ಬೆಂಗಳೂರು: ರಾಜ್ಯದಲ್ಲಿ ಆರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಜಿಸುವ ಜತೆಗೆ ‘ಪ್ರಿನ್ಸಿಪಲ್ ಡೆಪ್ಯುಟಿ ಚೀಫ್ ಮಿನಿಸ್ಟರ್’ ಹುದ್ದೆಯನ್ನು ಸೃಜಿಸಿ ಇತಿಹಾಸ ಸೃಷ್ಟಿಸಬೇಕು ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ ಎಂಬುದನ್ನು ಪತ್ರ ಬರೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಮರ ಸಾರಿದ್ದ ರಾಯರೆಡ್ಡಿಯವರು, ಈಗ ಗಂಭೀರ ಅಸಮಾಧಾನಿತರ ವರ್ಗಕ್ಕೆ ಸೇರಿದ್ದಾರೆ. ತಮಗೂ ಒಂದು ಸ್ಥಾನ ಸೇರಿಸಿ ಆರು ಮಂದಿ ಡಿಸಿಎಂ ನೇಮಕ ಮಾಡಲು ಈಗ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದೆ.
ಆಡಳಿತವೇ ನಿಸ್ತೇಜವಾಗಿರುವ ಕಾಂಗ್ರೆಸ್ ಸರ್ಕಾರವು ನಿತ್ಯವೂ ಅಧಿಕಾರದ ಲಾಬಿಯಲ್ಲೇ ಮುಳುಗಿದೆ. ಇರುವ 33 ಮಂದಿಯನ್ನೂ ಡಿಸಿಎಂ ಮಾಡಿ ಮುರಿಯಲಾರದ ಇತಿಹಾಸ ಸೃಷ್ಟಿಸಿದ ನಂತರವಾದರೂ ಚೂರುಪಾರು ಕೆಲಸಗಳಾದರೂ ನಡೆಯಲು ಶುರುವಾಗಬಹುದೇನೋ ಎಂಬುದನ್ನು ಕಾದು ನೋಡಬೇಕು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.