ADVERTISEMENT

ದೇಶ ವಿಭಜನೆ ಕಾಂಗ್ರೆಸ್‌ನ ಗುಪ್ತ ಕಾರ್ಯಸೂಚಿ: ಅಶೋಕ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಆರ್‌. ಅಶೋಕ್‌
ಆರ್‌. ಅಶೋಕ್‌   

ಬೆಂಗಳೂರು: ‘ಜೋಡೊ ಭಾರತ್‌’ ಎನ್ನುತ್ತಾ ಭಾರತವನ್ನು ವಿಭಜಿಸುವ ಗುಪ್ತ ಕಾರ್ಯಸೂಚಿಯನ್ನು ಕಾಂಗ್ರೆಸ್‌ ಹೊಂದಿದೆ. ಪಕ್ಷದ ಹುನ್ನಾರ ಸಫಲವಾಗಲು ಭಾರತೀಯರು ಎಂದಿಗೂ ಬಿಡುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ನಾವು ಎಂದು ಬೊಗಳೆ ಬಿಡುವ ಕಾಂಗ್ರೆಸ್‌, ಈಗ ದೇಶ ಒಡೆಯುವ ದೇಶ ದ್ರೋಹದ ಮಾತನಾಡುತ್ತಿದೆ. ಸ್ವಾತಂತ್ರ್ಯ  ಹೋರಾಟಗಾರರ ತ್ಯಾಗ, ಬಲಿದಾನಗಳಿಂದ  ಬಂದ ಸ್ವಾತಂತ್ರ, ಸಾರ್ವಭೌಮತೆ, ಅಖಂಡತೆಯನ್ನು ಛಿದ್ರಮಾಡುವ ಮನೋಸ್ಥಿತಿ ಇರುವವರು ದೇಶದಲ್ಲಿ ಇರಲು ಯೋಗ್ಯರಲ್ಲ’ ಎಂದರು.

ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಇಂತಹ ದೇಶದ್ರೋಹಿ ಹೇಳಿಕೆ ಅಂಬೇಡ್ಕರ್‌ ಅವರ ಸಂವಿಧಾನಕ್ಕೆ ಮಾಡಿದ ಅಪಮಾನ. ನಾಡಗೀತೆಯ ಮೂಲಕ ಕನ್ನಡಾಂಬೆ ಭಾರತ ಮಾತೆಯ ನೆಚ್ಚಿನ ಮಗಳು ಎಂದು ಸಾರಿದ ಕುವೆಂಪು ಅವರ ಚಿಂತನೆಗೆ ಮಾಡಿದ ಅವಮಾನ. ನಾಡದ್ರೋಹಿ, ದೇಶದ್ರೋಹಿ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.