ADVERTISEMENT

ಮಧ್ಯಕರ್ನಾಟಕದ ಜೀವನಾಡಿ ಭದ್ರೆಯ ಸೊಬಗು ಕಣ್ತುಂಬಿಕೊಂಡ ಜನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 0:30 IST
Last Updated 31 ಜುಲೈ 2024, 0:30 IST

ಪುನರ್ವಸು ಮಳೆಯ ನಂತರ ಪುಷ್ಯ ಮಳೆ ಈಗ ಆರ್ಭಟಿಸುತ್ತಿದೆ. ಈ ಮಳೆಯಿಂದಾಗಿ, ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ನದಿಯ ಒಡಲು ಭರ್ತಿಯಾಗಿದ್ದು, ಕಣ್ಮನ ಸೆಳೆಯುತ್ತಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಮಂಗಳವಾರ ಬೆಳಿಗ್ಗೆ ನದಿಗೆ ನೀರು ಹರಿಸಲಾಯಿತು.ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಗಳನ್ನು ತೆರೆದಾಗ ಭೋರ್ಗರೆದು ಧುಮ್ಮಿಕ್ಕಿದ ಭದ್ರೆ, ಹಾಲ್ನೊರೆಯ ಹೊದ್ದು ನದಿಗೆ ಹರಿದಳು. ಈ ಸೊಬಗು ಸವಿಯಲು ನೂರಾರು ಪ್ರವಾಸಿಗರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.