ADVERTISEMENT

ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ₹400 ಕೋಟಿ ಬಳಕೆ:ಟೆಂಡರ್‌ ಇಲ್ಲದೆ ಸಾಮಗ್ರಿ ಪೂರೈಕೆ

ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರ

ಚಂದ್ರಹಾಸ ಹಿರೇಮಳಲಿ
Published 17 ಜುಲೈ 2024, 20:29 IST
Last Updated 17 ಜುಲೈ 2024, 20:29 IST
   

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರ ₹400 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿದೆ.

ಕರ್ನಾಟಕ ರಾಜ್ಯ ರಾಜೀವ್‌ ಗಾಂಧಿ ವಸತಿ ನಿಗಮದ ಅಧೀನದಲ್ಲಿರುವ ಹ್ಯಾಬಿಟೇಟ್‌ ಕೇಂದ್ರ ನಿಗಮದ ಕೆಲಸಗಳೂ ಸೇರಿ ವಿವಿಧ ಇಲಾಖೆಗಳ ಕೋರಿಕೆಯ ಮೇರೆಗೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತದೆ.  

ಮನೆ, ಕಟ್ಟಡಗಳು, ರಸ್ತೆ ಸೇರಿದಂತೆ ನಿರ್ಮಾಣ ಕಾಮಗಾರಿಗಳನ್ನು ಈ ಕೇಂದ್ರ ನಿರ್ವಹಿಸುತ್ತದೆ. ನವೀನ ಕಟ್ಟಡ ನಿರ್ಮಾಣ ಸಾಮಗ್ರಿಗಳು (ಇನ್ನೊವೇಟಿವ್‌ ಬಿಲ್ಡಿಂಗ್‌ ಮೆಟೀರಿಯಲ್ಸ್‌) ಹಾಗೂ ಅಚ್ಚುಹಾಕಿದ ತಂತ್ರಜ್ಞಾನಗಳನ್ನು (ಪ್ರೀಕಾಸ್ಟ್‌ ಟೆಕ್ನಾಲಜಿ) ಒಳಗೊಂಡ ಕಾಮಗಾರಿಗಳಿಗೆ ₹2 ಕೋಟಿ ಗರಿಷ್ಠ ಮಿತಿಯವರೆಗೆ ಕೆಟಿಪಿಪಿ ಕಾಯ್ದೆ ಅಡಿ 4(ಜಿ) ವಿನಾಯಿತಿ ಪಡೆಯಲು ಆರ್ಥಿಕ ಇಲಾಖೆ ಹ್ಯಾಬಿಟೇಟ್‌ ಕೇಂದ್ರಕ್ಕೆ ಅನುಮೋದನೆ ನೀಡಿದೆ. ಆದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ವಸತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ 2023–24ನೇ ಸಾಲಿನಲ್ಲಿ ₹400 ಕೋಟಿಗೂ ಅಧಿಕ ಮೊತ್ತ ಪಡೆದು, ಟೆಂಡರ್‌ಗಳನ್ನು ಕರೆಯದೆ ಕಾಮಗಾರಿಗಳನ್ನು ಅನುಷ್ಠಾನ ಮಾಡಿದೆ. 

ADVERTISEMENT

ನವೀನ ಕಟ್ಟಡ ನಿರ್ಮಾಣ ಸಾಮಗ್ರಿಗಳು (ಇನ್ನೊವೇಟಿವ್‌ ಬಿಲ್ಡಿಂಗ್‌ ಮೆಟೀರಿಯಲ್ಸ್‌) ಹಾಗೂ ಅಚ್ಚುಹಾಕಿದ ತಂತ್ರಜ್ಞಾನಗಳನ್ನು(ಪ್ರೀಕಾಸ್ಟ್‌ ಟೆಕ್ನಾಲಜಿ) ಒಳಗೊಂಡ ಕಾಮಗಾರಿಗಳಿಗೆ ₹2 ಕೋಟಿ ಗರಿಷ್ಠ ಮಿತಿಯವರೆಗೆ ಕೆಟಿಪಿಪಿ ಕಾಯ್ದೆ ಅಡಿ 4(ಜಿ) ವಿನಾಯಿತಿ ಪಡೆಯಲು ಆರ್ಥಿಕ ಇಲಾಖೆ ಹ್ಯಾಬಿಟೇಟ್‌ ಕೇಂದ್ರಕ್ಕೆ ಅನುಮೋದನೆ ನೀಡಿದೆ. ಆದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ವಸತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ 2023–24ನೇ ಸಾಲಿನಲ್ಲಿ ₹400 ಕೋಟಿಗೂ ಅಧಿಕ ಮೊತ್ತ ಪಡೆದು, ಟೆಂಡರ್‌ಗಳನ್ನು ಕರೆಯದೆ ಕಾಮಗಾರಿಗಳನ್ನು ಅನುಷ್ಠಾನ ಮಾಡಿದೆ. 

ವಿನಾಯಿತಿ ಎರಡಕ್ಕೆ, ಬಳಕೆ ಹತ್ತಾರು: ಆರ್ಥಿಕ ಇಲಾಖೆ ನವೀನ ಕಟ್ಟಡ ಸಾಮಗ್ರಿಗಳು ಹಾಗೂ ಅಚ್ಚುಹಾಕಿದ ತಂತ್ರಜ್ಞಾನಗಳನ್ನು ಒಳಗೊಂಡ ಕಾಮಗಾರಿಗಳನ್ನು ಕೈಗೊಳ್ಳಲು ಹ್ಯಾಬಿಟೇಟ್‌ ಕೇಂದ್ರಕ್ಕೆ ಅನುಮತಿ ನೀಡಿದೆ. ಆದರೆ, ಡಾಂಬರು ರಸ್ತೆ, ಕಾಂಕ್ರೀಟ್‌ ರಸ್ತೆಗಳ ನಿರ್ಮಾಣ, ಶಾಲಾ– ಕಾಲೇಜುಗಳಲ್ಲಿ ಸ್ಮಾರ್ಟ್‌ ತರಗತಿಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕಗಳ ಪೂರೈಕೆ ಸೇರಿದಂತೆ ಹತ್ತು ಹಲವು ಕಾಮಗಾರಿ, ಕಾರ್ಯಗಳನ್ನು ಕೈಗೊಂಡಿದೆ. 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಸರ್ಕಾರ ಒದಗಿಸಿದ್ದ ₹3 ಸಾವಿರ ಕೋಟಿ ಅನುದಾನದಲ್ಲಿ ₹150 ಕೋಟಿ ವಿವೇಚನಾ ನಿಧಿಗೆ ಮೀಸಲಿಡಲಾಗಿತ್ತು.
ಈ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಪೂರೈಸಲು ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕರು ಕಳೆದ ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಿದ್ದಾರೆ.

₹2 ಕೋಟಿ ಗರಿಷ್ಠ ಮಿತಿಯ ಒಳಗಿನ 4(ಜಿ) ವಿನಾಯಿತಿ ಬಳಸಿಕೊಂಡಿರುವ ಹ್ಯಾಬಿಟೇಟ್‌ ಕೇಂದ್ರದ ಅಧಿಕಾರಿಗಳು ಪ್ರತಿ ₹1.99 ಕೋಟಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪೂರೈಸಿದ್ದಾರೆ. ಉದಾ: ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 58 ಶಾಲೆಗಳಿಗೆ ₹1.99 ಕೋಟಿ ಮೊತ್ತದ ಒಂದು ಕ್ರಿಯಾ ಯೋಜನೆ ರೂಪಿಸಿ, ಒಟ್ಟು 260 ಶಾಲೆಗಳಿಗೆ ₹8.95 ಕೋಟಿ ಮೊತ್ತದ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಪೂರೈಸಿದ್ದಾರೆ. ಹಾಗೆಯೇ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ₹250 ಕೋಟಿ ಅನುದಾನದಲ್ಲಿ ಕೈಗೊಡ ಸ್ಮಾರ್ಟ್‌ ತರಗತಿ ಸೇರಿದಂತೆ ಇತರೆ ಕಾಮಗಾರಿ
ಅನುಷ್ಠಾನದಲ್ಲೂ ಇದೇ ಮಾದರಿ
ಅನುಸರಿಸಲಾಗಿದೆ.

ವಿನಾಯಿತಿ ಎರಡಕ್ಕೆ, ಬಳಕೆ ಹತ್ತಾರು:

ಆರ್ಥಿಕ ಇಲಾಖೆ ನವೀನ ಕಟ್ಟಡ ಸಾಮಗ್ರಿಗಳು ಹಾಗೂ ಅಚ್ಚುಹಾಕಿದ ತಂತ್ರಜ್ಞಾನಗಳನ್ನು ಒಳಗೊಂಡ ಕಾಮಗಾರಿಗಳನ್ನು ಕೈಗೊಳ್ಳಲು ಹ್ಯಾಬಿಟೇಟ್‌ ಕೇಂದ್ರಕ್ಕೆ ಅನುಮತಿ ನೀಡಿದೆ. ಆದರೆ, ಡಾಂಬರು ರಸ್ತೆ, ಕಾಂಕ್ರೀಟ್‌ ರಸ್ತೆಗಳ ನಿರ್ಮಾಣ, ಶಾಲಾ– ಕಾಲೇಜುಗಳಲ್ಲಿ ಸ್ಮಾರ್ಟ್‌ ತರಗತಿಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕಗಳ ಪೂರೈಕೆ ಸೇರಿದಂತೆ ಹತ್ತು ಹಲವು ಕಾಮಗಾರಿ, ಕಾರ್ಯಗಳನ್ನು ಕೈಗೊಂಡಿದೆ. 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಸರ್ಕಾರ ಒದಗಿಸಿದ್ದ ₹3 ಸಾವಿರ ಕೋಟಿ ಅನುದಾನದಲ್ಲಿ ₹150 ಕೋಟಿ ವಿವೇಚನಾ ನಿಧಿಗೆ ಮೀಸಲಿಡಲಾಗಿತ್ತು. ಈ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಪೂರೈಸಲು ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕರು ಕಳೆದ ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಿದ್ದಾರೆ.

₹2 ಕೋಟಿ ಗರಿಷ್ಠ ಮಿತಿಯ ಒಳಗಿನ 4(ಜಿ) ವಿನಾಯಿತಿ ಬಳಸಿಕೊಂಡಿರುವ ಹ್ಯಾಬಿಟೇಟ್‌ ಕೇಂದ್ರದ ಅಧಿಕಾರಿಗಳು ಪ್ರತಿ ₹1.99 ಕೋಟಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪೂರೈಸಿದ್ದಾರೆ. ಉದಾ: ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 58 ಶಾಲೆಗಳಿಗೆ ₹1.99 ಕೋಟಿ ಮೊತ್ತದ ಒಂದು ಕ್ರಿಯಾ ಯೋಜನೆ ರೂಪಿಸಿ, ಒಟ್ಟು 260 ಶಾಲೆಗಳಿಗೆ ₹8.95 ಕೋಟಿ ಮೊತ್ತದ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಪೂರೈಸಿದ್ದಾರೆ. ಹಾಗೆಯೇ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ  ₹250 ಕೋಟಿ ಅನುದಾನದಲ್ಲಿ ಕೈಗೊಡ ಸ್ಮಾರ್ಟ್‌ ತರಗತಿ ಸೇರಿದಂತೆ ಇತರೆ ಕಾಮಗಾರಿ ಅನುಷ್ಠಾನದಲ್ಲೂ ಇದೇ ಮಾದರಿ ಅನುಸರಿಸಲಾಗಿದೆ.

ಒಂದು ಯಂತ್ರಕ್ಕೆ ₹3.43 ಲಕ್ಷ

ಕೆಕೆಆರ್‌ಡಿಬಿ ಅನುದಾನ ಬಳಸಿಕೊಂಡು ಹ್ಯಾಬಿಟೇಟ್‌ ಕೇಂದ್ರ
ಶಾಲೆಗಳಿಗೆ ಪೂರೈಸಿರುವ ಪ್ರತೀ ಶುದ್ಧ ಕುಡಿಯುವ ನೀರಿನ ಘಟಕದ ಬೆಲೆ ₹3.43 ಲಕ್ಷ. ಮಾರುಕಟ್ಟೆ ದರಕ್ಕೂ, ಖರೀದಿ ದರಕ್ಕೂ ಅಜಗಜಾಂತರವಿದೆ. ಸ್ಮಾರ್ಟ್‌ ತರಗತಿಗಳಿಗೆ ಅಗತ್ಯವಾದ ಸಾಮಗ್ರಿಗಳ ಪೂರೈಕೆ ಸೇರಿದಂತೆ ಎಲ್ಲದರಲ್ಲೂ ಅವ್ಯವಹಾರ ನಡೆದಿದೆ. 4 (ಜಿ) ವಿನಾಯತಿ ದುರ್ಬಳಕೆ ಮಾಡಿಕೊಂಡು, ಟೆಂಡರ್‌ ಕರೆಯದೇ ನೇರವಾಗಿ ಸಾಮಗ್ರಿಗಳನ್ನು ಖರೀದಿ ಮಾಡಿರುವುದು ಅವ್ಯವಹಾರಕ್ಕೆ ದಾರಿಯಾಗಿದೆ. ಸರ್ಕಾರ ಇದಕ್ಕೆ ಕಾರಣರಾದ ಹ್ಯಾಬಿಟೇಟ್‌ ಕೇಂದ್ರದ ನಿರ್ದೇಶಕರು, ಯೋಜನಾ ನಿರ್ದೇಶಕರು ಹಾಗೂ ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಿಖೆಗೆ ಆದೇಶಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಾಗೇಶ್ ಒತ್ತಾಯಿಸಿದ್ದಾರೆ. 

ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಯಾವುದೇ ಅನುಷ್ಠಾನದಲ್ಲೂ ಲೋಪವಾಗಿಲ್ಲ, ಅವ್ಯವಹಾರ ನಡೆದಿಲ್ಲ. ನಿಯಮದಂತೆ ಕ್ರಮವಹಿಸಲಾಗಿದೆ
–ಎನ್‌. ಸುಶೀಲಮ್ಮ, ವ್ಯವಸ್ಥಾಪಕ ನಿರ್ದೇಶಕಿ, ರಾಜೀವ್ ಗಾಂಧಿ ವಸತಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.