ಬೆಂಗಳೂರು: ‘ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು, ಜಿಎಸ್‌ಟಿ ಸಭೆಗೆ ಹೋಗುವ ಪ್ರತಿನಿಧಿ ಕಡಲೆಕಾಯಿ ತಿನ್ನುತ್ತಾರಾ ಎಂದಿರುವುದು ಕೀಳುಮಟ್ಟದ ಹೇಳಿಕೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
‘ಅಶೋಕ ಅವರ ಹೇಳಿಕೆ ಓದಿ ನಿಜಕ್ಕೂ ಆಘಾತವಾಯಿತು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮತ್ತು ಈ ಹಿಂದೆ ಕಂದಾಯ ಇಲಾಖೆ ಸಚಿವರಾಗಿದ್ದವರಿಗೆ ಜಿಎಸ್‌ಟಿ ಸಮಿತಿ ಮತ್ತು ಹಣಕಾಸು ಆಯೋಗದ ನಡುವಿನ ವ್ಯತ್ಯಾಸವೂ ಗೊತ್ತಿಲ್ಲದಿರುವುದು ಅಚ್ಚರಿಯ ಸಂಗತಿ’ ಎಂದು ಅವರು ತಿಳಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ನನ್ನ ವಿರುದ್ಧವೂ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಜಿಎಸ್‌ಟಿ ಸಮಿತಿ ಮತ್ತು ಹಣಕಾಸು ಆಯೋಗ ಬೇರೆ ಬೇರೆ ಎಂಬ ಕುರಿತು ಕಡಲೆಕಾಯಿ ಬೆಳೆಯುವ ಸಾಮಾನ್ಯ ರೈತನಿಗೆ ಇರುವಷ್ಟು ಕನಿಷ್ಠ ಜ್ಞಾನ ಅಶೋಕ ಅವರಿಗೆ ಇಲ್ಲದಿರುವುದು ಈ ನಾಡಿನ ದೌರ್ಭಾಗ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.