Karnataka Rains | ಬಿರುಸುಗೊಂಡ ಮಳೆ, ಮನೆ ಮೇಲೆ ಗುಡ್ಡ ಕುಸಿತ, ನೆರೆಯ ಭೀತಿ
ರಾಜ್ಯದಲ್ಲಿ ಮಳೆ ಬಿರುಸುಗೊಂಡಿದ್ದು, ಹಲೆವೆಡೆ ನೆರೆಯ ಭೀತಿ ಉಂಟಾಗಿದೆ. ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ ಗುರುವಾರ ರಾತ್ರಿ ಗುಡ್ಡ ಕುಸಿದು ಮನೆಯೊಳಗೆ ಬಿದ್ದಿದೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ದೂದ್ ಸಾಗರ ಬಳಿ ರೈಲ್ವೆ ಮಾರ್ಗದಲ್ಲಿ ಎರಡು ಕಡೆ ಭೂಕುಸಿತ ಸಂಭವಿಸಿದೆ. ಬೆಳಗಾವಿಯ ಖಾನಾಪುರ ತಾಲ್ಲೂಕಿನಲ್ಲಿಇಡೀ ರಾತ್ರಿ ಮಳೆ ಮುಂದುವರಿದ ಪರಿಣಾಮ ಚೋರ್ಲಾ ಘಾಟ್‌ನಲ್ಲಿ ಭೂ ಕುಸಿತ ಉಂಟಾಗಿದೆ. ಶಿರಸಿ ತಾಲ್ಲೂಕಿನ ಗಡಿಗ್ರಾಮ ಮೊಗವಳ್ಳಿಗೆ ನೆರೆ ಭೀತಿ ಎದುರಾಗಿದೆ. ಸಾಗರ ಭಾಗದಲ್ಲಿಯೂ ಅಧಿಕ ಮಳೆ ಸುರಿಯುತ್ತಿರುವ ಪರಿಣಾಮ ವರದಾ ನದಿ ಉಕ್ಕಿದೆ.
ಪ್ರಜಾವಾಣಿ ವಾರ್ತೆ
Published 23 ಜುಲೈ 2021, 7:36 IST
Last Updated 23 ಜುಲೈ 2021, 7:36 IST
ಯಲ್ಲಾಪುರ: ಮನೆ ಮೇಲೆ ಕುಸಿದ ಗುಡ್ಡ: ತೋಟ, ಗೇರು ನೆಡುತೋಪು ನೆಲಸಮ
ಚೋರ್ಲಾ ಘಾಟ್‌ನಲ್ಲಿ ಭೂಕುಸಿತ: ಕರ್ನಾಟಕ– ಗೋವಾ ಸಂಚಾರ ಸ್ಥಗಿತ
ಚೋರ್ಲಾ ಘಾಟ್‌ನಲ್ಲಿ ಭೂ ಕುಸಿತ
ಒಂದು ಎಕರೆ ಅಡಿಕೆ ತೋಟ ಮತ್ತು ಎರಡು ಎಕರೆ ಗೇರು ನೆಡುತೋಪು ನೆಲಸಮವಾಗಿದೆ.
ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿ ಸಮೀಪದ ಶರಣೆ ಗಂಗಾಂಬಿಕಾ ಐಕ್ಯಮಂಟಪದ ಬಳಿ ಮಲಪ್ರಭಾ ನದಿಯ ನೋಟ
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಬಳಿ ವೇದಗಂಗಾ ನದಿ ಪ್ರವಾಹದಿಂದ ರಸ್ತೆ ಜಲಾವೃತವಾಗಿದ್ದು, ಲಾರಿಯೊಂದು ಸಿಲುಕಿದೆ
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಸಮೀಪದ ನಾಗರ ಹಳ್ಳ ತುಂಬಿ ಹರಿಯುತ್ತಿದೆ
ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯದಿಂದ ಬೆಳಿಗ್ಗೆ 11ರ ಮಾಹಿತಿಯಂತೆ 10 ಗೇಟ್‌ಗಳನ್ನು ತೆರೆಯಲಾಗಿದೆ.
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದಲ್ಲಿ ಪಾಂಡರಿ ನದಿಯ ಪ್ರವಾಹದ ಕಾರಣ ಕೆಲವು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.
ರಕ್ಷಣಾ ಕಾರ್ಯಾಚರಣೆ
ಸ್ಥಳೀಯ ಗ್ರಾಮ ಪಂಚಾಯ್ತಿ ವತಿಯಿಂದ ಸಂತ್ರಸ್ತರನ್ನು ಸ್ಥಳಾಂತರಿಸಿ, ಸಮೀಪದ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆದಿದೆ.
ಮಳೆಯಿಂದಾಗಿ ಬೆಳಗಾವಿ ನಗರದ ಶಾಹೂನಗರದ ಬೆನಕೆ ಬಡಾವಣೆಯ ಮನೆಗಳು ಜಲಾವೃತವಾಗಿವೆ
ಬೆಳಗಾವಿಯ ಶಾಸ್ತ್ರಿನಗರದ ರಸ್ತೆ ಕಾಲುವೆಯಂತಾಗಿದೆ
ಬೆಳಗಾವಿ: ಸತತ ಮಳೆಯಿಂದಾಗಿ ಶಿವಾಜಿನಗರ 5ನೇ ಮುಖ್ಯರಸ್ತೆಯಲ್ಲಿ ಹಲವು ಮನೆಗಳ ಗೋಡೆಗಳು ಕುಸಿದಿವೆ.
ಕುಡಚಿ-ಉಗಾರ ಸೇತುವೆಯಲ್ಲಿ ಸಂಚಾರ ಬಂದ್
ಉಕ್ಕಡಗಾತ್ರಿ ತುಂಗಭದ್ರಾ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದೆ
ಕೃಷ್ಣಾನದಿ ಪ್ರವಾಹ: ಶೀಲಹಳ್ಳಿ ಸೇತುವೆ ಮುಳುಗಡೆ
ಜೊಯಿಡಾ: ಹಲವೆಡೆ ಜನ ಸಂಚಾರ ಸಂಪೂರ್ಣ ಕಡಿತ
ಭಾರಿ ಮಳೆ, ಸಂಕಷ್ಟದಲ್ಲಿ ಜನರು
ಶಿರಸಿ ತಾಲ್ಲೂಕಿನ ಗಡಿಗ್ರಾಮ ಮೊಗವಳ್ಳಿಗೆ ನೆರೆ ಭೀತಿ ಎದುರಾಗಿದೆ.