ADVERTISEMENT

ವಿಧಾನಸಭೆ| ಇದನ್ನೆಲ್ಲ ಎಸೆದು ಹೋಗ್ತೇನೆ: ಶಾಸಕ ಶಿವಲಿಂಗೇಗೌಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 4:49 IST
Last Updated 21 ಜುಲೈ 2023, 4:49 IST
ಕೆ.ಎಂ. ಶಿವಲಿಂಗೇಗೌಡ
ಕೆ.ಎಂ. ಶಿವಲಿಂಗೇಗೌಡ   

ಬೆಂಗಳೂರು: ಅಧಿವೇಶನ ನಡೆಯುವಾಗ ‌ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ‘ಆದಷ್ಟು ಬೇಗ ಮಾತನ್ನು ಮುಗಿಸಿ, ಬೇರೆಯವರಿಗೂ ಮಾತನಾಡಲು ಅವಕಾಶ ನೀಡಬೇಕು’ ಎಂದು ಕೆ.ಎಂ.ಶಿವಲಿಂಗೇಗೌಡರಿಗೆ ಸೂಚಿಸಿದರು.

ಇದರಿಂದ ಕೆಂಡಾಮಂಡಲರಾದ ಶಿವಲಿಂಗೇಗೌಡ, ‘ಹೀಗೆ ಹೇಳಿದರೆ ಇದನ್ನೆಲ್ಲ(ಬಜೆಟ್‌ ಪ್ರತಿ) ಎಸೆದು ಹೋಗುತ್ತೇನೆ’ ಎಂದು ಪ್ರತಿಯನ್ನು ಮೇಜಿಗೆ ಕುಕ್ಕಿದರು.

‘ಏ ಇದೇನ್ ಹೀಗ್‌ ಹೇಳ್ತೀರಿ, ನೀವು ಹೀಗೆ ಹೇಳಿದರೆ ನಾವ್ಯಾಕೆ ಇಲ್ಲಿಗೆ ಬರಬೇಕು. ಒಂದು–ಎರಡು ನಿಮಿಷದಲ್ಲಿ ಭಾಷಣ ಮುಗಿಸ ಬೇಕೇನ್ರಿ. ನಮಗೆ ಸ್ವಲ್ಪವೂ ಗೌರವವಿಲ್ಲವೇ? ಇಲ್ಲಿ ಹರಟೆ ಹೊಡೆ ಯುವವರಿಗೆ ಒಂದರಿಂದ ಎರಡು ಗಂಟೆ ಅವಕಾಶ ಕೊಡ್ತೀರಿ. ಮಾತನಾಡುವು ದಿಲ್ಲ, ಕೂತ್ಕೋತಿನಿ’ ಎಂದು ರೇಗಿದರು.

ADVERTISEMENT

ಇದರಿಂದ ಗಲಿಬಿಲಿಗೊಂಡ ಲಮಾಣಿ ‘ಮಾತಾಡಿ...ಮಾತಾಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.