ADVERTISEMENT

ಆಪರೇಷನ್ ಹಸ್ತ ಚರ್ಚೆ| ನನ್ನನ್ನು ಸೋಲಿಸಲು ಬಿಜೆಪಿಗರು ಯತ್ನಿಸಿದ್ದರು: ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 5:02 IST
Last Updated 19 ಆಗಸ್ಟ್ 2023, 5:02 IST
ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್   

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ‘ವಿಧಾನಸಭೆ ಚುನಾವಣೆ ವೇಳೆ ನನ್ನನ್ನು ಸೋಲಿಸಲು ಸ್ವಪಕ್ಷದ ಕೆಲ ಸ್ಥಳೀಯ ಮುಖಂಡರು ಪ್ರಯತ್ನಿಸಿದ್ದರು. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಪಕ್ಷದ ಹಿರಿಯ ನಾಯಕರಿಗೆ ಪತ್ರ ಬರೆದಿರುವೆ. ಲೋಕಸಭೆ ಚುನಾವಣೆಗೆ ಇಂತಹ ತಪ್ಪು ಮರುಕಳಿಸಬಾರದೆಂದರೆ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪಕ್ಷದ ನಿರ್ಣಯಕ್ಕೆ ಕಾಯುತ್ತಿರುವೆ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

‘ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ ಎಂದಿಗೂ ನೋವಾಗಿಲ್ಲ. ಅವರ ಮೇಲಿನ ವಿಶ್ವಾಸದಿಂದ ಬಿಜೆಪಿ ಸೇರಿದೆ. ಆದರೆ, ಸ್ಥಳೀಯ ಮುಖಂಡರು ನನ್ನ ಪರ ಕೆಲಸ ಮಾಡದಿರುವ ಬಗ್ಗೆ ನೋವಿದೆ. ರಾಜಕೀಯವಾಗಿ ಯಾವುದೇ ನಿರ್ಧಾರ ಸದ್ಯಕ್ಕೆ ಕೈಗೊಂಡಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆದಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇವನ್ನೂ ಓದಿ...

ADVERTISEMENT

* ಆಪರೇಷನ್ ಹಸ್ತ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದ ಡಿ.ಕೆ. ಶಿವಕುಮಾರ್‌

* ಆಪರೇಷನ್ ಹಸ್ತದ ಭೀತಿ: ಯಾರೂ ಬಿಜೆಪಿ ಬಿಡುವುದಿಲ್ಲ ಎಂದ ಬಸವರಾಜ ಬೊಮ್ಮಾಯಿ

* ಬಿರುಗಾಳಿ ತಡೆಗೆ ಬಿಜೆಪಿ ಯತ್ನ: ಶಾಸಕರ ಹಿಡಿದಿಡಲು ಅಖಾಡಕ್ಕೆ ಬಿಎಸ್‌ವೈ, ಬೊಮ್ಮಾಯಿ

* ಲೋಕಸಭೆ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು: ’ಮೈತ್ರಿ’ ಮುರಿದವರಿಗೆ ಆಪರೇಷನ್ ಹಸ್ತ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.