ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ಭಾನುವಾರ ಸಂಜೆ ಕರ್ನಾಟಕ ಜಾನಪದ ಪರಿಷತ್ತು ಆಶ್ರಯದಲ್ಲಿ ನಡೆದ ಬುಡಕಟ್ಟು ಜಾನಪದ ಲೋಕೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ನಾಡಿನ 18 ಕಲಾವಿದರು, ತಜ್ಞರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ‘ಮಧ್ಯದ ಕಾಲಘಟ್ಟದಲ್ಲಿ ಜಾನಪದಕ್ಕೆ ಹಿನ್ನಡೆ ಆಗಿದ್ದು ನಿಜ. ಆದರೆ ಮತ್ತೆ ಅದನ್ನು ನೆನಪಿಸುವ, ಪ್ರೋತ್ಸಾಹಿಸುವ ಕಾರ್ಯ ಆರಂಭ ಆಗಿದೆ. ಜಾನಪದ ಲೋಕ ಈ ವಿಚಾರದಲ್ಲಿ ನಾಡಿಗೆ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.
ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಹಿರಿಯ ವಕೀಲ ಉದಯ್ ಹೊಳ್ಳ, ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಆಡಳಿತ ಮಂಡಳಿ ಸದಸ್ಯ ಹಿ.ಚಿ. ಬೋರಲಿಂಗಯ್ಯ ವೇದಿಕೆಯಲ್ಲಿ ಇದ್ದರು.
ಪ್ರಶಸ್ತಿ ಪುರಸ್ಕೃತರು: ಯಲ್ಲವ್ವ ಮಾದರ (ಬೆಳಗಾವಿ), ಸೋಮಶೇಖರ ಇಮ್ರಾಪುರ (ಧಾರವಾಡ), ಶಿವಾನಂದ ಕಳವೆ (ಉತ್ತರ ಕನ್ನಡ) ಶಾರದ ಸೋಮಯ್ಯ (ಕೊಡಗು), ಕಡಬ ಶ್ರೀನಿವಾಸ (ಬೆಂಗಳೂರು), ಶಿವನಂಜೇಗೌಡ (ಹಾಸನ), ಗೌರಮ್ಮ (ರಾಮನಗರ), ಸೂಲಗಿತ್ತಿ ಸೋಬಾನೆ ನಂಜಮ್ಮ (ತುಮಕೂರು), ದೊಡ್ಡಮನಿ ಗೋಪಾಲಪ್ಪ (ವಿಜಯ ನಗರ), ಹೇರಂಜೆ ಗೋಪಾಲ ಗಾಣಿಗ (ಉಡುಪಿ), ಉಸ್ತಾದ್ ಮಿರ್ಜಿ ಪೈಲ್ವಾನ್ (ಬಳ್ಳಾರಿ), ಮಹದೇವಪ್ಪ ಮೋನಪ್ಪ ಬಡಿಗೇರ (ಬಾಗಲಕೋಟೆ), ಶಿವಲಿಂಗಪ್ಪ (ಕೊಪ್ಪಳ), ಕೆ.ವಿ. ರಮೇಶ್ (ಕಾಸರಗೋಡು), ಶರಣಯ್ಯ ಸ್ವಾಮಿ (ಬೀದರ್), ವೈ. ನಿಂಗಪ್ಪ (ಬಳ್ಳಾರಿ), ಶಾಂತಿ ನಾಯಕ್ (ಉತ್ತರ ಕನ್ನಡ). ವಿಶೇಷ ಪುರಸ್ಕಾರ: ಕುರುವ ಬಸವರಾಜು (ಬೆಂಗಳೂರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.