ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ (2021–22) ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್ 28ರಿಂದ ಏ. 11ರವರೆಗೆ ನಡೆಯಲಿವೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.
ಇತ್ತೀಚೆಗೆ ಮಂಡಳಿಯು ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳಿದ್ದರೆ ಜ. 14ರ ಒಳಗೆ ಸಲ್ಲಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೂಚಿಸಿತ್ತು. ಆದರೆ, ಆಕ್ಷೇಪಣೆಗಳು ಸಲ್ಲಿಕೆ ಆಗದಿರುವುದರಿಂದ ಅದೇ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಪ್ರಥಮ ಭಾಷೆ ಮತ್ತು ಐಚ್ಚಿಕ ವಿಷಯಗಳ ಪರೀಕ್ಷೆ ಬೆಳಿಗ್ಗೆ 10.30ರಿಂದ 1.45ರವರೆಗೆ ಹಾಗೂ ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆಯ ಪರೀಕ್ಷೆ ಬೆಳಿಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ.
ಎಸ್ಸೆಸ್ಸೆಲ್ಸಿ ವೇಳಾಪಟ್ಟಿ
ದಿನ; ವಿಷಯ
ಮಾರ್ಚ್ 28; ಪ್ರಥಮ ಭಾಷೆ
ಮಾರ್ಚ್ 30; ದ್ವಿತೀಯ ಭಾಷೆ
ಏಪ್ರಿಲ್ 1; ಅರ್ಥಶಾಸ್ತ್ರ
ಏಪ್ರಿಲ್ 4; ಗಣಿತ
ಏಪ್ರಿಲ್ 6; ಸಮಾಜ ವಿಜ್ಞಾನ
ಏಪ್ರಿಲ್ 8; ತೃತೀಯ ಭಾಷೆ
ಏಪ್ರಿಲ್ 11; ವಿಜ್ಞಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.