ತುಮಕೂರು: ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ 2019–20ನೇ ಸಾಲಿನ ಅಕಾಡೆಮಿಯ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಜಿ.ವಿ.ಶಾರದ ಅವರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಲಾಯಿತು. ನಾಗೇಂದ್ರ ಶಾ, ಕೆ.ಪಿ.ಪ್ರಕಾಶ್, ಡಾ.ಎಂ.ಬೈರೇಗೌಡ, ಮಂಜುಳಾ ಮಂಜುನಾಥ್, ಮಾಲೂರು ಸಿದ್ದಪ್ಪ, ಕೆ.ಜಂಬುನಾಥ, ಸಿದ್ದಲಿಂಗಪ್ಪ, ಭಾಸ್ಕರ್ ಮಣಿಪಾಲ, ಪ್ರೊ.ಎಂ.ಎಸ್.ವೇಣುಗೋಪಾಲ್, ಬಿ.ನಾಗರಾಜಗೌಡ, ಪಿ.ಶಾಡ್ರಾಕ್, ವಿಜಯ್ ಕುಮಾರ್ ಕೊಡಿಯಾಲ್ ಬೈಲು, ಪರಮೇಶ್ವರ ಲೆಂಡೆ, ಗುರುನಾಥಪ್ಪ ಉಂಗುರಶೆಟ್ಟಿ ಕೋಟೆ, ರಮೇಶ್ ಹಂಚಿನಮನಿ, ಬಸವರಾಜ ಹೆಸರೂರು, ಮಧುಕುಮಾರ ಉ.ಹರಿಜನ, ಬಿ.ಎನ್.ಶಶಿಕಲಾ, ಬಿ.ಎಲ್.ರವಿಕುಮಾರ್, ಸಿ.ಎಸ್.ಪಾಟೀಲ ಕುಲಕರ್ಣಿ, ಝಕೀರ್ ನದಾಫ್, ಶಾಂತಮ್ಮ ಬಿ.ಮಲಕಲ್ಲ, ಸಂಗಮೇಶ ದೇವೇಂದ್ರ ಬದಾಮಿ, ಶಶಿಪ್ರಭಾ ಆರಾಧ್ಯ, ಗಣಪತಿ ಬಿ.ಹೆಗಡೆ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿದರು.
ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರವನ್ನು ಬಿ.ಮಲ್ಲಿಕಾರ್ಜುನ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿನಿಧಿ ಪುರಸ್ಕಾರವನ್ನು ಕೋಮಲಮ್ಮಕೊಟ್ಟೂರು, ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರವನ್ನು ನಾಮದೇವ ನೂಲಿ, ಕೆ.ರಾಮಚಂದ್ರಯ್ಯ ದತ್ತಿ ನಿಧಿ ರಸ್ಕಾರವನ್ನು ಅರವಿಂದ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.