ADVERTISEMENT

ಹೋರಾಟದ ಹಾದಿ ತಪ್ಪಿಸುತ್ತಿರುವ ಡಿಕೆ–ಎಚ್‌ಡಿಕೆ ವಾಗ್ಯುದ್ಧ: SR ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 15:48 IST
Last Updated 6 ಆಗಸ್ಟ್ 2024, 15:48 IST
<div class="paragraphs"><p>ಎಸ್‌.ಆರ್‌.ವಿಶ್ವನಾಥ್‌</p></div>

ಎಸ್‌.ಆರ್‌.ವಿಶ್ವನಾಥ್‌

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವಿನ ವೈಯಕ್ತಿಕ ಟೀಕೆ– ಟಿಪ್ಪಣಿಗಳು ಮುಡಾ ಹೋರಾಟದ ಹಾದಿ ತಪ್ಪಿಸುತ್ತಿವೆ’ ಎಂದು ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದರು.

ADVERTISEMENT

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಇಬ್ಬರ ಮಧ್ಯದ ಪರಸ್ಪರ ಟೀಕೆಗಳಿಂದ ಕಾರ್ಯಕರ್ತರ ಹುಮ್ಮಸ್ಸು ಕಡಿಮೆ ಆಗುತ್ತಿದೆ. ಇವರ ವಾಗ್ಯುದ್ಧಕ್ಕೆ ಬೇರೆಯದೇ ವೇದಿಕೆ ಕಲ್ಪಿಸಿಕೊಡುವುದು ಸೂಕ್ತ. ಮುಖ್ಯಮಂತ್ರಿ ವಿರುದ್ಧದ ಹೋರಾಟ ಮರೆತ ಹಾಗಿದೆ. ನಮ್ಮ ಗುರಿ ಮುಖ್ಯಮಂತ್ರಿ ರಾಜೀನಾಮೆ. ಅದಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ‘ವರಿಷ್ಠರು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗಿದ್ದವರನ್ನೇ ಉಚ್ಛಾಟನೆ ಮಾಡಿರುವ ಉದಾಹರಣೆಗಳಿವೆ. ಅವರಿಗೆ ನೋವು ಆಗಿದ್ದರೆ ವರಿಷ್ಠರ ಮುಂದೆ ಹೇಳಿಕೊಳ್ಳಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.