ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘ 2018ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರುಹಾಗೂ ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.
ಸಾಹಿತ್ಯ ಕೃತಿ ಪ್ರಕಾರಗಳಾದ ಕಾದಂಬರಿ (ಕುವೆಂಪು ಬಹುಮಾನ), ಅನುವಾದ (ಪ್ರೊ.ಎಸ್.ಬಿ.ಪರಮೇಶ್ವರ ಭಟ್ಟ), ಮಹಿಳಾ ಸಾಹಿತ್ಯ (ಎಂ.ಕೆ.ಇಂದಿರಾ), ಮುಸ್ಲಿಂ ಬರಹಗಾರರು (ಪಿ.ಲಂಕೇಶ್), ಕವನ ಸಂಕಲನ (ಡಾ.ಜಿ.ಎಸ್.ಶಿವರುದ್ರಪ್ಪ), ಅಂಕಣ ಬರಹಗಾರರು (ಡಾ.ಹಾ.ಮಾ.ನಾಯಕ) ಸಣ್ಣ ಕಥಾ ಸಂಕಲನ (ಡಾ.ಯು.ಆರ್. ಅನಂತಮೂರ್ತಿ), ನಾಟಕ (ಡಾ.ಕೆ.ವಿ.ಸುಬ್ಬಣ್ಣ), ಪ್ರವಾಸ ಸಾಹಿತ್ಯ (ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ), ವಿಜ್ಞಾನ ಸಾಹಿತ್ಯ(ಹಸೂಡಿ ವೆಂಕಟಶಾಸ್ತ್ರಿ), ಮಕ್ಕಳ ಸಾಹಿತ್ಯ (ಡಾ.ನಾ.ಡಿಸೋಜ), ವೈದ್ಯ ಸಾಹಿತ್ಯ (ಡಾ.ಎಚ್.ಡಿ.ಚಂದ್ರಪ್ಪಗೌಡ) ಕೃತಿಗಳು.
ಮರುಮುದ್ರಣಗೊಂಡಕೃತಿಗಳು, ಹಸ್ತ ಪ್ರತಿಹಾಗೂಸಂಪಾದಿತಕೃತಿಗಳಿಗೆ ಅವಕಾಶವಿಲ್ಲ, ಹಿಂದೆ ಕರ್ನಾಟಕ ಸಂಘದ ಬಹುಮಾನ ಪಡೆದವರು ಇನ್ನಿತರೆ ಯಾವುದೇ ವಿಭಾಗಕ್ಕೆ ಸ್ಪರ್ಧಿಸಬಹುದು. ಲೇಖಕರು, ಪ್ರಕಾಶಕರು ಮತ್ತು ಅಭಿಮಾನಿಗಳು ಬಹುಮಾನ ಪುಸ್ತಕ ಕಳುಹಿಸಬಹುದು, ಸಂಘದ ಸದಸ್ಯರು ಭಾಗವಹಿಸುವಂತಿಲ್ಲ.
ಆಸಕ್ತರು ಕೃತಿಗಳಮೂರು ಪ್ರತಿಗಳನ್ನುಫೆ. 28ರ ಒಳಗೆಗೌರವ ಕಾರ್ಯದರ್ಶಿಗಳು, ಕರ್ನಾಟಕ ಸಂಘ, ಬಿ.ಎಚ್.ರಸ್ತೆ, ಶಿವಮೊಗ್ಗ– ಈ ವಿಳಾಸಕ್ಕೆ ಕಳುಹಿಸಬೇಕು.
ಆಯ್ಕೆಯಾದಕೃತಿಗಳಿಗೆ ₹ 10 ಸಾವಿರ ನಗದು ಬಹುಮಾನ ನೀಡಲಾಗುವುದು. ಮಾಹಿತಿಗೆ: 08181–277406 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.