ADVERTISEMENT

ಡಿಕೆಶಿ ಸಿಎಂ ಆಗಲು ವಲಸೆ ನಾಯಕ ಸಿದ್ದರಾಮಯ್ಯ ಎಂದಿಗೂ ಬಿಡುವುದಿಲ್ಲ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2024, 12:34 IST
Last Updated 29 ಸೆಪ್ಟೆಂಬರ್ 2024, 12:34 IST
<div class="paragraphs"><p>ಬಿಜೆಪಿ ( ಸಾಂಕೇತಿಕ ಚಿತ್ರ)</p></div>

ಬಿಜೆಪಿ ( ಸಾಂಕೇತಿಕ ಚಿತ್ರ)

   

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ದಿನೇ ದಿನೇ ಸ್ಪರ್ಧೆ ಹೆಚ್ಚಾಗುತ್ತಿದೆ. ಸಿಎಂ ಆಗುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ಆಸೆಗೆ ಸಿದ್ದರಾಮಯ್ಯ ಅವರು ತಣ್ಣೀರು ಎರಚಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರಿಗೆ ಸ್ವಪಕ್ಷದಲ್ಲಿಯೇ ಸ್ವಾತಂತ್ರ್ಯ ಇಲ್ಲದಂತಾಗಿದೆ. ಅವರ ಸಿಎಂ ಆಗುವ ಹಗಲು ಕನಸಿನ ಆಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಸಚಿವರ ಮೂಲಕ ತಣ್ಣೀರು ಎರಚಿದ್ದಾರೆ. ದುರ್ಬಲ ಕೆಪಿಸಿಸಿ ಅಧ್ಯಕ್ಷರಿಗೆ ಈಗ ಸಿದ್ದರಾಮಯ್ಯ ಬೆಂಬಲಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎಂದು ವ್ಯಂಗ್ಯವಾಡಿದೆ.

ADVERTISEMENT

‘ಅಧಿಕಾರದ ಮೂಲಕ ತಮ್ಮ ಸ್ವ ಕುಟುಂಬದ ‘ಕಲ್ಯಾಣ’ ಮಾಡಿಕೊಂಡ ಸಿದ್ದರಾಮಯ್ಯ ಅವರು ಕೋರ್ಟ್‌ ಛೀಮಾರಿ ಹಾಕಿದರೂ ಕುರ್ಚಿಯಿಂದ ಏಳಲೂ ಸಿದ್ಧವಿಲ್ಲ. ಪಕ್ಷ ಕಟ್ಟಿದ ಡಿಕೆಶಿ ಅವರಿಗೆ ಹೈಕಮಾಂಡ್‌ ಕೂಡಾ ಮನ್ನಣೆ ನೀಡುತ್ತಿಲ್ಲ. ಡಿಕೆಶಿ ಅವರದ್ದು ಈಗ ತಿರುಕನ ಕನಸಾಗಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಡಿ.ಕೆ ಶಿವಕುಮಾರ್‌ ಕುಳಿತುಕೊಳ್ಳಲು ವಲಸೆ ನಾಯಕ ಸಿದ್ದರಾಮಯ್ಯ ಎಂದಿಗೂ ಬಿಡುವುದಿಲ್ಲ ಎಂದು ಅವರ ತಾಯಿ ಗೌರಮ್ಮ ಹೇಳಿದ ಭವಿಷ್ಯ ನಿಜವಾಗುತ್ತಿದೆ’ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್‌ vs ಕಾಂಗ್ರೆಸ್‌ ಕಿತ್ತಾಟ ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ಮಾರಕವಾಗುವುದು ಖಚಿತವಾಗಿದೆ ಎಂದು ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.