ಬೆಂಗಳೂರು: ಬಿಜೆಪಿಯವರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿಸುವ ತಾಕತ್ತು ಇದಿಯೇ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಗರು ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೋ, ಬೇಡವೋ ಎಂದು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರಂತೆ. ಆದರೆ, ಪೆಟ್ರೋಲ್ ಬೆಲೆ ಇಳಿಸಬೇಕೋ, ಬೇಡವೋ?, ಉದ್ಯೋಗ ನೀಡಬೇಕೋ, ಬೇಡವೋ?, ಲಸಿಕೆ ನೀಡಬೇಕೋ, ಲಾಕ್‌ಡೌನ್ ಮಾಡಬೇಕೋ?, ಬೆಲೆ ಏರಿಕೆ ತಡೆಯಬೇಕೋ, ಬೇಡವೋ? ಮುಂತಾದ ಜನಪರ ವಿಚಾರಗಳ ಅಭಿಪ್ರಾಯ ಕೇಳುವ ತಾಕತ್ತಿದೆಯೇ ಬಿಜೆಪಿಗೆ?’ ಎಂದು ಪ್ರಶ್ನಿಸಿದೆ.
‘ಹಲವು ದೇಶಗಳು ತಮ್ಮ ದೇಶದ ಜನತೆಗೆ ಸಂಪೂರ್ಣ ಲಸಿಕೆ ನೀಡಿ ಕೋವಿಡ್ ನಿಯಮಗಳನ್ನು ರದ್ದುಗೊಳಿಸಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿವೆ. ಆದರೆ, ನಮ್ಮಲ್ಲಿ ಒಂದು ವರ್ಷ ಸಮಯಾವಕಾಶ ಇದ್ದರೂ ಬಿಜೆಪಿ ಸರ್ಕಾರ ಲಸಿಕೆ ನೀಡಲಾಗದೆ ಇನ್ನೂ ಸಹ ಲಾಕ್‌ಡೌನ್ ಮಾಡುವ ಬಗ್ಗೆಯೇ ಚರ್ಚೆಯಲ್ಲಿರುವುದು ವಿಪರ್ಯಾಸ. ಬಿಜೆಪಿಯ ವೈಫಲ್ಯ ರಾಜ್ಯಕ್ಕೆ ಮಾರಕವಾಗಲಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.