೂತಕೋಲ ನೃತ್ಯ ಕಲಾವಿದ ಸಾಧು ಪಾಣಾರ ಮಂಚಿಕೆರೆ ಸೇರಿದಂತೆ 30 ಮಂದಿ ಕಲಾವಿದರು 2019ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಮಗರದ ಡಾ.ಚಕ್ಕರೆ ಶಿವಶಂಕರ್‌ ಹಾಗೂ ಕಲಬುರಗಿಯ ಡಾ. ಬಸವರಾಜ ಪಾಟೀಲ್‌ ಅವರನ್ನು ಜಾನಪದ ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು.

ADVERTISEMENT

ಗೌರವ ಪ್ರಶಸ್ತಿ:

ಬೆಂಗಳೂರು ನಗರ ಜಿಲ್ಲೆಯ ಎಂ. ಗೌರಮ್ಮ (ಜಾನಪದ ಗಾಯನ)

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಕ್ಷ್ಮಮ್ಮ (ಭಜನೆ ಪದಗಳು),

ರಾಮನಗರದ ಅಂಕನಹಳ್ಳಿ ಶಿವಣ್ಣ (ಪೂಜಾ ಕುಣಿತ),

ಕೋಲಾರದ ಅಂಗಡಿ ವೆಂಕಟೇಶಪ್ಪ (ತತ್ವಪದ),

ತುಮಕೂರಿನ ರಂಗಯ್ಯ (ಜಾನಪದ ಗೀತೆ),

ದಾವಣಗೆರೆಯ ಪಿ.ಜಿ.ಪರಮೇಶ್ವರಪ್ಪ (ವೀರಗಾಸೆ),

ಚಿತ್ರದುರ್ಗದ ತಿಪ್ಪಣ್ಣ (ಗೊರವರ ಕುಣಿತ),

ಚಿಕ್ಕಬಳ್ಳಾಪುರ ಮುನಿರೆಡ್ಡಿ (ಜಾನಪದ ಗಾಯನ),

ಶಿವಮೊಗ್ಗದ ಜಿ.ಸಿ.ಮಂಜಪ್ಪ (ಡೊಳ್ಳು ಕುಣಿತ),

ಮೈಸೂರಿನ ಮಾದಶೆಟ್ಟಿ (ಕಂಸಾಳೆ ಕುಣಿತ),

ಮಂಡ್ಯ ಸ್ವಾಮಿಗೌಡ (ಬೀಸುವ ಪದಗಳು,

ಕೊಡಗಿನ ಜೆ.ಕೆ. ರಾಮು (ಕೊಡವರ ಕುಣಿತ),

ಹಾಸನದ ಕೆ.ಕಪಿನಿಗೌಡ (ಕೋಲಾಟ),

ಚಿಕ್ಕಮಗಳೂರು ಡಾ.ಎಚ್.ಸಿ.ಈಶ್ವರನಾಯಕ (ನಾಟಿ ವೈದ್ಯ)

ಉಡುಪಿಯ ಸಾಧುಪಾಣಾರ (ಭುತಕೋಲ)

ದಕ್ಷಿಣ ಕನ್ನಡದ ರುಕ್ಮಯ್ಯ ಗೌಡ(ಸಿದ್ದವೇಷ),

ಬೆಳಗಾವಿಯ ಸಂಕಮ್ಮ (ಸಂಪ್ರದಾಯದ ಪದ),

ಬಾಗಲಕೋಟೆಯ ರುಕ್ಮಿಣಿ ಮಲ್ಲಪ್ಪ (ಮದುವೆ ಹಾಡು),

ಧಾರವಾಡದ ಮಲ್ಲಯ್ಯ ರಾಚಯ್ಯ ತೋಟಗಂಟಿ (ಜಾನಪದ ಸಂಗೀತ),

ಹಾವೇರಿಯ ಹನುಮಂತಪ್ಪ ಧಾರವಾಡ (ಭಜನೆ ಕೋಲಾಟ),

ಗದಗದ ನಾಗರಾಜ ಜಕ್ಕಮ್ಮನವರ್‌ (ಗೀಗೀ ಪದ),

ವಿಜಯಪುರದ ನಿಂಬೆವ್ವ ಕೆಂಚಪ್ಪಗುಬ್ಬಿ (ಸೋಬಾನೆ ಪದ),

ಉತ್ತರ ಕನ್ನಡದ ಹುಸೇನಾಬಿ (ಸಿದ್ಧಿ ಢಮಾಮಿ ನೃತ್ಯ)

ಕಲಬುರಗಿಯ ಗಂಗಾಧರಯ್ಯ ಸ್ವಾಮಿ ಅಗ್ಗಿಮಠ (ಪುರವಂತಿಕೆ),

ಬೀದರ್‌ನ ತುಳಸಿರಾಮ ಭೀಮರಾವ ಸುತಾರ (ಆಲದ ಎಲೆಯಿಂದ ಸಂಗೀತ),

ಕೊಪ್ಪಳದ ಶಾಂತವ್ವ (ಲಂಬಾಣಿ ನೃತ್ಯ),

ರಾಯಚೂರಿನ ಸೂಗಪ್ಪ ನಾಗಪ್ಪ (ತತ್ವಪದ),

ಬಳ್ಳಾರಿಯ ವೇಷಗಾರ ಮೋತಿ ರಾಮಣ್ಣ (ಹಗಲುವೇಷ)

ಯಾದಗಿರಿಯ ಶಿವಮೂರ್ತಿ ತನೀಕೆದಾರ (ಗೀಗಿಪದ)

ಚಾಮರಾಜನಗರದ ಗೌರಮ್ಮ (ಸೋಬಾನೆ ಪದ)

ಡಾ.ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿಗೆ ರಾಮನಗರದ ಡಾ.ಚಕ್ಕರೆ ಶಿವಶಂಕರ್‌ ಹಾಗೂ ಡಾ.ಬಿ.ಎಸ್‌. ಗದ್ದಿಗಿಮಠ ತಜ್ಞ ಪ್ರಶಸ್ತಿಗೆ ಕಲಬುರಗಿಯ ಡಾ. ಬಸವರಾಜ ಪಾಟೀಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿ ತಲಾ ₹ 25 ಸಾವಿರ ಮತ್ತು ಸ್ಮರಣಿಕೆ, ತಜ್ಞ ಪ್ರಶಸ್ತಿ ತಲಾ ₹ 50 ಸಾವಿರ, ಸ್ಮರಣಿಕೆ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಸಂಚಾಲಕ ಎಚ್‌.ಪಿ. ರವಿರಾಜ್‌, ಅಕಾಡೆಮಿಯ ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.