ADVERTISEMENT

ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 16:44 IST
Last Updated 10 ಮಾರ್ಚ್ 2022, 16:44 IST
ದತ್ತಾತ್ರೇಯ ಕುರಹಟ್ಟಿ
ದತ್ತಾತ್ರೇಯ ಕುರಹಟ್ಟಿ   

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಾವೇರಿಯ ವೃತ್ತಿರಂಗಭೂಮಿ ಕಲಾವಿದ ಹಾಗೂ ಗಾಯಕ ದತ್ತಾತ್ರೇಯ ಕುರಹಟ್ಟಿ ಅವರು‘ಜೀವಮಾನ ರಂಗಸಾಧನೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಆರ್‌. ಭೀಮಸೇನ ನೇತೃತ್ವದ ಕಾರ್ಯಕಾರಿ ಸಮಿತಿಯು ಈ ಆಯ್ಕೆಯನ್ನು ಮಾಡಿ, ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ‘ಜೀವಮಾನ ರಂಗಸಾಧನೆ ಪ್ರಶಸ್ತಿ’ಯು ₹ 50 ಸಾವಿರ ನಗದು ಹಾಗೂ ನಟರಾಜ ವಿಗ್ರಹ, ಫಲಕವನ್ನು ಒಳಗೊಂಡಿದೆ.‌

ಹಾಲಯ್ಯ ವೀರಭದ್ರಯ್ಯ, ಸಿ.ಜೆ. ಲತಾಶ್ರೀ ಸೇರಿದಂತೆ 23 ರಂಗ ಸಾಧಕರು ವಾರ್ಷಿಕ ‘ರಂಗಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಬೆಳಗಾವಿಯ ಮಹಾಂತೇಶ ರಾಮದುರ್ಗ ಅವರು ‘ಯುವ ರಂಗ ಪ್ರಶಸ್ತಿ’ ಹಾಗೂ ಆದವಾನಿಯ ಬದಿನೇಹಾಳು ಭೀಮಣ್ಣ ಅವರು ‘ಗಡಿನಾಡು ರಂಗ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.ಈ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹಾಗೂ ನಟರಾಜ ವಿಗ್ರಹ, ಫಲಕವನ್ನು ಒಳಗೊಂಡಿದೆ.

ADVERTISEMENT

‘ಕಲ್ಚರ್ಡ್‌ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ಬೆಂಗಳೂರಿನ ಎಚ್. ವೆಂಕಟೇಶ್,‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ’ಕ್ಕೆ ಜಲಮಂಡಳಿ ಆರ್. ರಾಮಚಂದ್ರ,‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ’ಗೆ ಕಲಬುರಗಿಯ ಸೀತಾ ಚಂದ್ರಕಾಂತ ಮಲ್ಲಾಬಾದಿ,‘ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರ’ಕ್ಕೆ ಕೊಡಗಿನ ಪಿ.ಎ. ಸರಸ್ವತಿ ಹಾಗೂ‘ಕೆ. ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ’ಕ್ಕೆ ಹೊಸಪೇಟೆಯ ಟಿ.ಬಿ. ಡ್ಯಾಮ್ ಕನ್ನಡ ಕಲಾ ಸಂಘ ಆಯ್ಕೆಯಾಗಿದೆ.ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಬಹುಮಾನ ಹಾಗೂ ನಟರಾಜ ವಿಗ್ರಹ ಫಲಕಗಳನ್ನು ಹೊಂದಿದೆ.

ವಿವಿಧ ದತ್ತಿನಿಧಿ ಪುರಸ್ಕಾರಗಳ ನಗದು ಬಹುಮಾನವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ಷಿಕ ರಂಗಪ್ರಶಸ್ತಿ ಪುರಸ್ಕೃತರು

ಹೆಸರು; ಜಿಲ್ಲೆ

ಹಾಲಯ್ಯ ವೀರಭದ್ರಯ್ಯ ಹುಡೇಜಾಲಿ; ಕೊಪ್ಪಳ

ಸಿ.ಜೆ. ಲತಾಶ್ರೀ; ಬಳ್ಳಾರಿ

ಬಿ. ಗಂಗಣ್ಣ; ಬಳ್ಳಾರಿ

ಲಲಿತಾಬಾಯಿ ಲಾಲಪ್ಪ ದಶವಂತ; ವಿಜಯಪುರ

ಹನುಮಂತ ನಿಂಗಪ್ಪ ಸುಣಗದ; ಬಾಗಲಕೋಟೆ

ಸುಮಿತ್ರಾ ಯಲ್ಲವ್ವ ಮಾದರ; ಬಾಗಲಕೋಟೆ

ಅಡವಯ್ಯ ಸ್ವಾಮಿ ವಿ. ಕುಲಕರ್ಣಿ; ಬೆಳಗಾವಿ

ಶಾಂತಪ್ಪ ರುದ್ರಗೌಡ ಜಾಲಿಕೋನಿ; ಹಾವೇರಿ

ವಿಜಯಕುಮಾರ ಜಿತೂರಿ; ಗದಗ

ಕೆ. ವೀರಯ್ಯ ಸ್ವಾಮಿ; ದಾವಣಗೆರೆ

ಬಿ.ಪಿ. ಯಮನೂರ ಸಾಬ್; ದಾವಣಗೆರೆ

ಡಿ. ಅಡವೀಶಯ್ಯ; ತುಮಕೂರು

ಟಿ. ವಿಮಲಾಕ್ಷಿ; ಚಿತ್ರದುರ್ಗ

ಪ್ರೊ.ಎಸ್.ಸಿ. ಗೌರಿಶಂಕರ; ಶಿವಮೊಗ್ಗ

ಕೆ.ಎಂ. ನಂಜುಂಡಪ್ಪ; ಚಿಕ್ಕಮಗಳೂರು

ಎಂ.ಎನ್. ಸುರೇಶ; ಹಾಸನ

ಸರೋಜಾ ಹೆಗಡೆ; ಮೈಸೂರು

ಸರೋಜಿನಿ ಶೆಟ್ಟಿ; ಮಂಗಳೂರು

ಚಂದ್ರಹಾಸ ಸುವರ್ಣ; ಉಡುಪಿ

ಡಿ. ಕೆಂಪಣ್ಣ; ಬೆಂಗಳೂರು ಗ್ರಾಮಾಂತರ

ಡಾ.ಜೆ. ಶ್ರೀನಿವಾಸಮೂರ್ತಿ; ಬೆಂಗಳೂರು

ಸುಧಾ ಹೆಗಡೆ; ಬೆಂಗಳೂರು

ಎಂ.ಸಿ. ಸುಂದರೇಶ; ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.