ಬೆಂಗಳೂರು: ವಾರದಿಂದ ರಾಷ್ಟ್ರಮಟ್ಟದ ಗಮನ ಸೆಳೆದಿರುವ ರಾಜ್ಯ ರಾಜಕೀಯ ಜನರಲ್ಲಿ ಹೊಸ ಆಡು ಮಾತುಗಳನ್ನು ಹುಟ್ಟು ಹಾಕಿದೆ. ರಾಜಕೀಯ ಪ್ರಹಸನದ ತಿಕ್ಕಾಟದಲ್ಲಿಮೇಲೆದ್ದಿರುವ ನವಗಾದೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
‘ಮೂರು ಕೊಟ್ರೆ ಪಾರ್ಟಿ ಕಡೆ; ಆರು ಕೊಟ್ರೆ ರೆಸಾರ್ಟ್ ಕಡೆ, ಕೂತು ಕಲಾಪ ನೋಡೋವ್ನಿಗೆ 2 ಜಿಬಿ ಡೇಟಾ ಸಾಲದು,..‘ ಇಂಥ ಸಾಲುಗಳ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಕೆಲವು ದಿನಗಳಿಂದ ನಡೆದ ಬೆಳವಣಿಗೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಂಬಿಸಲಾಗುತ್ತಿದೆ.
ಬಿಜೆಪಿ ತಾಳ್ಮೆ, ಮುಂಬೈ ಬಿಟ್ಟು ಬರದ ಅತೃಪ್ತ ಶಾಸಕರು, ಕಾಂಗ್ರೆಸ್–ಜೆಡಿಎಸ್ ಮುಖಂಡರು ಸರ್ಕಾರ ಉಳಿಸಲು ನಡೆಸಿದ ಯತ್ನ, ಸ್ಪೀಕರ್ ಮಾತು, ರಾಜ್ಯಪಾಲರ ಮಧ್ಯ ಪ್ರವೇಶ,...ಹೀಗೆ ಎಲ್ಲಕ್ಕೂ ವ್ಯಂಗ್ಯದ ಲೇಪ ಹಚ್ಚಿ ಹರಿಯಬಿಡಲಾಗಿದೆ.
ಕೆಲವರು ಹಳೆಯ ಗಾದೆಗಳಿಗೆ ಇಂದಿನ ಪರ್ಯಾಯ ಸಾಲುಗಳನ್ನೂ ನಮೂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.